ಸದ್ಯಕ್ಕೆ ಮೇಲಿನ ಎರಡೂ ಉತ್ತರಗಳು ಕೇಳಿ ಬರುತ್ತಿವೆ. ಇನ್ನು 20 ದಿನಗಳಲ್ಲಿ ಮೊದಲ ಪ್ರತಿ ಹೊರಬರಲಿದೆ. ಬಿಡುಗಡೆಗೆ ಬೇಕಾದ ಎಲ್ಲಾ ತಯಾರಿಗಳು ಮುಗಿದಿವೆ.

ಆದರೂ ಚಿತ್ರತಂಡ ಎರಡು ಉತ್ತರಗಳನ್ನು ಯಾಕೆ ಕೊಡುತ್ತಿದೆ?

ಸ್ಟಾರ್ ವಾರ್ ಇಲ್ಲ ಅಂತಾನೇ ಶುರುವಾಯ್ತು ಬಿಗ್ ಫೈಟ್; ಬರ್ತಿದ್ದಾರೆ 3 ಸ್ಟಾರ್ಸ್! 

‘ಕೋವಿಡ್‌ 19 ನಿಯಮಗಳನ್ನು ಪಾಲಿಸಿಕೊಂಡು ಚಿತ್ರ ಬಿಡುಗಡೆ ಮಾಡಬೇಕು ಎಂಬುದು. ಜತೆಗೆ ಕೇವಲ ಶೇ.50ರಷ್ಟುಮಾತ್ರ ಸೀಟು ಭರ್ತಿ ಮಾಡಿಕೊಳ್ಳಬೇಕು ಎನ್ನುವ ನಿಯಮ. ಸಾಮಾಜಿಕ ಅಂತ ಹೊರಗೆ ಯಾರೂ ಪಾಲಿಸುತ್ತಿಲ್ಲ. ಆದರೆ, ಥಿಯೇಟರ್‌ಗಳಿಗೆ ಮಾತ್ರ ಯಾಕೆ ಎಂಬುದು ಗೊತ್ತಿಲ್ಲ. 100 ಸೀಟು ಇದ್ದ ಕಡೆ 50 ಸೀಟುಗಳಿಗೆ ಮಾತ್ರ ಭರ್ತಿ ಮಾಡಿಕೊಳ್ಳಬೇಕು ಎಂಬುದು ಚಿತ್ರಕ್ಕೆ ಆರ್ಥಿಕವಾಗಿ ನಷ್ಟಆಗುತ್ತದೆ. ಈ ನಿಯಮ ಸಡಿಲ ಆಗುತ್ತದೆ ಎಂಬುದನ್ನು ಕಾಯುತ್ತಿದ್ದೇವೆ. ಈ ಕಾರಣಗಳಿಗೆ ಎರಡು ಡೇಟ್‌ಗಳನ್ನು ಅನೌನ್ಸ್‌ ಮಾಡಿಕೊಂಡಿದ್ದೇವೆ. ಡಿ.25 ಅಥವಾ ಜ.1ರಂದು ತೆರೆಗೆ ಬರುವುದಂತೂ ಪಕ್ಕಾ’ ಎನ್ನುತ್ತಾರೆ ನಿರ್ದೇಶಕ ನಂದ ಕಿಶೋರ್‌.

ಥೇಟರ್‌ ಪೂರ್ತಿ ಜನ ಬರುವ ಅವಕಾಶ ಸಿಕ್ಕರೆ ಪೊಗರು ಎಂಟ್ರಿ

ಅಲ್ಲಿಗೆ ಸಿನಿಮಾ ಪ್ರದರ್ಶನಕ್ಕೆ ಅನ್ವಯ ಆಗುವ ಕೋವಿಡ್‌ 19 ಮಾರ್ಗಸೂಚಿಗಳಲ್ಲಿ ಏನಾದರು ಬದಲಾವಣೆ ಆಗುತ್ತದೆಯೇ ಎಂಬುದನ್ನು ಕಾದು ನೋಡುವ ದೃಷ್ಟಿಯಿಂದ ಈಗಲೇ ಯಾವುದಾದರೂ ಒಂದು ದಿನಾಂಕವನ್ನು ಫೈನಲ್‌ ಮಾಡಿಕೊಳ್ಳುತ್ತಿಲ್ಲ ಚಿತ್ರತಂಡ. ಒಂದು ವೇಳೆ ಜನವರಿ ತಿಂಗಳ ಹೊತ್ತಿಗೆ ಎಲ್ಲವೂ ಸರಿ ಹೋಗುತ್ತದೆ. ಎಂದಿನಂತೆ ಚಿತ್ರಮಂದಿರದ ಎಲ್ಲ ಸೀಟು ಭರ್ತಿ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ಸಿಕ್ಕರೆ ‘ಪೊಗರು’ ಜನವರಿ 1ಕ್ಕೆ ತೆರೆಗೆ ಬರಲಿದೆ. ಒಂದೇ ವೇಳೆ ಜನವರಿಯಲ್ಲೂ ಇದೇ ಸ್ಥಿತಿ ಮುಂದುವರಿಯಲಿದೆ ಎನಿಸಿದರೆ ಡಿ.25ಕ್ಕೇ ಚಿತ್ರ ತೆರೆಗೆ ಬರಲಿದೆ. ಒಟ್ಟಿನಲ್ಲಿ ಮುಂದಿನ ತಿಂಗಳು ಅಥವಾ ಮುಂದಿನ ವರ್ಷದ ಮೊದಲ ತಿಂಗಳ, ಮೊದಲ ವಾರದಲ್ಲಿ ‘ಪೊಗರು’ ಹವಾ ಗ್ಯಾರಂಟಿ.

ವೈರಲ್ ಆಯ್ತು ಧ್ರುವ ಸರ್ಜಾ ವರ್ಕೌಟ್‌ ವಿಡಿಯೋ!