ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಪೊಗರು' ಚಿತ್ರದ ನಂತರ 'ಮಾರ್ಟಿನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದು, ಇದೀಗ ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ.
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಪೊಗರು' (Pogaru) ಚಿತ್ರದ ನಂತರ 'ಮಾರ್ಟಿನ್' (Martin) ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ (AP Arjun) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರತಂಡ ಟೈಟಲ್ ಟೀಸರ್ (Title Teaser) ಬಿಟ್ಟರೆ ಚಿತ್ರದ ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಇದೀಗ 'ಮಾರ್ಟಿನ್' ಚಿತ್ರತಂಡದಿಂದ ಸ್ಪೆಷಲ್ ಮಾಹಿತಿಯೊಂದು ಬಹಿರಂಗವಾಗಿದೆ. ಆರು ತಿಂಗಳ ಹಿಂದೆ 'ಮಾರ್ಟಿನ್' ಚಿತ್ರದ ಟೈಟಲ್ ಟೀಸರ್ ಬಿಟ್ಟಿದ್ದ ರಿಲೀಸ್ ಮಾಡಿದ್ದ ಧ್ರುವ ಸರ್ಜಾ ಅನಂತರ ಯಾಕೆ ಸೈಲೆಂಟ್ ಆಗಿಬಿಟ್ಟರು ಅಂತಾ ಅವರ ಅಭಿಮಾನಿಗಳು ಯೋಚಿಸುತ್ತಿದ್ದರು.
ನಿಜಕ್ಕೂ 'ಮಾರ್ಟಿನ್' ಸೈಲೆಂಟ್ ಆಗಿರಲಿಲ್ಲ. ಸೈಲೆಂಟ್ ಆಗಿಯೇ ತಮ್ಮ ಕೆಲಸ ಮಾಡುತ್ತಿದ್ದು, ಇದೀಗ ಚಿತ್ರವು ಆಲ್ಮೋಸ್ಟ್ ಕೊನೆಯ ಹಂತದ ಶೂಟಿಂಗ್‌ಗೆ ಬಂದಿದೆಯಂತೆ. ಹೌದು! ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಬರುತ್ತಿರುವ 'ಮಾರ್ಟಿನ್' ಹೈ ಬಜೆಟ್ನಲ್ಲಿ ರೆಡಿಯಾಗುತ್ತಿದ್ದು, ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ ಬಹಳ ರಿಚ್ ಆಗಿ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರದ ಕಥೆ ಡಿಮ್ಯಾಂಡ್ ಮಾಡಿದನ್ನು ತೆರೆ ಮೇಲೆ ತರೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಅರ್ಜುನ್. ಪ್ಲಾನ್ ಪ್ರಕಾರ ಚಿತ್ರೀಕರಣ ಮಾಡುತ್ತಿರುವ ಎಪಿ ಅರ್ಜುನ್, ಈಗ 'ಮಾರ್ಟಿನ್' ಸಿನಿಮಾವನ್ನು ಕೊನೆಯ ಹಂತಕ್ಕೆ ತೆಗೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Dhruva Sarja: ಮಾರ್ಟಿನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದ ಆಕ್ಷನ್ ಪ್ರಿನ್ಸ್
'ಮಾರ್ಟಿನ್' ಚಿತ್ರದ ಆ್ಯಕ್ಷನ್ ಸೀನ್ಗಳಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದ್ದು, ಈಗಾಗಲೇ ಬೆಂಗಳೂರು, ಪಾಂಡಿಚೇರಿಯಲ್ಲಿ ಶೂಟ್ ಮಾಡಿರುವ 'ಮಾರ್ಟಿನ್' ಚಿತ್ರತಂಡ ಈಗ ಕೊನೆಯ ಹಂತದ ಶೂಟಿಂಗ್‌ಗಾಗಿ ಇಂಡಿಯಾದ ಸ್ವಿಜರ್ಲೆಂಡ್ ಎನಿಸಿಕೊಂಡಿರೋ ಕಾಶ್ಮೀರಕ್ಕೆ ಹಾರಿದೆ. 'ಮಾರ್ಟಿನ್' ಕೊನೆಯ ಶೆಡ್ಯೂಲ್ಗಾಗಿ ಮಾರ್ಚ್ 7ರಂದು ಹಿಮದನಗರ ಕಾಶ್ಮೀರಕ್ಕೆ ಚಿತ್ರತಂಡ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ 'ಮಾರ್ಟಿನ್' ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಿರ್ದೇಶಕ ಅರ್ಜುನ್, ಧ್ರುವ ಸರ್ಜಾ ಹಾಗೂ ನಾಯಕಿ ವೈಭವಿ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದು, ಕೆಲವು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 
ಇನ್ನು ಕೇವಲ 30 ದಿನಗಳ ಶೂಟಿಂಗ್ ಬಾಕಿ ಇದ್ದು, ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಲು 'ಮಾರ್ಟಿನ್' ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಮರಾಠಿ ಬೆಡಗಿ ವೈಭವಿ ಶಾಂಡಿಲ್ಯ (Vaibhavi Shandilya) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ 'ಮಾರ್ಟಿನ್' ಸಿನಿಮಾ ಕಾಲೇಜ್ ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದ್ದು, ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
Dhruva Sarja: ಮಂತ್ರಾಲಯಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದ ಆಕ್ಷನ್ ಪ್ರಿನ್ಸ್!
ಪಕ್ಕಾ ಆ್ಯಕ್ಷನ್ ಥ್ರಿಲ್ಲರ್‌ನ ಈ ಚಿತ್ರದ ನಾಲ್ಕೈದು ನಿಮಿಷದ ಕಾರ್ ಚೇಸಿಂಗ್ ದೃಶ್ಯವೊಂದಕ್ಕೆ ಚಿತ್ರತಂಡ ಬರೋಬ್ಬರಿ 3 ಕೋಟಿ ಖರ್ಚು ಮಾಡಿದ್ದು, ಧ್ರುವ ಈ ಸೀನ್‌ನಲ್ಲಿ ಭರ್ಜರಿಯಾಗಿ ಸ್ಟಂಟ್ ಕೂಡಾ ಮಾಡಿದ್ದಾರೆ. 'ಮಾರ್ಟಿನ್' ಸಿನಿಮಾದ ಮೈ ಜುಮ್ ಅನ್ನಿಸೋ ಚೇಸಿಂಗ್ ದೃಶ್ಯಕ್ಕೆ ದಕ್ಷಿಣ ಚಿತ್ರರಂಗದ ಫೇಮಸ್ ಫೈಟ್ ಮಾಸ್ಟರ್ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದು, 15 ಲಕ್ಷದಿಂದ ಒಂದು ಕೋಟಿ ಬೆಲೆಬಾಳುವ ಕಾರ್ ಬಳಸಿ ಚೇಸಿಂಗ್ ಸೀನ್‌ಗಳನ್ನು ಶೂಟಿಂಗ್ ಮಾಡಲಾಗಿದೆಯಂತೆ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕಾರ್ ಚೇಸಿಂಗ್ ಸೀನ್‌ನ್ನು ರವಿವರ್ಮ ಅವರು ಕಂಪೋಸ್ ಮಾಡಿದ್ದಾರೆ. ಉದಯ್ ಕೆ.ಮೆಹ್ತಾ (Uday K.Mehta) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
