Small Screen
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದಲ್ಲಿ ಮಿಂಚುತ್ತಿದ್ದರು ಚಂದನಾ ಗೌಡ.
ಇದ್ದಕ್ಕಿದ್ದಂತೆ ಅಮೃತಾಧಾರೆ ಸೀರಿಯಲ್‌ನಲ್ಲಿ ಚಂದನಾ ಗೌಡ ಕಾಣಿಸಿಕೊಳ್ಳುವುದು ಕಡಿಮೆ ಆಯ್ತು. ಆಗ ಅಶ್ವಿನಿ ಪಾತ್ರವನ್ನು ನಿಲ್ಲಿಸಲಾಗಿದ್ಯಾ ಅನ್ನೋ ಪ್ರಶ್ನೆ ಶುರುವಾಯ್ತು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಪಮಾ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿದೆ.
ಅಮೃತಾಧಾರೆ ಸೀರಿಯಲ್‌ನಿಂದ ಹೊರ ಬಂದ ಮೇಲೆ ಚಂದನಾ ಕಾಣಿಸಿಕೊಂಡಿರುವುದು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ.
ಅಮೃತಾಧಾರೆ ಸೀರಿಯಲ್‌ಗೂ ಮುನ್ನ ಕನ್ನಡತಿ ಹಾಗೂ ಅಂತರಪಟ ಸೀರಿಯಲ್‌ನಲ್ಲಿ ಚಂದನಾ ಅಭಿನಯಿಸುತ್ತಿದ್ದರು. ಅಲ್ಲದೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಚಂದನಾ ಗೌಡ ಅವರ ನಗು ಮತ್ತು ಡ್ರೆಸ್ಸಿಂಗ್ ಸ್ಟೈಲ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.