ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್ ದರ್ಶನ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಬಾಸ್‌ನನ್ನು ನೋಡಲೇ ಬೇಕು ಎಂದು ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಾರೆ. ಸದ್ಯಕ್ಕೆ ಗಾಂಧೀ ನಗರದಲ್ಲಿ ಆಗುತ್ತಿರುವ ದೊಡ್ಡ ಸುದ್ದಿಯಲ್ಲಿ ಬ್ಯುಸಿಯಾಗಿದ್ದ ದರ್ಶನ್‌ನನ್ನು ಫಾಲೋ ಮಾಡುತ್ತಿದ್ದ ಆಟೋ ಚಾಲಕ ಯಾರು ಗೊತ್ತಾ?

"

ರಾತ್ರಿ ಬೆಂಗಳೂರಿನಲ್ಲಿ ದರ್ಶನ್‌ ಕಾರು ಚಲಾಯಿಸುತ್ತಿರುವಾಗ ಹಿಂದಿನಿಂದ ಯಾವುದೋ ಆಟೋ ಫಾಲೋ ಮಾಡಿಕೊಂಡು ಬರುವುದನ್ನು ಗಮನಿಸಿದ್ದಾರೆ. ಈ ಹಿಂದೆಯೂ ಅಭಿಮಾನಿಗಳು ಈ ರೀತಿ ಫಾಲೋ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಂಡಿರುವ ಉದಾಹರಣೆಯೂ ಇದೆ, ಈ ಕಾರಣಕ್ಕೆ ದರ್ಶನ್ ಕಾರು ನಿಲ್ಲಿಸಿ ಆಟೋ ಚಾಲಕನ ಜೊತೆ ಮಾತನಾಡಿದ್ದಾರೆ.

ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ

ಕಾರಿನಿಂದ ಇಳಿದ ದರ್ಶನ್‌ ಆಟೋದಲ್ಲಿ ಫಾಲೋ ಮಾಡುತ್ತಿದ್ದ ಅಭಿಮಾನಿ ವಿಶೇಷ ಚೇತನ ಎಂದು ತಿಳಿದು ಬೇಸರ ಮಾಡಿಕೊಳ್ಳುತ್ತಾರೆ. ಅಭಿಮಾನಿಯ ಸಮಕ್ಕೆ ರಸ್ತೆಯ ಮೇಲೆ ಕುಳಿತು ಮಾತನಾಡಿಸುತ್ತಾರೆ ಹಾಗೂ  ಫೋಟೋ ಬೇಕೆಂದು ಕೇಳಿದಾಗ ಅವರದ್ದೇ ಫೋನ್‌ ಕೇಳಿ ಫೋಟೋ ಕ್ಲಿಕಿಸುತ್ತಾರೆ. 'ಆಟೋ ಹೇಗೆ ಓಡಿಸುತ್ತೀಯಾ? ಬ್ರೇಕ್‌ ಹೇಗೆ ಹಾಕ್ತಿಯಾ ನೀನು' ಎಂದೆಲ್ಲಾ ಅಭಿಮಾನಿಯನ್ನು ವಿಚಾರಿಸಿಕೊಂಡಿದ್ದಾರೆ.