ತಾರಾ​ಮೆ​ರ​ಗು: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಪವಿತ್ರಾ ಲೋಕೇಶ್‌, ರವಿ​ಶಂಕರ್‌, ಸಂಪತ್‌, ಡಾಲಿ ಧನಂಜಯ್‌, ಕರಿ​ಸುಬ್ಬು, ಕುರಿ ಪ್ರತಾಪ್‌, ರಾಘ​ವೇಂದ್ರ ರಾಜ್‌​ಕು​ಮಾರ್‌, ತಾರಾ, ಗಿರಿಜಾ ಲೋಕೇಶ್‌, ಚಿಕಣ್ಣ, ತಬಲಾ ನಾಣಿ, ಧರ್ಮ ಸೇರಿ​ದಂತೆ 100ಕ್ಕೂ ಹೆಚ್ಚು ಪ್ರಮುಖ ಪಾತ್ರ​ಧಾ​ರಿ​ಗಳು ತೆರೆ ಮೇಲೆ ಬರು​ತ್ತಾರೆ.

ಪೊಗರದಸ್ತಾಗಿದೆ ಧ್ರುವಾ ಸರ್ಜಾ 'ಪೊಗರು' ಡೈಲಾಗ್!

ಶೂಟಿಂಗ್‌ ಸ್ಪಾಟ್‌: ಬಿ ಕೆ ಗಂಗಾ​ಧರ್‌ ನಿರ್ಮಾ​ಣದ ಈ ಚಿತ್ರದ ಪ್ರತಿ ದಿನ ಶೂಟಿಂಗ್‌ ಸ್ಪಾಟ್‌​ನಲ್ಲಿ 700ಕ್ಕೂ ಹೆಚ್ಚು ಜನ ಇರು​ತ್ತಿ​ದ್ದರು. ಒಂದೊಂದು ದಿನ ಒಂದು ಸಾವಿರ ಮಂದಿಯೊಂದಿಗೆ ಶೂಟಿಂಗ್‌ ಮಾಡಿ​ಕೊಂಡ ಹೆಗ್ಗ​ಳಿಕೆ ‘ಪೊಗ​ರು’ ಚಿತ್ರದ್ದು. ವಿಶೇ​ಷ​ವಾಗಿ ನಿರ್ಮಿ​ಸ​ಲಾ​ಗಿ​ದ್ದ ಅಂಜ​ನೇ​ಯನ ಬೃಹತ್‌ ಮೂರ್ತಿ ಚಿತ್ರೀ​ಕ​ರಣ ಸೆಟ್‌ನ ಹೈಲೈಟ್‌.

"

ವಿಶೇಷ ಅಂದರೆ ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ಹೆಸರು ಮಾಡಿದ ನಾಲ್ಕು ಮಂದಿ ಬಾಡಿ ಬಿಲ್ಡ​ರ್‌​ಗಳು ಈ ಚಿತ್ರ​ದಲ್ಲಿ ನಟಿ​ಸಿ​ರು​ವುದು. ಅಮೆ​ರಿಕ ಕಾಯ್‌ ಗ್ರೀನ್‌, ಪ್ರಾನ್ಸ್‌ ಮಾರ್ಗ​ನ್‌ ಅಸ್ಟೇ, ದಕ್ಷಿಣ ಆಫ್ರಿ​ಕಾ​ದ ಜಾನ್‌ ಲುಕ್ಸ್‌, ಜರ್ಮ​ನಿಯ ಜೋ ಲೀಡ​ನ್‌ ಅವರು ಚಿತ್ರದ ಖಡಕ್‌ ಫೈಟ​ರ್‌​ಗಳು. ಇವ​ರಿಗೆ ತಕ್ಕಂತೆ ಗಣೇಶ್‌ ಹಾಗೂ ಅನಲ್‌ ಅರಸ್‌ ಸಾಹಸ ಸಂಯೋ​ಜನೆ ತುಂಬಾ ರೋಚ​ಕ​ವಾ​ಗಿದೆ.

ಪ್ರತಿ ದಿನ ಶೂಟಿಂಗ್‌ ಸೆಟ್‌​ನಲ್ಲಿ ತುಂಬಾ ಪಾಸಿಟಿವ್‌ ಆಗಿದ್ವಿ. ಅದಕ್ಕೆ ಕಾರಣ ಅಂದು​ಕೊಂಡಂತೆ ಪ್ರತಿ ದಿನ ಬೆಳಗ್ಗೆ ಸರಿ​ಯಾದ ಸಮ​ಯಕ್ಕೆ ಶೂಟಿಂಗ್‌ ಶುರು​ವಾ​ಗು​ತ್ತಿತ್ತು. ಚಿತ್ರದ ಹೆಸರು, ಧ್ರುವ ಸರ್ಜಾ ಅವರ ಲುಕ್‌, ನನ್ನ ನಿರ್ದೇ​ಶನ ತಂಡ​ದ​ಲ್ಲಿದ್ದ 7 ಮಂದಿಯ ಶ್ರಮ ನನಗೆ ಹೆಚ್ಚು ಭರ​ವಸೆ ಮೂಡಿ​ಸಿವೆ.- ನಂದಕಿಶೋರ್‌

ಯಾವಾಗ ತೆರೆಗೆ ಬರು​ತ್ತೆ?: ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರ​.