ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪ್ರಿ- ರಿಲೀಸ್‌ ಕಾರ್ಯಕ್ರಮದ ನಂತರ ಹುಬ್ಬಳ್ಳಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮವೂ ನಡೆಯಿತು. ಈ ವೇಳೆ ದರ್ಶನ್ ಆಪ್ತ ಸ್ನೇಹಿತ ವಿನಯ್ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮಧ್ಯರಾತ್ರಿ 1 ಗಂಟೆಗೆ ಹುಬ್ಬಳ್ಳಿಯಲ್ಲಿ ದರ್ಶನ್‌ ನೋಡಲು ಬಂದ ಫ್ಯಾನ್ಸ್‌ಗೆ ಲಾಠಿಚಾರ್ಜ್! 

ಧಾರವಾಡಕ್ಕೆ ಬಂದಾಗಲೆಲ್ಲಾ ನಟ ದರ್ಶನ್ ತಪ್ಪದೆ ಆಪ್ತ ಸ್ನೇಹಿತ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡುತ್ತಾರೆ. ಆದರೀಗ ವಿಜಯ್ ಕಾರಾಗೃಹದಲ್ಲಿರುವ ಕಾರಣ ಕುಟುಂಬದವರಿಗೆ ಸಾಂತ್ವನ ಹೇಳಲು ದರ್ಶನ್‌ ತೆರಳಿದ್ದರು. ಭಾನುವಾರ ಬೆಳಗ್ಗೆ 10.30ಕ್ಕೆ ದರ್ಶನ್ ವಿನಯ್ ಅವರ ಭೇಟಿ ನೀಡುವ ಸುದ್ದಿ ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕೂಡ ವಿನಯ್ ನಿವಾಸದ ಬಳಿ ಹಾಜರಾಗಿದ್ದರು. ಗದ್ದಲ-ಗೊಂದಲ ಸೃಷ್ಟಿಯಾಗುತ್ತದೆ ಎಂದು ಪೊಲೀಸರು ಬಂದೂಬಸ್ತ್ ಕೂಡ ನೀಡಲಾಗಿತ್ತು. ಉರಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯಿತು. ಆದರೆ ದರ್ಶನ್ ಬರಲಿಲ್ಲ. ಇದ್ದಕ್ಕಿದ್ದಂತೆ ರಾತ್ರಿ 12 ಗಂಟೆಗೆ ಬಂದು ವಿನಯ್ ಕುಟುಂಬದವರನ್ನು ಮಾತನಾಡಿಸಿದ್ದಾರೆ. 

ವಿನಯ್ ಕುಲಕರ್ಣಿ ಫಾರ್ಮ್‌ ಹೌಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಚಕ್ಕಡಿ ಸವಾರಿ! 

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್ ಹಾಗೂ ವಿನಯ್ ಕುಲಕರ್ಣಿ ಭೇಟಿಯಾಗಿದ್ದರು. ವಿನಯ್ ಫಾರ್ಮ್‌ಹೌಸ್‌ನಲ್ಲಿ ಚಕ್ಕಡಿ ಸವಾರಿ ಮಾಡಿ ಸಂಭ್ರಮಿಸಿದ ದರ್ಶನ್ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದಕ್ಕೂ ಮುನ್ನ ಹೈನುಗಾರಿಕೆ ವಿಚಾರವಾಗಿಯೂ ಭೇಟಿ ನೀಡಿ, ಕುದುರೆ ಸವಾರಿ ಮಾಡಿದ್ದರು.  

ರಾತ್ರಿ ದರ್ಶನ್ ಕಾರು ಫಾಲೋ ಮಾಡುತ್ತಿದ್ದ ಸ್ಪೆಷಲ್‌ ಅಭಿಮಾನಿಯನ್ನು ಭೇಟಿ ಮಾಡಿದ ದರ್ಶನ್! 

ಹುಬ್ಬಳ್ಳಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಎಲ್ಲಿ ನೋಡಿದರೂ ದರ್ಶನ್‌ಗೆ ಜೈ ಕಾರ ಕೂಗುವ ಅಭಿಮಾನಿಗಳು. ವಿಶೇಷ ಏನೆಂದರೆ ಪ್ರಮುಖ ಪಾತ್ರದಾರಿಗಳ ಜೊತೆ ಕಾರ್ಯಕ್ರಮದಲ್ಲಿ  ಇಡೀ ಚಿತ್ರದ ತಾರಾ ಬಳಗ ಹಾಗೂ ತಂತ್ರಜ್ಞರು ಹಾಜರಾಗಿದ್ದರು. ತಂದೆ ಸ್ಥಾನದಲ್ಲಿ ಡೈನಾಮಿಕ್ ಕಿಂಗ್ ದೇವರಾಜ್‌ ಆಶೀರ್ವಾದಿಸಿದ್ದಾರೆ. ಪ್ರತಿಯೊಬ್ಬರಿಗೂ ಡಿ-ಬಾಸ್‌ ವೇದಿಕೆ ಮೇಲೆ ಧನ್ಯವಾದಗಳನ್ನು ತಿಳಿಸಿದ್ದಾರೆ.