ಧ್ರುವ ನಟನೆಯ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಡೇಟ್ ಬಹಿರಂಗವಾಗಿದೆ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಸಿನಿಮಾದ ಬಗ್ಗೆ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಸಿನಿಮಾತಂಡ ಬಳಿಕ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಹಾಗಾಗಿ ಧ್ರುವ ಅಭಿಮಾನಿಗಳು ಮಾರ್ಟಿನ್ ಅಪ್ ಡೇಟ್ ಗಾಗಿ ಕಾಯುತ್ತಿದ್ದರು. ಇದೀಗ ಚಿತ್ರತಂಡ ಭರ್ಜರಿ ಸುದ್ದಿ ನೀಡಿದೆ. ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಕುತೂಹಲ ಹೆಚ್ಚಿಸಿದೆ. 

ಆಕ್ಷನ್ ಪ್ರಿನ್ಸ್ ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಫೆಬ್ರವರಿ 23ಕ್ಕೆ ಮಾರ್ಟಿನ್ ಟೀಸರ್ ರಿಲೀಸ್ ಆಗುತ್ತಿದೆ ಎಂದು ಸಿನಿಮಾತಂಡ ಅನೌನ್ಸ್ ಮಾಡಿದೆ. ಮಾರ್ಟಿನ್ ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ, ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟೀಸರ್ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮಾರ್ಟಿನ್ ನಿರ್ದೇಶಕ ಎಪಿ ಅರ್ಜುನ್ ಸಾರಥ್ಯದಲ್ಲಿ ಬರ್ತಿರುವ ಸಿನಿಮಾವಾಗಿದೆ. ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಎರಡನೇ ಸಿನಿಮಾ. ಧ್ರುವ ಸರ್ಜಾ ಚೊಚ್ಚಲ ಚಿತ್ರ 'ಅದ್ದೂರಿ'ಗೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಧ್ರುವ-ಅರ್ಜುನ್ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

'ಕೆಡಿ' ಚಿತ್ರ ತಂಡದ ಜತೆ ಸಂಜಯ್ ದತ್ ಪಾರ್ಟಿ: ಧ್ರುವ ಸರ್ಜಾ ಗೈರಾಗಿದ್ದು ಯಾಕೆ?

‘ಮಾರ್ಟಿನ್​’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹೊಸ ರಿಲೀಸ್ ದಿನಾಂಕ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ವೈಭವಿ ಶಾಂಡಿಲ್ಯ ಅವರು ‘ಮಾರ್ಟಿನ್​’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈಗಾಗಲೇ ರಿಲೀಸ್ ಆಗಿ ವೈರಲ್ ಆಗಿರುವ ಮಾರ್ಟಿನ್ ಲುಕ್‌ನಲ್ಲಿ ಧ್ರುವ ಮಾಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಗ್ಯಾಂಗ್ ಸ್ಟರ್ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ ಈ ಸಿನಿಮಾದಲ್ಲಿ ರೋಚಕ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿದ್ದಾರೆ.

Scroll to load tweet…

'ಕೆಡಿ' ಅಡ್ಡಕ್ಕೆ ಬಂದ ಸಂಜಯ್ ದತ್: 'ಅಧೀರ'ನ ಗ್ರ್ಯಾಂಡ್ ಎಂಟ್ರಿ ಹೇಗಿರಲಿದೆ ಗೊತ್ತಾ?

ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರೀಕರಣ ವಿಳಂಬವಾದ ಕಾರಣ ರಿಲೀಸ್ ಮುಂದಕ್ಕೆ ಹೋಗಿದೆ. ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಧ್ರುವ ಕೊನೆಯದಾಗಿ ಪೊಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪೊಗರು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಇದೀಗ ಮಾರ್ಟಿನ್ ಹೇಗೆ ಸದ್ದು ಮಾಡಲಿದೆ ಎಂದು ಕಾದುನೋಡಬೇಕಿದೆ.