ದೀಪಕ್ ಸುಬ್ರಹ್ಮಣ್ಯ ನಾಯಕಿಯಾಗಿ ನಟಿಸಿರುವ "ಮಿಸ್ಟರ್ ರಾಣಿ" ಚಿತ್ರ ಇದೇ 7 ರಂದು ಬಿಡುಗಡೆಯಾಗಲಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯ ಸೈಕೋ ಜಯಂತ್ ಪಾತ್ರದ ಖ್ಯಾತಿಯ ದೀಪಕ್, ಈ ಚಿತ್ರದಲ್ಲಿ ಮಹಿಳಾ ಪಾತ್ರಧಾರಿ. ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದಾರೆ. ಚಿತ್ರದ ಪ್ರಚಾರದಲ್ಲಿ ದೀಪಕ್, ಚಂದನಾ ಅವರಿಗೆ ಪ್ರಾಂಕ್ ಕಾಲ್ ಮಾಡಿದ್ದಾರೆ.

ಲಕ್ಷ್ಮೀ ನಿವಾಸ ಸೈಕೋ ಜಯಂತ್​ ಗೊತ್ತಲ್ವಾ? . ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್​ ಕ್ಯಾರೆಕ್ಟರ್​ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ. ಇದೇ ಜಯಂತ್​ ಅರ್ಥಾತ್​ ದೀಪಕ್ ಸುಬ್ರಹ್ಮಣ್ಯ ಈಗ ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಹೌದುದು ನೀವು ಕೇಳ್ತಿರೋದು ನಿಜನೇ. ಇದು ಮಿಸ್ಟರ್​ ರಾಣಿ ಸಿನಿಮಾ. ಇದರಲ್ಲಿ ದೀಪಕ್ ಸುಬ್ರಹ್ಮಣ್ಯ ಅವರು ಲೇಡಿ ರೋಲ್​ ಮಾಡಲಿದ್ದಾರೆ. 


ಮಿಸ್ಟರ್ ರಾಣಿ (Mister Rani). ಈ ಚಿತ್ರ ಇದೇ 7ರಂದು ಬಿಡುಗಡೆಯಾಗಲಿದೆ. ಇದಾಗಲೇ ಈ ಸಿನಿಮಾದ ಪೋಸ್ಟರ್​ ಸೋಷಿಯಲ್​ ಮೀಡಿಯಾಗಳಲ್ಲಿ ಓಡಾಡುತ್ತಿದ್ದು ಈ ರಾಣಿಯನ್ನು ನೋಡಿದ್ರೆ, ನಿಜವಾಗಿಯೂ ಈ ರಾಣಿ, ಸೈಕೋ ಜಯಂತಾ ಎಂದು ಕೇಳುವುದು ಉಂಟು. ಹುಡುಗನೋ, ಹುಡುಗಿಯೋ ಗೊತ್ತಾಗದ ರೀತಿಯಲ್ಲಿ ಜಯಂತ್​ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಕಾಣಿಸುತ್ತಿದ್ದಾರೆ. ಪುರುಷ ಒಬ್ಬ ಮಹಿಳೆಯ ರೋಲ್​ ಎಂದರೆ, ಅದು ಹಾಸ್ಯಮಯವೇ ಆಗಿರಲು ಸಾಧ್ಯ. ವಿನೂತನ ಶೈಲಿಯ ಕಾಮಿಡಿ ಎಂಟರ್ ಟೈನರ್ ಚಿತ್ರ ಇದಾಗಿದೆ. ಈ ಚಿತ್ರವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ನಿರ್ದೇಶಿಸಿದ್ದಾರೆ. ಇದರ ಕಥೆ ಏನೆಂದರೆ, ಹೀರೋ ಆಗಬೇಕೆಂದು ಸಿನಿಮಾಕ್ಕೆ ಬಂದ ಹುಡುಗ ಹೀರೋಯಿನ್ ಆಗುವ ಕಥೆ!

ರಾಣಿಯಾಗಿ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಚಿತ್ರದ ಪ್ರಮೋಷನ್​ ವೇಳೆನೂ ಚಿನ್ನುಮರಿಯ ಹೀಗೆ ಹೆದ್ರಿಸೋದಾ?

 ಅಂದಹಾಗೆ, ಇದೀಗ ದೀಪಕ್​ ಅವರು ಹೆಣ್ಣಿನ ದನಿಯಲ್ಲಿ, ಇದೀಗ ಚಿನ್ನುಮರಿ ಅರ್ಥಾತ್​ ಚಂದನಾ ಅನಂತಕೃಷ್ಣ ಅವರಿಗೆ ಕರೆ ಮಾಡಿ ಪ್ರಾಂಕ್​ ಮಾಡಿದ್ದಾರೆ. ತಮ್ಮ ಮುಂಬರುವ ಮಿಸ್ಟರ್​ ರಾಣಿ ಚಿತ್ರದ ಕುರಿತು ಮಾಹಿತಿ ನೀಡಲು ಇದರಲ್ಲಿ ನಟಿಸಿರುವ ಪಾರ್ವತಿ ನಾಯರ್​ ಜೊತೆ ನಮ್ಮ ಕೆಎಫ್​ಐ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ದೀಪಕ್​ ಅವರು ಚಂದನಾ ಅವರಿಗೆ ಕಾಲ್​ ಮಾಡಿ ಹೆಣ್ಣಿನ ದನಿಯಲ್ಲಿ ಮಾತನಾಡಿದ್ದಾರೆ. ನಾನು ಭರತನಾಟ್ಯಂ ಡಾನ್ಸರ್​, ನಿಮ್ಮ ಮದುವೆಗೆ ಬರಬೇಕು ಎಂದು ತುಂಬಾ ಟ್ರೈ ಮಾಡಿದ್ದೆ, ಆಗಲಿಲ್ಲ ಎಂದಿದ್ದಾರೆ. ಆರಂಭದಲ್ಲಿ ಇದು ಪ್ರಾಂಕ್​ ಕಾಲ್​ ಎಂದು ಚಂದನಾ ಅವರಿಗೆ ಡೌಟ್​ ಬಂದಿತು. ಆದರೆ ದೀಪಕ್​ ಅವರು, ಬಿಟ್ಟುಕೊಡಲಿಲ್ಲ. ನಾನು ನಿಮ್ಮನ್ನು ನೋಡಬೇಕು. ಗಿಫ್ಟ್​ ಕೊಡಬೇಕು ಎಂದೆಲ್ಲಾ ಮಾತನಾಡಿದ್ದಾರೆ. ಇಷ್ಟೆಲ್ಲಾ ಹೇಳಿದರೂ ಚಂದನಾ ಅವರಿಗೆ ಇದು ತಮ್ಮ ರೀಲ್​ ಪತಿಯೇ ಎಂದು ಗೊತ್ತೇ ಆಗಲಿಲ್ಲ. ಹಲವು ನಿಮಿಷಗಳವರೆಗೆ ಮಾತನಾಡಿದ ಬಳಿಕ, ದೀಪಕ್​ ಅವರು ತಮ್ಮ ರಿಯಲ್​ ದನಿಯಲ್ಲಿ ಮಾತನಾಡಿದಾಗ, ಒಹ್​ ಡೀಪ್ಸ್​, ಗೊತ್ತೇ ಆಗಲಿಲ್ಲ ಎಂದಿದ್ದಾರೆ ಚಂದನಾ. 

ಇನ್ನು ದೀಪಕ್ ಸುಬ್ರಮಣ್ಯ ಕುರಿತು ಹೇಳುವುದಾದರೆ, ಇವರು ರಂಗಭೂಮಿ ಕಲಾವಿದ. ಎರಡು ದಶಕಗಳ ಬಣ್ಣದ ಲೋಕದಲ್ಲಿ ಪಳಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್​. ಇದಾಗಲೇ, ಸಾಲಗಾರ , ಜಾರು ಬಂಡೆ , ಪಿಂಕಿ ಎಲ್ಲಿ..? , ಶುದ್ಧಿ , ಆಯಾನಾ , ಸಾರಾಂಶ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಈ ಸೀರಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಇದೀಗ ಲಕ್ಷ್ಮಿ ನಿವಾಸದಲ್ಲಿ ಸಕತ್​ ಫೇಮಸ್​ ಆಗಿದ್ದಾರೆ. ಪ್ರಾಂಕ್​ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ.

ಮದ್ವೆ ಫಿಕ್ಸ್​ ಆದಾಗ್ಲೂ ನನ್ನಮ್ಮಂಗೆ ಆ ಜಯಂತನೇ ಕಾಡ್ತಿದ್ದ, ಮದ್ವೆ ಮಾಡಿಸೋಕೆ ಹೆದರಿದ್ರು ಎಂದ 'ಚಿನ್ನುಮರಿ'

YouTube video player