ದೃಶ್ಯಂ 1, 2 ಬಳಿಕ ಇದೀಗ ದೃಶ್ಯಂ 3 ಬರೋದು ಕೂಡ ಖಚಿತವಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. 

ದೃಶ್ಯಂ ಭಾರತೀಯ ಚಿತ್ರರಂಗದ ಅಭಿಮಾನಿಗಳನ್ನು ಸೆಳೆದ ಮಲಯಾಳಂ ಸಿನಿಮಾ. ಮರ್ಡರ್​ ಮಿಸ್ಟರಿ ಕಥೆಯ ದೃಶ್ಯಂ ಸಿನಿಮಾದಲ್ಲಿ ಮೋಹನ್ ಲಾಲ್ ನಾಯಕನಾಗಿ ಮಿಂಚಿದ್ದರು. ಈ ಸಿನಿಮಾ ಮೋಹನ್ ಲಾಲ್ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಿತು. ಮಲಯಾಳಂನ ದೃಶ್ಯಂ ಸಿನಿಮಾ ಮಾಲಿವುಡ್‌ನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೂ ರಿಮೇಕ್​ ಆಗಿ ಎಲ್ಲಾ ಭಾಷೆಯಲ್ಲೂ ಯಶಸ್ಸು ಗಳಿಸಿತು. ನಿರ್ದೇಶಕ ಜೀತು ಜೋಸೆಫ್​ ಅವರಿಗೆ ಆ ಚಿತ್ರದಿಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೆಚ್ಚಿತು. ಸಿಕ್ಕಾಪಟ್ಟೆ ಸದ್ದು ಮಾಡಿದ ದೃಶ್ಯಂ ಸಕ್ಸಸ್ ಆದ ಬಳಿಕ ಪಾರ್ಟ್​2 ಕೂಡ ಸೂಪರ್​ ಹಿಟ್​ ಆಗಿತ್ತು. ದೃಶ್ಯಂ 2 ಚಿತ್ರ ನೇರವಾಗಿ ಒಟಿಟಿಯಲ್ಲಿ ತೆರೆಕಂಡು ಯಶಸ್ಸು ಪಡೆಯಿತು. ಇದೀಗ ದೃಶ್ಯಂ 3 ಬರೋದು ಕೂಡ ಖಚಿತವಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. 

ದೃಶ್ಯಂ ಸರಣಿ ಸಿನಿಮಾಗಳನ್ನು ನಿರ್ಮಾಪಕ ಆ್ಯಂಟನಿ ಪೆರುಂಬವೂರ್ ಅವರು ನಿರ್ಮಾಣ ಮಾಡಿದ್ದಾರೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಈಗ ಅವರು ಮೂರನೇ ಪಾರ್ಟ್​ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಮೂರನೇ ಪಾರ್ಟ್​ನಲ್ಲೂ ಹೀರೋ ಆಗಿ ಮೋಹನ್ ಲಾಲ್​ ಮಿಂಚಲಿದ್ದಾರೆ. ಜಾರ್ಜ್‌ಕುಟ್ಟಿಯಾಗಿ ಮೊಹನ್ ಲಾಲ್ ಮತ್ತೆತೆರೆಮೇಲೆ ಅಬ್ಬರಿಸಲಿದ್ದಾರೆ.

ಮಲಯಾಳಂನ ಈ ಸೂಪರ್ ಸ್ಟಾರ್ Aishwarya Rai ಅವರ ಫಸ್ಟ್‌ ಹೀರೋ

ತನ್ನ ಕುಟುಂಬದ ರಕ್ಷಣೆಗಾಗಿ ನಾಯಕನ ಪತ್ನಿ ಕೊಲೆ ಮಾಡುತ್ತಾಳೆ. ಆ ಕೊಲೆ ಪ್ರಕರಣದಿಂದ ಪತ್ನಿ ಮತ್ತು ಮಕ್ಕಳನ್ನು ಬಚಾವ್​ ಮಾಡಲು ಹೀರೋ ಕಷ್ಟಪಡುತ್ತಾನೆ. ಬುದ್ಧಿವಂತಿಕೆಯಿಂದಲೇ ಎಲ್ಲವನ್ನೂ ಆತ ನಿಭಾಯಿಸುತ್ತಾನೆ. ಪೊಲೀಸರಿಗೆ ಹೆಣವೇ ಸಿಗದ ರೀತಿಯಲ್ಲಿ ಆತ ಚಾಲಾಕಿತನ ತೋರಿಸುತ್ತಾನೆ. ಇದು ‘ದೃಶ್ಯಂ’ ಸಿನಿಮಾದ ಕಥೆ. ಅದರ ಮುಂದುವರಿದ ಭಾಗವಾಗಿ ‘ದೃಶ್ಯಂ 2’ನಲ್ಲಿ ಮೂಡಿಬಂದಿತ್ತು. ದೃಶ್ಯಂ 2ನಲ್ಲಿ ಹೆಣ ಸಿಗುತ್ತದೆ. ಆದರೂ ಕೂಡ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಲ್ಲಿ ಕಥಾನಾಯಕ ಯಶಸ್ವಿ ಆಗುತ್ತಾನೆ. ಅಲ್ಲಿಗೆ ಆ ಕೇಸ್​ ಕ್ಲೋಸ್​ ಆಗುತ್ತದೆ. ಹಾಗಾದರೆ ದೃಶ್ಯಂನಲ್ಲಿ ಮತ್ತೆ ಆ ಕೊಲೆ ಪ್ರಕರಣ ಓಪನ್ ಆಗಲಿದ್ದು ಹೊಸ ಟ್ವಿಸ್ಟ್​ ಸಿಗಲಿದೆಯಾ? ಮೂರನೇ ಪಾರ್ಟ್​ನಲ್ಲಿ ಹೀರೋಗೆ ಜೈಲು ಶಿಕ್ಷೆ ಆಗುತ್ತಾ? ಅಂತಿಮವಾಗಿ ಈ ಕಥೆ ಎಲ್ಲಿಗೆ ಮುಕ್ತಾಯವಾಗಲಿದೆ​ ಏನು ಎಂಬುದನ್ನು ತಿಳಿಯಲು ದೃಶ್ಯಂ3 ಗಾಗಿ ಮೋಹನ್​ ಲಾಲ್​ ಅಭಿಮಾನಿಗಳು ಕಾಯುತ್ತಿದ್ದಾರೆ.

Scroll to load tweet…

ದ್ವೇಷದಿಂದ ಶುರುವಾದ ಸೂಪರ್‌ಸ್ಟಾರ್‌ Mohanlal ಮತ್ತು Suchitra ಲವ್ ಸ್ಟೋರಿ!

ಈಗಾಗಲೇ ದೃಶ್ಯಂ 3 ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಮೋಹನ್​ ಲಾಲ್​ ಅವರ ಕೈಗೆ ಬೇಡಿ ತೊಡಿಸಿರುವ ಪೋಸ್ಟರ್​ ವೈರಲ್​ ಆಗಿದೆ. ಕೈಯಲ್ಲಿ ಬೇಡಿ ಇದೆ ಎಂದರೆ ಜಾರ್ಜ್‌ಕುಟ್ಟಿ ಜೈಲು ಸೇರುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ದೃಶ್ಯಂ 3 ಹೇಗೆ ಮೂಡಿಬರಲಿದೆ ಎಂದು ಕಾದುನೋಡಬೇಕಿದೆ.