ಹಿರಿಯ ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌ ಮತ್ತೆ ಬಂದಿದ್ದಾರೆ. ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ಚಿತ್ರಗಳ ನೆರಳಿನಲ್ಲೇ ಸಾಗುತ್ತಿರುವ ವೇಮಗಲ್‌ ಅವರ ಟ್ರಂಪ್‌ಕಾರ್ಡ್‌ ‘ತುಳಸಿದಳ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಹಿರಿಯ ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌ ಮತ್ತೆ ಬಂದಿದ್ದಾರೆ. ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ಚಿತ್ರಗಳ ನೆರಳಿನಲ್ಲೇ ಸಾಗುತ್ತಿರುವ ವೇಮಗಲ್‌ ಅವರ ಟ್ರಂಪ್‌ಕಾರ್ಡ್‌ ‘ತುಳಸಿದಳ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆಗಾಗ ಸಿನಿಮಾ ಮಾಡುತ್ತಲೇ ಇರುವ ಈ ಹಿರಿಯ ನಿರ್ದೇಶಕರು ಈಗ ‘ನನ್ನ ಹುಡುಕಿ ಕೊಡಿ’ ಎನ್ನುತ್ತಿದ್ದಾರೆ. ಇದು ಅವರ ಹೊಸ ಚಿತ್ರದ ಹೆಸರು. ಮೊನ್ನೆಯಷ್ಟೆಚಿತ್ರಕ್ಕೆ ಮುಹೂರ್ತ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್‌ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟರು. ಧನ್ವಿತ್‌ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಮೀನಾಕ್ಷಿ ಜೈಸ್ವಾಲ್‌ ಹಾಗೂ ಸಾಯಿ ನಯನ ಚಿತ್ರದ ನಾಯಕಿಯರು.

ನಟ ಧನ್ವಿತ್‌ ಈ ಹಿಂದೆ ವೇಮಗಲ್‌ ನಿರ್ದೇಶನದ ‘ಆವರ್ತ’ ಚಿತ್ರದಲ್ಲಿ ಒಂದು ಪುಟ್ಟಪಾತ್ರ ಮಾಡಿದ್ದರಂತೆ. ಈಗ ಅವರ ನಿರ್ದೇಶನದಲ್ಲಿ ಹೀರೋ ಆಗುತ್ತಿದ್ದಾರೆ. ‘ನನ್ನದೇ ಧನ್ವಿತ್‌ ಫಿಲಂ ಫ್ಯಾಕ್ಟರಿ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದೇನೆ. ಕತೆ ಪೂರ್ತಿ ಕೇಳಿಲ್ಲ. ನಿರ್ದೇಶಕರ ಮೇಲೆ ನಂಬಿಕೆ ಇದೆ. ಒಂದು ಸಾಲಿನ ಕತೆ ಕೇಳಿ ಈ ಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡೆ’ ಎಂದರು ಧನ್ವಿತ್‌. ‘ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಯ ಸಿನಿಮಾ. ಮುಂದಿನವಾರದಿಂದ ಚಿತ್ರೀಕರಣ ಆರಂಭಿಸುತ್ತೇವೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ’ ಎಂದು ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌ ಹೇಳಿಕೊಂಡರು. ಸೂರ್ಯಕಾಂತ್‌ ಅವರ ಕ್ಯಾಮೆರಾ ಚಿತ್ರಕ್ಕಿದೆ. ಭಾ ಮ ಹರೀಶ್‌ ಚಿತ್ರತಂಡಕ್ಕೆ ಶುಭ ಕೋರಿದರು.

ದೃಶ್ಯಂ-1, 2 ಆಯ್ತು ಈಗ ಪಾರ್ಟ್ 3; ಜಾರ್ಜ್‌ಕುಟ್ಟಿ ಎಂಟ್ರಿ ಕನ್ಫರ್ಮ್ ಎಂದ ನಿರ್ಮಾಪಕ

ನಾನು ಮೂಲತಃ ಕನಕಪುರದವನು. ಹಿಂದೆ ವೇಮಗಲ್ ಜಗನ್ನಾಥ ರಾವ್ ಅವರ ನಿರ್ದೇಶನದ "ಆವರ್ತ" ಚಿತ್ರದಲ್ಲಿ ಒಂದು ಪಾತ್ರ‌ ಮಾಡಿದ್ದೆ‌. ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಧನ್ವಿತ್ ಫಿಲಂ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಾನೇ ನಿರ್ಮಾಣ ಮಾಡುತ್ತಿದ್ದೇನೆ. ವಾಸುಕಿ ಭುವನ್ ಅವರು ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ನಿರ್ದೇಶಕರು ಪೂರ್ತಿ ಕಥೆ ಹೇಳಿಲ್ಲ. ಒಂದೆಳೆ ಹೇಳಿದ್ದಾರೆ. ತುಂಬಾ ಚೆನ್ನಾಗಿದೆ ಎಂದರು ನಾಯಕ ಹಾಗೂ ನಿರ್ಮಾಪಕ ಧನ್ವಿತ್. ನಾಯಕಿಯರಾದ ಮೀನಾಕ್ಷಿ ಜೈಸ್ವಾಲ್, ಸಾಯಿ ನಯನ ಹಾಗೂ ಛಾಯಾಗ್ರಾಹಕ ಸೂರ್ಯಕಾಂತ್ ನನ್ನ ಹುಡುಕಿ ಕೊಡಿ ಬಗ್ಗೆ ಮಾತನಾಡಿದರು. ಬೆಂಗಳೂರು, ಕೇರಳ, ಕಾರವಾರ ಮತ್ತು ಕೆಲವು ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಚಪ್ಪಲಿ ಖರೀದಿಸಲು ಹೋಗಿ ಇಡೀ ಅಂಗಡಿನೇ ಖರೀದಿಸಿದ ನಿವೇದಿತಾ; ದುಡ್ಡಿಗೆ ಬೆಲೆನೇ ಇಲ್ವಾ ಎಂದ ನೆಟ್ಟಿಗರು

ಆಹತ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ: ವೆಂಕಟ್‌ ಭಾರದ್ವಾಜ್‌ ನಿರ್ದೇಶನದ ‘ಆಹತ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಈ ಚಿತ್ರದ ಮೂಲಕ ಹೊಸ ನಟ ಕನ್ನಡಕ್ಕೆ ಬಂದಿದ್ದಾರೆ. ಹೆಸರು ಕಬೀರ್‌ ಸೋಮಯಾಜಿ. ಕೆನಡಾದ ಟೊರೆಂಟೋದಲ್ಲಿ ಚಲನಚಿತ್ರ ಮತ್ತು ನಟನೆಯಲ್ಲಿ ಪದವಿ, ಮುಂಬೈನ ಅನುಪಮ್‌ ಖೇರ್‌ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ ನಂತರ ಕಬೀರ್‌ ಸೋಮಯಾಜಿ ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರದ ನಾಯಕಿಯಾಗಿ ಪ್ರಿಯ ಹೆಗಡೆ ಕಾಣಿಸಿಕೊಂಡಿದ್ದಾರೆ. ಬಾಂಬೆ ಪ್ರಕಾಶ್‌ ಈ ಚಿತ್ರ ನಿರ್ಮಿಸಿದ್ದಾರೆ. ದಿನೇಶ್‌ ಮಂಗಳೂರು, ರಮೇಶ್‌ ಪಂಡಿತ್‌, ಉಗ್ರಂ ಮಂಜು, ಗೋಪಾಲಕೃಷ್ಣ ದೇಶಪಾಂಡೆ, ಬಲರಾಜವಾಡಿ, ನಾಗೇಂದ್ರ ಅರಸ್‌, ಪಿಡಿ ಸತೀಶ್‌ಚಂದ್ರ ನಟಿಸಿದ್ದಾರೆ.