ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಹೊಸ ದಾಖಲೆ: ಇಂಟರ್ ನ್ಯಾಷನಲ್ ಪ್ರೆಸ್ ಮೀಟ್ ಪ್ಲಾನ್!
ಸ್ಯಾಂಡಲ್‌ವುಡ್ ಮಾರ್ಟಿನ್ ಸಿನಿಮಾ ನ್ಯಾಷನಲ್ ಪ್ರೆಸ್ ಮೀಟ್ ಮಾಡುತ್ತಿದೆ. ಮೊದಲೆಲ್ಲ ನ್ಯಾಷನಲ್ ಪ್ರೆಸ್ ಮೀಟ್ ಮಾಡೋದೇ ಒಂದು ದೊಡ್ಡ ಸಾಧನೆ ಆಗಿತ್ತು. ಕನ್ನಡದ ಕೆಜಿಎಫ್ ಚಿತ್ರ ಬಂದ್ಮೇಲೆ ನ್ಯಾಷನಲ್ ಪ್ರೆಸ್ಮೀಟ್ಗಳು ಶುರು ಆಗಿದ್ದವು.
ಸ್ಯಾಂಡಲ್‌ವುಡ್ ಮಾರ್ಟಿನ್ ಸಿನಿಮಾ ನ್ಯಾಷನಲ್ ಪ್ರೆಸ್ ಮೀಟ್ ಮಾಡುತ್ತಿದೆ. ಮೊದಲೆಲ್ಲ ನ್ಯಾಷನಲ್ ಪ್ರೆಸ್ ಮೀಟ್ ಮಾಡೋದೇ ಒಂದು ದೊಡ್ಡ ಸಾಧನೆ ಆಗಿತ್ತು. ಕನ್ನಡದ ಕೆಜಿಎಫ್ ಚಿತ್ರ ಬಂದ್ಮೇಲೆ ನ್ಯಾಷನಲ್ ಪ್ರೆಸ್ಮೀಟ್ಗಳು ಶುರು ಆಗಿದ್ದವು. ಬಾಲಿವುಡ್ನಲ್ಲಿ ಈ ಒಂದು ಅಭ್ಯಾಸ ಮೊದಲೇ ಇದ್ದೇ ಇತ್ತು ಬಿಡಿ. ಆದರೆ, ಇದೀಗ ಕನ್ನಡದ ಮಾರ್ಟಿನ್ ಫಸ್ಟ್ ಟೈಮ್ ಒಂದು ಇಂಟರ್ನ್ಯಾಷನಲ್ ಪ್ರೆಸ್ ಮೀಟ್ ಮಾಡುತ್ತಿದೆ. ಆಗಸ್ಟ್-5 ರಂದು ಮುಂಬೈಯಲ್ಲಿ ಪ್ರೆಸ್ ಮೀಟ್ ಆಯೋಜನೆ ಆಗಿದೆ. ಇಲ್ಲಿ 21 ಭಾಷೆಯ 27 ಪತ್ರಕರ್ತರು ಆಗಮಿಸುತ್ತಿದ್ದಾರೆ. ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಮಾರ್ಟಿನ್ ಅಕ್ಟೋಬರ್ 11 ರಂದು ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನು ಜಗತ್ತಿನಾದ್ಯಂತ ಒಂದೇ ದಿನದಲ್ಲಿ 13 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಎ.ಪಿ.ಅರ್ಜುನ್ ನಿರ್ದೇಶನದ ಈ ಚಿತ್ರದ ಟ್ರೈಲರ್ 1 ರಿಲೀಸ್ ಮಾಡಲು ನಿಗದಿ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೈಲರ್ 1 ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಕನ್ನಡದ ಮಾರ್ಟಿನ್ ಚಿತ್ರದ ಟ್ರೈಲರ್ 13 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಮಾರ್ಟಿನ್ ಪ್ರೆಸ್ ಮೀಟ್ ಮುಂಬೈಯಲ್ಲಿ ಪ್ಲಾನ್ ಆಗಿದೆ. ಇದೇ ಆಗಸ್ಟ್ 5 ರಂದು ಈ ಪ್ರೆಸ್ ಮೀಟ್ ನಡೆಯುತ್ತಿದೆ. ಇದರಲ್ಲಿ ದೂರದ ಅಮೆರಿಕಾ, ಕೊರಿಯಾ, ಜಪಾನ್, ರಷ್ಯಾ, ಇಂಗ್ಲೆಂಡ್, ದುಬೈ ಹಿಂಗೆ 21 ದೇಶದ ಪತ್ರಕರ್ತರು ಈ ಪ್ರೆಸ್ ಮೀಟ್‌ಗೆ ಆಗಮಿಸುತ್ತಿದ್ದಾರೆ.
ಇವರ ಸಮ್ಮುಖದಲ್ಲಿಯೇ ಸಂಜೆ 5.55 ಕ್ಕೆ ಮಾರ್ಟಿನ್ ಚಿತ್ರ ಮೊದಲ ಟ್ರೈಲರ್ ರಿಲೀಸ್ ಆಗುತ್ತಿದೆ. ಇಂಗ್ಲೀಷ್, ರಷ್ಯಾ, ಕೊರಿಯಾ, ಅರೇಬಿಕ್, ಬಂಗಾಲಿ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹೀಗೆ 13 ಭಾಷೆಯಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.ಪ್ಯಾನ್ ಇಂಡಿಯಾ ಅಂದ್ರೆ ಇದಪ್ಪ ಅನ್ನುವ ಮಟ್ಟಿಗೆ ಎಲ್ಲ ಭಾಷೆಯಲ್ಲೂ ಟ್ರೈಲರ್ ಬರ್ತಿದೆ. ಇದನ್ನ ನೋಡಲಿಕ್ಕೆ 21 ದೇಶದ 27 ಪತ್ರಕರ್ತರು ಬರುತ್ತಿದ್ದಾರೆ. ಹಾಗಾಗಿಯೇ ಮಾರ್ಟಿನ್ ಚಿತ್ರದಿಂದ ಇಂಟರ್ನ್ಯಾಷನಲ್ ಪ್ರೆಸ್‌ಮೀಟ್ ಟ್ರೆಂಡ್ ಶುರು ಆಗುತ್ತಿದೆ.
ಆಗಸ್ಟ್ 4ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಹಾಗೂ ಆಗಸ್ಟ್ 5ರಂದು ಮುಂಬೈನಲ್ಲಿ ಟ್ರೈಲರ್ 1 ರಿಲೀಸ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ಮೊದಲು ಪ್ಯಾನ್-ಇಂಡಿಯಾ ಚಲನಚಿತ್ರಗಳು 3 ರಿಂದ 6 ತಿಂಗಳ ನಂತರ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದವು, ನಾವು ಚಲನಚಿತ್ರದ ಜಾಗತಿಕ ಮಹತ್ವಾಕಾಂಕ್ಷೆಗಳನ್ನುಅರ್ಥಮಾಡಿಕೊಂಡಿದ್ದು ಬಹು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ, ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೊದಲನೆಯದಾಗಿದೆ.
ಮಾರ್ಟಿನ್‌ನಲ್ಲಿ ಧ್ರುವ ಸರ್ಜಾ ಹೀರೋನಾ ವಿಲನ್ನಾ?: ಕೆಜಿಎಫ್ ದಾಖಲೆ ಮುರಿಯುತ್ತಾ ಪ್ಯಾನ್ ಇಂಡಿಯಾ ಸಿನಿಮಾ?
ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಆಕರ್ಷಿಸುವ ಮಾರ್ಟಿನ್ ನಿರೀಕ್ಷೆಯ ಬಗ್ಗೆ ಧ್ರುವ ಸರ್ಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಇಂದು, ಎಲ್ಲಾ ಇತರ ಚಲನಚಿತ್ರಗಳು ಪ್ಯಾನ್-ಇಂಡಿಯಾ ಆಗಿವೆ, ಮತ್ತು ಮಾರ್ಟಿನ್ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತಿದೆ" ಎಂದುಹೇಳಿದ್ದಾರೆ. ಭಾಷಾ ಅಡೆತಡೆಗಳನ್ನು ಮೀರಿದ ಸಿನಿಮಾವಾಗಿದೆ ಎಂದಿದ್ದಾರೆ. ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ಚಿತ್ರದಲ್ಲಿ ನಟಿಸಿದ್ದಾರೆ, ಮಾರ್ಟಿನ್ ಸಿನಿಮಾದೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.