ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತಂಡ ಇಲ್ಲಿತನಕ ಒಂದೇ ಒಂದು ಮಾಧ್ಯಮಗೋಷ್ಟಿ ಮಾಡಿಲ್ಲ. ಇವೆಂಟ್ ಮಾಡಿ ಮಿಡಿಯಾಗಳಿಗೆ ಮುಖಾಮುಖಿ ಆಗಿಲ್ಲ. ಸಿನಿಮಾದ ಬಿಡುಗಡೆಗೆ ಇನ್ನೂ ಜಸ್ಟ್ 20 ದಿನ ಬಾಕಿ ಇದೆ. ಆದ್ರೆ ಇಲ್ಲಿತನಕ ಡೆವಿಲ್ ತಂಡ ಅದ್ದೂರಿ ಪ್ರಚಾರ ಮಾಡೋ ಸಾಹಸಕ್ಕೆ ಇಳಿದಿಲ್ಲ.

ಕ್ರಾಂತಿ ಸಿನಿಮಾದ ಪ್ರಚಾರ ಮಾಡಿದ್ದ ದರ್ಶನ್ ಫ್ಯಾನ್ಸ್

ದಿ ಡೆವಿಲ್ ಚಿತ್ರತಂಡ ಇದೂವರೆಗೂ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಬಂದಿಲ್ಲ. ಬರೀ ಅಭಿಮಾನಿಗಳನ್ನೇ ನೆಚ್ಚಿಕೊಂಡು ಪಬ್ಲಿಸಿಟಿ ಮಾಡ್ತಾ ಇದೆ. ಈ ಹಿಂದೆ ಕ್ರಾಂತಿ ಸಿನಿಮಾ ಕೂಡ ಇದೇ ರೀತಿ ಅಭಿಮಾನಿಗಳ ಪ್ರಚಾರವನ್ನ ಮಾತ್ರ ನೆಚ್ಚಿಕೊಂಡು ತೆರೆಗೆ ಬಂದಿತ್ತು. ದಿ ಡೆವಿಲ್​ನದ್ದು ಕೂಡ ಕ್ರಾಂತಿ ಕಥೆಯೇ ಆಗಲಿದೆಯಾ,.? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಮಾಧ್ಯಮಗಳಿಂದ ದೂರ.. ಅಭಿಮಾನಿಗಳಿಗೆ ಹತ್ತಿರ..!

ಹೌದು, ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತಂಡ ಇಲ್ಲಿತನಕ ಒಂದೇ ಒಂದು ಮಾಧ್ಯಮಗೋಷ್ಟಿ ಮಾಡಿಲ್ಲ. ಇವೆಂಟ್ ಮಾಡಿ ಮಿಡಿಯಾಗಳಿಗೆ ಮುಖಾಮುಖಿ ಆಗಿಲ್ಲ. ಸಿನಿಮಾದ ಬಿಡುಗಡೆಗೆ ಇನ್ನೂ ಜಸ್ಟ್ 20 ದಿನ ಬಾಕಿ ಇದೆ. ಆದ್ರೆ ಇಲ್ಲಿತನಕ ಡೆವಿಲ್ ತಂಡ ಅದ್ದೂರಿ ಪ್ರಚಾರ ಮಾಡೋ ಸಾಹಸಕ್ಕೆ ಇಳಿದಿಲ್ಲ.

ದರ್ಶನ್ ವಿಚಾರ.. ದಿ ಡೆವಿಲ್ ತಂಡಕ್ಕೆ ಮುಜುಗರ..?

ಅಸಲಿಗೆ ಮಾಧ್ಯಮಗಳಿಗೆ ಮುಖಾಮುಖಿ ಆದರೆ ದರ್ಶನ್ ಕುರಿತ ಪ್ರಶ್ನೆಗಳು ಎದುರಾಗುತ್ವೆ. ಆ ಪ್ರಶ್ನೆಗಳನ್ನ ಹೇಗೆ ಎದುರಿಸೋದು ಅನ್ನೋ ಮುಜುಗರ ಡೆವಿಲ್ ಟೀಂನ ಕಾಡ್ತಿದೆಯಾ ಗೊತ್ತಿಲ್ಲ.

ಅಭಿಮಾನಿಗಳ ಸಮ್ಮುಖದಲ್ಲಿ ಡೆವಿಲ್ ಸಾಂಗ್ ರಿಲೀಸ್

ಹೌದು ಇತ್ತೀಚಿಗೆ ಬಿಡುಗಡೆಯಾಗಿರೋ ದಿ ಡೆವಿಲ್ ಸಿನಿಮಾದ ಅಲೊಹೊಮೊರ ಸಾಂಗ್​​ನ ಚಿತ್ರತಂಡ ಒಂದು ಖಾಸಗಿ ಇವೆಂಟ್​​ನಲ್ಲಿ ರಿಲೀಸ್ ಮಾಡಿದೆ. ದರ್ಶನ್ ಫ್ಯಾನ್ಸ್ ಅಸೋಸಿಯೇಷನ್​​ನ ಕೆಲವೇ ಕೆಲವರು ಈ ಇವೆಂಟ್​ನಲ್ಲಿ ಭಾಗಿ ಆಗಿದ್ದಾರೆ.

ಈ ಇವೆಂಟ್​ನಲ್ಲಿ ದಿ ಡೆವಿಲ್ ಚಿತ್ರತಂಡ ಮತ್ತು ದರ್ಶನ್ ಫ್ಯಾಮಿಲಿ ಭಾಗಿಯಾಗಿದ್ದಾರೆ. ದಿ ಡೆವಿಲ್ ಔಟ್ ಌಂಡ್ ಔಟ್ ಮಾಸ್ ಮೂವಿ ಗೆಲ್ಲಿಸಿ ಅಂತ ನಿರ್ದೇಶಕ ಪ್ರಕಾಶ್ ಮನವಿ ಮಾಡಿದ್ರೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಈ ಸಿನಿಮಾ ಗೆಲ್ಲಿಸೋದು ನಿಮ್ಮ ಜವಾಬ್ದಾರಿ ಅಂತ ಫ್ಯಾನ್ಸ್​ನ ಕೇಳಿಕೊಂಡಿದ್ದಾರೆ.

ಆಗ ‘ಕ್ರಾಂತಿ’.. ಈಗ ‘ದಿ ಡೆವಿಲ್’.. ಫ್ಯಾನ್ಸ್ ಮೇಲೆ ಭಾರ

ಹೌದು ಈ ಹಿಂದೆ ಕ್ರಾಂತಿ ಸಿನಿಮಾ ರಿಲೀಸ್ ಟೈಂನಲ್ಲಿ ಇಂಥದ್ದೇ ಸನ್ನಿವೇಶ ನಿರ್ಮಾಣ ಆಗಿತ್ತು. ಮಾಧ್ಯಮದವರನ್ನ ನಿಂದಿಸಿ ಬ್ಯಾನ್ ಆಗಿದ್ದ ದರ್ಶನ್, ಪ್ರಚಾರಕ್ಕಾಗಿ ಕೇವಲ ಅಭಿಮಾನಿಗಳನ್ನ ನೆಚ್ಚಿಕೊಂಡಿದ್ರು. ಫ್ಯಾನ್ಸ್ ಕ್ರಾಂತಿ ಫೋಟೋ ಹೊತ್ತುಕೊಂಡು ಪ್ರಚಾರ ಮಾಡಿದ್ರು.

ಖುದ್ದು ದರ್ಶನ್ ಅನೇಕ ಡಿಜಿಟಲ್ ವಾಹಿನಿಗಳಲ್ಲಿ ಕುಳಿತು ಸಂದರ್ಶನ ಕೊಟ್ಟಿದ್ರು. ಆದ್ರೆ ಕ್ರಾಂತಿ ಸಿನಿಮಾ ತೆರೆಗೆ ಬಂದು ಹೀನಾಯ ಸೋಲು ಕಂಡ್ತು. ಕ್ರಾಂತಿ ಸೋಲಿನ ಬಳಿಕ ದಾಸನ ಭ್ರಾಂತಿ ಇಳಿದಿತ್ತು. ಕಾಟೇರ ರಿಲೀಸ್ ಟೈಂನಲ್ಲಿ ಮಾಧ್ಯಮದವರ ಕ್ಷಮೆ ಕೇಳಿ ಮತ್ತೆ ಪ್ರಚಾರ ಮಾಡಿ ಅಂತ ಕೇಳಿಕೊಂಡ್ರು. ಕಾಟೇರ ಬಿಗ್ ಹಿಟ್ ಆಗಿದ್ದು ಗೊತ್ತೇ ಇದೆ.

ಇದೀಗ ದರ್ಶನ್ ಅಂತೂ ಹೊರಗಿಲ್ಲ. ದಿ ಡೆವಿಲ್ ಟೀಂ ಮುಜುಗರದಿಂದ ಮಾಧ್ಯಮಗಳ ಮುಂದೆ ಬರ್ತಿಲ್ಲ. ಒನ್ಸ್ ಅಗೈನ್ ಪ್ರಚಾರ ಮಾಡೋ ಭಾರ ಅಭಿಮಾನಿಗಳ ಮೇಲೆ ಬಿದ್ದಿದೆ. ಅಭಿಮಾನಿಗಳು ಪ್ರಚಾರ ಏನೋ ಮಾಡಬಹುದು. ಆದ್ರೆ ಸಿನಿಮದಲ್ಲಿ ಗಟ್ಟಿ ವಿಚಾರ ಇದ್ರೆ ಮಾತ್ರ ಗೆಲ್ಲೋಕೆ ಸಾಧ್ಯ.. ಏನಂತೀರಿ..?

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...