ಶಿವರಾಜ್‌ಕುಮಾರ್ ಮತ್ತು ದರ್ಶನ್ ಅಭಿನಯದ 'ದೇವರ ಮಗ' ಚಿತ್ರ 25 ವರ್ಷ ಪೂರೈಸಿದೆ. ಅಂಬರೀಶ್ ತಂದೆಯಾಗಿ, ಶಿವಣ್ಣ ಮಗನಾಗಿ, ದರ್ಶನ್ ಖಳನಾಗಿ ನಟಿಸಿದ್ದ ಈ ಚಿತ್ರ ಅವರಿಬ್ಬರ ಒಟ್ಟಿಗೆ ನಟಿಸಿದ ಏಕೈಕ ಚಿತ್ರ. ಮತ್ತೆ ಒಟ್ಟಿಗೆ ನಟಿಸುವ ಸಾಧ್ಯತೆ ಕಡಿಮೆಯಾಗಿರುವುದರಿಂದ, ಚಿತ್ರದ ಪುನರ್‌ ಬಿಡುಗಡೆಗೆ ಅಭಿಮಾನಿಗಳ ಒತ್ತಾಯವಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ನಟ ದರ್ಶನ್ ಒಟ್ಟಿಗೆ ಅಭಿನಯಿಸಿರುವ ಏಕೈಕ ಸಿನಿಮಾ 'ದೇವರ ಮಗ' ರಿಲೀಸ್‌ ಆಗಿ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ರೆಬೆಲ್ ಸ್ಟಾರ್ ಅಂಬರೀಶ್‌ ತಂದೆಯ ಪಾತ್ರದಲ್ಲಿ, ಮಗ ಪಾತ್ರದಲ್ಲಿ ಶಿವಣ್ಣ ಹಾಗೂ ನೆಗೆಟಿವ್ ಶೇಡ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಶಿವಣ್ಣ ಮತ್ತು ದರ್ಶನ್ ಒಟ್ಟಿಗೆ ಅಭಿನಯಿಸಿದ ಮೊದಲ ಹಾಗೂ ಕೊನೆಯ ಸಿನಿಮಾ ಇದು. ಒಳ್ಳೆ ಕಥೆ ಬಂದರೆ ಖಂಡಿತಾ ಒಟ್ಟಿಗೆ ಸಿನಿಮಾ ಮಾಡುತ್ತೀವಿ ಎಂದು ದೊಡ್ಡಮನೆ ಮಕ್ಕಳು ಹೇಳುತ್ತಿದ್ದರು ಆದರೆ ಇದವರೆಗೂ ಸಿನಿಮಾ ಆಯ್ಕೆ ಆಗಿಲ್ಲ. ಹೀಗಾಗಿ ಇದೇ ಸಿನಿಮಾವನ್ನು ಮತ್ತೆ ರೀ-ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. 

ದೇವರ ಮಗ ಸಿನಿಮಾ ರಿಲೀಸ್ ಆಗಿದ್ದು 2000ರಲ್ಲಿ. ಶಿವರಾಜ್‌ಕುಮಾರ್, ದರ್ಶನ್, ಅಂಬರೀಶ್, ಭಾನುಪ್ರಿಯಾ,ಲೈಲಾ, ತಾರಾ, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ಭವ್ಯಶ್ರೀ ರೈ, ತುಳಸಿ ಸೇರಿದಂತೆ ದೊಡ್ಡ ತಾರಬಳಗ ಹೊಂದಿತ್ತು. ಈ ಸಿನಿಮಾ ಮಾಡುವ ಸಮಯದಲ್ಲಿ ಶಿವಣ್ಣ ಸೂಪರ್ ಸ್ಟಾರ್ ಆದರೆ ದರ್ಶನ್ ಆಗಷ್ಟೇ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ವಿನೋದ್‌ ರಾಜ್‌ ಜೊತೆ ಮಹಾಭಾರತ ಸಿನಿಮಾ ಮಾಡಿದ ಮೇಲೆ ಒಪ್ಪಿಕೊಂಡ ಎರಡನೇ ಸಿನಿಮಾ ಇದು. ಈ ಎರಡು ಸಿನಿಮಾದ ನಂತರ ಮೆಜೆಸ್ಟಿಕ್ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಹೀರೋ ಆಗಿ ದರ್ಶನ್ ಲಾಂಚ್ ಆಗಿದ್ದು. 

ಈ ಒಂದು ಶೋಗಾಗಿ ಹೆಚ್ಚು ಸಂಭಾವನೆ ಕೊಡುತ್ತಿದ್ದ ಅಮೃತಾಧಾರೆ ಸೀರಿಯಲ್ ಬಿಟ್ಟ ಚಂದನಾ

ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕತೆ ಬರೆದಿರುವುದು ಮೈಸೂರು ಹರೀಶ್. ಎ ಗಣೇಶ್ ಮತ್ತು ಆನಂದ್ ಬಂಡವಾಳ ಹಾಕಿದ್ದರು. 'ನಾನು ಈ ದೇವರ ಮಗ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ದರ್ಶನ್ ಬಂದು ಹೇಳಿದಾಗ ಅಯ್ಯೋ ಇಷ್ಟೋಂದು ಹ್ಯಾಂಡ್‌ಸಮ್‌ ಆಗಿದ್ದೀಯಾ ನೀನು ಯಾಕೆ ಹೀರೋ ಆಗಬಾರದು ಎಂದು ಕೇಳಿದೆ. ಆಗ ಇಲ್ಲ ನಾನು ನಿಮ್ಮ ಜೊತೆ ನಟಿಸಬೇಕು ಈ ಸಿನಿಮಾ ಮಾಡುತ್ತೀನಿ ಎಂದು ದರ್ಶನ್ ಉತ್ತರಿಸಿದ್ದರು. ಇದಾದ ಮೇಲೆ ಮೆಜೆಸ್ಟಿಕ್ ಸಿನಿಮಾದಲ್ಲಿ ನಟಿಸಿ ದರ್ಶನ್ ದೊಡ್ಡ ಹೀರೋ ಆದರು' ಎಂದು ಹಲವು ವರ್ಷಗಳ ಹಿಂದೆ ದೇವರ ಮಗ ಸಿನಿಮಾ ಬಗ್ಗೆ ಮಾತನಾಡಿದಾಗ ಶಿವಣ್ಣ ಈ ಮಾತುಗಳನ್ನು ಹೇಳಿದ್ದರು ಎನ್ನಲಾಗಿದೆ. 

ಬೆರಕೆಗಳು ಸ್ವಲ್ಪ ದಿನ ಸ್ಟೇಷನ್‌ನಲ್ಲಿ ಅಲೆಯಲಿ; ದರ್ಶನ್ ಫ್ಯಾನ್ಸ್‌ ವಿರುದ್ಧ ದೂರು ಕೊಟ್ಟ ಪ್ರಥಮ್