ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಫಾಮ್‌ರ್‍ಹೌಸ್‌ನಲ್ಲಿ ಚಕ್ಕಡಿ ಸವಾರಿ ಮಾಡಿ ನಟ ದರ್ಶನ್‌ ಸಂಭ್ರಮಿಸಿದರು, ಸಾಮಾಜಿಕ ಜಾಲತಾಣದಲ್ಲಿ ಡಿ-ಬಾಸ್‌ ಅಭಿಮಾನಿಗಳು ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.  

ಬಿಡುವಿನ ವೇಳೆ ಕೃಷಿ, ವನ್ಯಜೀವಿ ಫೋಟೋಗ್ರಫಿ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಚಿತ್ರನಟ ದರ್ಶನ್‌ ತೂಗುದೀಪ ಅವರು ಶುಕ್ರವಾರ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಫಾಮ್‌ರ್‍ಹೌಸ್‌ನಲ್ಲಿ ಚಕ್ಕಡಿ ಸವಾರಿ ಮಾಡಿ ಸಂಭ್ರಮಿಸಿದರು. ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪುತ್ರನ ಕುದುರೆ ಸವಾರಿ..!

ನಗರದ ಹೊರವಲಯದಲ್ಲಿರುವ ಮಾಜಿ ಸಚಿವರ ಫಾರ್ಮಹೌಸ್‌ಗೆ ಭೇಟಿ ನೀಡಿದ ಅವರು, ದನಕರುಗಳ ವೀಕ್ಷಿಸಿ ಬಳಿಕ ಚಕ್ಕಡಿ ಸವಾರಿ ಮಾಡಿದ್ದಾರೆ.

View post on Instagram

ಹೈನುಗಾರಿಕೆಯಲ್ಲಿ ಪ್ರೀತಿ ಹೊಂದಿರುವ ನಟ ದರ್ಶನ ಅವರು ಈ ಹಿಂದೆ ವಿನಯ ಕುಲಕರ್ಣಿ ಅವರ ಫಾರ್ಮಹೌಸ್‌ಗೆ ಶೂಟಿಂಗ್‌ನ ಬಿಡುವಿನ ವೇಳೆ ಭೇಟಿ ನೀಡಿ ಕುದುರೆ ಸವಾರಿ ಮಾಡಿದ್ದರು. ಈಗ ಮತ್ತೆ ಭೇಟಿ ನೀಡಿದ್ದು, ಅವರು ಸ್ವತಃ ಚಕ್ಕಡಿ ಸವಾರಿ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಿಡುವಿನ ವೇಳೆ ಸಾಕುಪ್ರಾಣಿಗಳ ಜತೆ ಸಮಯ ಕಳೆಯುತ್ತಿದ್ದ ದಚ್ಚು ಅವರ ಈ ಹವ್ಯಾಸ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.