Asianet Suvarna News Asianet Suvarna News

ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!

ನಟ ದರ್ಶನ್ ಅವರಿಗೆ 5ನೇ ತಾರೀಖಿನಿಂದಲೇ ಮನಸ್ಸಿನಲ್ಲಿ ತುಂಬಾ ಆತಂಕ, ಕಸಿವಿಸಿ ಕಾಡುತ್ತಿತ್ತಂತೆ. ಆವತ್ತು ರಾತ್ರಿ ಕೂಡ ನಿದ್ದೆ ಬಾರದೇ ಒದ್ದಾಡಿದ್ದರಂತೆ ನಟ ದರ್ಶನ್. ಬಳಿಕ 6ನೇ ತಾರೀಖಿನಂದು..

darshan rejects bande mahakali amma temple priest words to leave bengaluru srb
Author
First Published Jun 30, 2024, 11:44 AM IST

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಬೇಲ್ ಆಗುತ್ತಾ? ಆದರೂ ಯಾವಾಗ ಆಗುತ್ತೆ? ಅವರೆಲ್ಲರ ಮೇಲೆ ಅದೆಷ್ಟು ಸೆಕ್ಷನ್‌ಗಳು ಬಿದ್ದಿವೆ. ಯಾವೆಲ್ಲಾ ಆರೋಪಗಳಿಂದ ಅವರು ಮುಕ್ತಿ ಪಡೆಯಬೇಕು? ಈಗ ಇವೆಲ್ಲಾ ಸಂಗತಿಗಳು ಬಹಳಷ್ಟು ಚರ್ಚೆಯಾಗುತ್ತಿವೆ. 

ಆದರೆ, ಈ ಮಧ್ಯೆ ಹೊಸದೊಂದು ಸೀಕ್ರೆಟ್ ರಿವೀಲ್ ಆಗಿದೆ. ಅದೇನೆಂದರೆ ನಟ ದರ್ಶನ್ ಅವರಿಗೆ 5ನೇ ತಾರೀಖಿನಿಂದಲೇ ಮನಸ್ಸಿನಲ್ಲಿ ತುಂಬಾ ಆತಂಕ, ಕಸಿವಿಸಿ ಕಾಡುತ್ತಿತ್ತಂತೆ. ಆವತ್ತು ರಾತ್ರಿ ಕೂಡ ನಿದ್ದೆ ಬಾರದೇ ಒದ್ದಾಡಿದ್ದರಂತೆ ನಟ ದರ್ಶನ್. ಬಳಿಕ 6ನೇ ತಾರೀಖಿನಂದು ಅವರು ಯಾವತ್ತೂ ನಡೆದುಕೊಳ್ಳುವ ಬೆಂಗಳೂರಿನ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರನ್ನು ಕರೆಸಿಕೊಂಡು ಈ ಬಗ್ಗೆ ಹೇಳಿಕೊಂಡಿದ್ದಾರೆ. ನಟ ದರ್ಶನ್‌ ಅವರಿಗೆ ತಮಗೆ ಏನೋ ಅಪಾಯ ಕಾದಿದೆ ಎಂಬ ಸೂಚನೆ ಸಿಕ್ಕಿತಂತೆ. 

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರು ನಟ ದರ್ಶನ್‌ ಅವರಿಗೆ ದೃಷ್ಟಿ ತೆಗೆದು, ತಡೆ ಒಡೆದು ಬಳಿಕ ಒಂದು ಮಾತು ಹೇಳಿದ್ದರು. ಅದೇನೆಂದರೆ, ಯಾವುದೇ ಕಾರಣಕ್ಕೂ ಒಂದು ವಾರದ ಮಟ್ಟಿಗೆ ಯಾವುದೇ ಹೊಸ ಕೆಲಸ ಮಾಡಬೇಡಿ. ಸಾಧ್ಯವಾದರೆ ಬೆಂಗಳೂರು ಬಿಟ್ಟು ಎಲ್ಲಾದರೂ ದೂರ ಹೋಗಿಬಿಡಿ ಎಂದಿದ್ದರಂತೆ. ಆದರೆ, ನಟ ದರ್ಶನ್ ಅವರು ಅರ್ಚಕರ ಮಾತನ್ನು ತಗೋಬೇಕಾದಷ್ಟು ಸೀರಿಯಸ್ಸಾಗಿ ತಗೊಳ್ಳಲೇ ಇಲ್ಲ. 

ರೇಣುಕಾಸ್ವಾಮಿದು ಘೋರ ಅಪರಾಧ, ಅವ್ನಿಗೆ ಶಿಕ್ಷೆ ಕೊಡೋಕ್ ಹೋಗಿ ಇವ್ರಿಗೆ ಆಗಬಾರದ್ದು ಆಯ್ತು: ಅಗ್ನಿ ಶ್ರೀಧರ್

ನಟ ದರ್ಶನ್ ಮಾಡಿರುವ ದೊಡ್ಡ ತಪ್ಪು ಎಂದರೆ- ಬ್ರಹ್ಮಾಂಡ, ಈ ಪ್ರಕೃತಿಯೇ ದರ್ಶನ್‌ ಅವರಿಗೆ ಸಹಾಯ ಮಾಡಲು ನಿಂತರೂ ಅವರಿಗೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ. ಏನೋ ಆತಂಕ, ಏನೋ ಸಮಸ್ಯೆ ಎದುರಾಗುತ್ತೆ ಅನ್ನೋ ಸೂಚನೆ ಸಿಕ್ಕಿದ್ದರೂ ಅದನ್ನು ಪಾಲಿಸಲಿಲ್ಲ. ಅರ್ಚಕರಿಂದ ಸೂಚನೆ ತೆಗೆದುಕೊಳ್ಳಲು ಗೊತ್ತಾದ ನಟ ದರ್ಶನ್ ಅವರಿಗೆ ಅದೇ ಅರ್ಚಕರು ಕೊಟ್ಟ ಸೂಚನೆ ಪಾಲಿಸಲು ಮನಸ್ಸಾಗಲಿಲ್ಲ ಯಾಕೆ? 

ಎದ್ನೋ ಬಿದ್ನೋ ಅಂತ ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ ಮಾತನ್ನಾಡದ ನಟ ದರ್ಶನ್ ಆಪ್ತರು, ಯಾಕೆ?

ನಟ ದರ್ಶನ್ ಅಂತರಂಗದ ಮಾತು ಕೇಳಬೇಕಿತ್ತು, ಅದನ್ನು ಅರ್ಚಕರು ಹೇಳಿರುವ ರೀತಿಯಿಂದಲೇ ಅರ್ಥೈಸಿಕೊಂಡು ಅಂದೇ ಬೆಂಗಳೂರು ಬಿಟ್ಟು ಹೋಗಿದ್ದರೆ ಇಂದು ಜೈಲಿನೊಳಕ್ಕೆ ಖೈದಿಯಾಗಿ ಇರಬೇಕಾಗಿರಲಿಲ್ಲ. ಆದರೆ, ಸಾಕ್ಷಾತ್ ದೇವಿಯೇ ಬಂದು ಸೂಚನೆ ಕೊಟ್ಟಿದ್ದರೂ ಅದನ್ನು ಅರ್ಚಕರು ಅವರದೇ ಆದ ರೀತಿಯಲ್ಲಿ ಹೇಳಿದ್ದರೂ ನಟ ದರ್ಶನ್ ನಕ್ಕು, ಕೇರ್‌ಲೆಸ್‌ ಆಗಿ ಇದ್ದುಬಿಟ್ಟರು.

ಸಖತ್ ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್, ಏನೋ ಇದೂ, ಬುದ್ದಿವಂತ ಆಗಿದ್ದೂ ಏನು ಮಾತಿದು ಉಪೇಂದ್ರ..? 

ಅದರಿಂದ ಸ್ವತಃ ತಮಗೆ, ತಮ್ಮನ್ನು ನಂಬಿಕೊಂಡಿರುವ ಹೆಂಡತಿ, ಮಗ, ಸ್ನೇಹಿತೆ ಪವಿತ್ರಾ, ಅವ್ರ ಮಗಳು ಸೇರಿದಂತೆ 17 ಜನರ ಫ್ಯಾಲಿಗೆ ನರಳಾಟ ನೋವಿಗೆ ಕಾರಣರಾಗಿಬಿಟ್ಟರು. ಅಂದೇ ಬೆಂಗಳೂರು ಬಿಟ್ಟು ಹೋಗಿದ್ದರೆ, ಅಥವಾ ಅರ್ಚಕರು ಹೇಳಿದಂತೆ ಯಾವುದೇ ಹೊಸ ಕೆಲಸ ಮಾಡದೇ ಇದ್ದರೆ ಇಂದು ಇಷ್ಟೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ ನಟ ದರ್ಶನ್.

ಅದು ಹಾಗೇ ಆಗಿದ್ರೆ ಕೊಲೆಗೂ ಮೊದ್ಲೇ ದರ್ಶನ್ & ಗ್ಯಾಂಗ್ ಮಹಾ ಅಪರಾಧ ಎಸಗಿದೆ: ಅಗ್ನಿ ಶ್ರೀಧರ್ ಹೇಳಿದ್ದೇನು?

Latest Videos
Follow Us:
Download App:
  • android
  • ios