Asianet Suvarna News Asianet Suvarna News

ಎದ್ನೋ ಬಿದ್ನೋ ಅಂತ ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ ಮಾತನ್ನಾಡದ ನಟ ದರ್ಶನ್ ಆಪ್ತರು, ಯಾಕೆ?

ನಟ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. 50 ಸಿನಿಮಾಗಳಿಗಿಂತಲೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಟ ದರ್ಶನ್, ಕೋಟ್ಯಾಂತರ ಅಭಿಮಾನಿಗಳ ಮೆಚ್ಚಿನ ನಟ. ಆದರೆ, ಇಂದು ಜೈಲಿನಲ್ಲಿ ಬಂಧಿಯಾಗಿರುವ ಅವರನ್ನು ನೋಡಲು..

Kannada cinema celebrities are now started to visit actor darshan in jail one by one srb
Author
First Published Jun 29, 2024, 8:22 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಪಾಲಾಗಿದ್ದು ಗೊತ್ತೇ ಇದೆ. ಇನ್ನೆಷ್ಟು ದಿನದಲ್ಲಿ ಹೊರಗೆ ಬರುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕೊಲೆ, ಕಿಡ್ನಾಪ್ ಸೇರಿದಂತೆ ಹಲವಾರು ಕೇಸ್‌ಗಳು ಇವೆ ಇನ್ನಲಾಗುತ್ತಿದ್ದು ಆರೋಪದಿಂದ ಮುಕ್ತರಾಗಿ ನಟ ದರ್ಶನ್ ಮತ್ತು ಗ್ಯಾಂಗ್ ಬರುವುದು ಯಾವತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಕಾನೂನು, ಕೋರ್ಟ್, ಪೊಲೀಸ್, ನ್ಯಾಯಾಧೀಶರುಗಳಿಗೂ ಕೂಡ ಈಗ ಹೇಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. 

ನಟ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. 50 ಸಿನಿಮಾಗಳಿಗಿಂತಲೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಟ ದರ್ಶನ್, ಕೋಟ್ಯಾಂತರ ಅಭಿಮಾನಿಗಳ ಮೆಚ್ಚಿನ ನಟ. ಆದರೆ, ಇಂದು ಜೈಲಿನಲ್ಲಿ ಬಂಧಿಯಾಗಿರುವ ಅವರನ್ನು ನೋಡಲು ಹೆಂಡತಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಹೊರತಪಡಿಸಿದರೆ ಬೇರೆ ಯಾರೂ ಹೋಗಿಲ್ಲ ಎನ್ನಲಾಗುತ್ತಿತ್ತು. ಆ ಮಾತು ಚಾಲ್ತಿಯಲ್ಲಿ ಇರುವಾಗಲೇ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಟ ವಿನೋದ್ ಪ್ರಭಾಕರ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. 

ಮಡಿಕೇರಿಗೆ ಶಿಫ್ಟ್ ಆದ್ರಾ ವಿಜಯಲಕ್ಷ್ಮಿ, ಮಗ ವಿನೀಶ್‌ ಜೊತೆ ಬೆಂಗಳೂರು ತೊರೆದ್ರಾ ದರ್ಶನ್ ಪತ್ನಿ!

ಬಳಿಕ, ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಇದೀಗ ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರಕ್ಕೆ  ನಟ-ನಿರ್ದೇಶಕ ಜೋಗಿ ಪ್ರೇಮ್, ಹಾಗೂ ರಕ್ಷಿತಾ ಪ್ರೇಮ್ ಹೋಗಿ ಬಂದಿದ್ದಾರೆ. ಇದು ಇವತ್ತಿನ ಬೆಳವಣಿಗೆ. ನಟಿ ರಕ್ಷಿತಾ ಅವರು ದರ್ಶನ್ ಆಪ್ತ ಸ್ನೇಹಿತೆಯಾಗಿದ್ದು, ಸ್ವತಃ ದರ್ಶನ್ ಅವರಿಗೆ ಬಂದು ಭೇಟಿಯಾಗುವಂತೆ ಹೇಳಿದ್ದರು ಎನ್ನಲಾಗಿದೆ. ಸ್ನೇಹಿತನ ನೋಡಲು ಹೋರಟ ರಕ್ಷಿತಾ ಪ್ರೇಮ್ ಹಾಗೂ ಪ್ರೇಮ್ ಅವರು  ಇಂದು ಸಾಯಂಕಾಲ 4:30 ಕ್ಕೆ ಜೈಲಿಗೆ ಭೇಟಿ ನೀಡಿ, ನಟ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. 

ಏನೋ ಉಪೇಂದ್ರ, ಬುದ್ದಿವಂತ ನೀನು, ಏನ್ ಮಾತಿದು; ಸಖತ್ ಕ್ಲಾಸ್ ತಗೊಂಡ್ರಾ ಅಗ್ನಿ ಶ್ರೀಧರ್!

ನಟ ದರ್ಶನ್ ಭೇಟಿ ಬಳಿಕ ರಕ್ಷಿತಾ ಅವರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ರಕ್ಷಿತಾ 'ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರಾದೃಷ್ಟಕರ ಬೆಳವಣಿಗೆ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ' ಎಂದಷ್ಟೇ ಹೇಳಿ ಬೇಸರದಲ್ಲಿ ರಕ್ಷಿತಾ ಹೊರಟಿದ್ದಾರೆ. ಇನ್ನು, 
ಪ್ರಕರಣ ನ್ಯಾಯಾಲಯದಲ್ಲಿದೆಯೆಂದು ಮಾತು ಆರಂಭಿಸಿದ ನಟ ಪ್ರೇಮ್ ' ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಜೈಲಿನಲ್ಲಿ ದರ್ಶನ್ ಜೊತೆ ನಡೆದ ಮಾತುಕತೆ ಬಗ್ಗೆ ನಾನು ಯಾವುದೇ ಮಾಹಿತಿ ನೀಡಲಾರೆ ಎಂದು  ನಿರಾಕರಣೆ ಮಾಡಿದ್ದಾರೆ. 'ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ' ಎಂದಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. 

ಹೈಜಾಕ್ ಆಯ್ತಾ ರಾಕಿಂಗ್ ಸ್ಟಾರ್ ಫಾರ್ಮುಲಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ಒಂದು ವಾರದಲ್ಲಿ ಮೂವರಿಗೆ ಮಾತ್ರ ಬೇಟೆಗೆ ಅವಕಾಶ ಇರುತ್ತದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ರು. 
ವಿನೋದ್ ಪ್ರಭಾಕರ್ ಕೂಡ ದರ್ಶನ್ ಭೇಟಿ ಮಾಡಿದ್ದರು. ಈ ವಾರದಲ್ಲಿ ಎರಡು ವಿಸಿಟ್ ಆಗಿರುವ ಹಿನ್ನೆಲೆ ಮೂರನೇ ಭೇಟಿಗೆ ಅವಕಾಶ ನೀಡಲಾಗಿತ್ತು. ಹಾಗಾಗಿ ಜೈಲು ಅಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರೇಮ್‌-ರಕ್ಷಿತಾ ದಂಪತಿ ನಟ ದರ್ಶನ್ ಅವರನ್ನು ಭೇಟಿ ಮಾಡಿತ್ತು. 

ಹೈಜಾಕ್ ಆಯ್ತಾ ರಾಕಿಂಗ್ ಸ್ಟಾರ್ ಫಾರ್ಮುಲಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ಇದೀಗ ಅಚ್ಚರಿ ಬೆಳವಣಿಗೆ ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ, ನಟ ದರ್ಶನ್ ಅವರನ್ನು ನೋಡಲು ಚಿತ್ರರಂಗದಿಂದ ನಿಧಾನವಾಗಿ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಚಿತ್ರೋದ್ಯಮದ ಗಣ್ಯರು, ನಟನಟಿಯರು, ಪ್ರಮುಖರು ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ. ಕೊಲೆ ಪ್ರಕರಣ ಆಗಿರುವ ಹಿನ್ನೆಲೆ ಕೆಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದ ಆಪ್ತರು, ಈಗ ಬರುತ್ತಿರುವುದು ಹೊಸ ಬೆಳವಣಿಗೆ ಎನ್ನಲೇಬೇಕು, ಮುಂದೆ ನಟ ದರ್ಶನ್ ಅವರನ್ನು ಯಾರೆಲ್ಲ ಭೇಟಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೇ!

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

Latest Videos
Follow Us:
Download App:
  • android
  • ios