Asianet Suvarna News Asianet Suvarna News
breaking news image

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

 'ನಾವಿಬ್ಬರೂ ಯಾವುದೇ ಮನಸ್ತಾಪ. ಜಗಳ ಮಾಡಿಕೊಳ್ಳದೇ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರೂ ಜನರು ಹಾಗೂ ಮೀಡಿಯಾ ಅದನ್ನೊಂದು ಬಹುದೊಡ್ಡ ಇಶ್ಯೂ ಮಾಡಿಬಿಟ್ಟರು. ನಮ್ಮಿಬ್ಬರಿಗೂ ಆ ಸಮಯದಲ್ಲಿ ಬಹಳಷ್ಟು ನೋವು, ಆತಂಕ..

If adjustment is not there then what is the purpose to live together says Chandan Shetty srb
Author
First Published Jun 29, 2024, 1:53 PM IST

ನಟ, ರಾಪರ್ ಸಿಂಗರ್ ಚಂದನ್ ಶೆಟ್ಟಿ (Chandan Shetty) ಅವರು ತಮ್ಮ ಹಾಗು ನಿವೇದಿತಾ ಗೌಡ (Niveditha Gowda) ನಡುವಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರೂ ಒಪ್ಪಿಗೆ ಮೇಲೆ ಡಿವೋರ್ಸ್ ಮಾಡಿಕೊಂಡಿದ್ದರೂ ಕೂಡ ಅದನ್ನೊಂದು ಭಯಂಕರ 'ಬಿರುಗಾಳಿ' ಮಾಡಿಬಿಟ್ರು. ಅದ್ರಿಂದ ಇಬ್ಬರಿಗೂ ಮನಸ್ಸಿಗೆ ತುಂಬಾ ನೋವಾಯ್ತು. ಸುತ್ತಲೂ ಮೀಡಿಯಾದವರು ಇರುವ ರೂಮಿನಲ್ಲಿ ಕುಳಿತುಕೊಂಡು ನಮ್ಮಿಬ್ಬರ ಡಿವೋರ್ಸ್ ಬಗ್ಗೆ ಮಾತನಾಡಿದ್ದು ನಮ್ಮಿಬ್ಬರಿಗೂ ತುಂಬಾ ನೋವು ಹಾಗೂ ಕಸಿವಿಸಿ ತಂದ ವಿಷಯವಾಗಿತ್ತು' ಎಂದಿದ್ದಾರೆ ಕನ್ನಡದ ರಾಪರ್ ಸಿಂಗರ್ ಚಂದನ್ ಶೆಟ್ಟಿ. 

ನಾವಿಬ್ಬರೂ ಪರಸ್ಪರ ಚರ್ಚೆ ನಡೆಸಿ, ಒಪ್ಪಿಗೆ ಮೇರೆಗೆ ವಿಚ್ಛೇದನ ತೆಗೆದುಕೊಂಡಿದ್ದೇವೆ. ಅದರೂ ನಮಗೆ ನೂರಾರು ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆಲ್ಲ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಪ್ರೈವೇಟ್ ವಿಷ್ಯವನ್ನು ಪಬ್ಲಿಕ್‌ನಲ್ಲಿ ಹಂಚಿಕೊಳ್ಳಬೇಕಾಯ್ತು' ಎಂದಿದ್ದಾರೆ ನಟ ಹಾಗು ಗಾಯಕ ಚಂದನ್ ಶೆಟ್ಟಿ. 

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ 2020 ರಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ, ಅವರಿಬ್ಬರ ಹೊಂದಾಣಿಕೆ ಮೂಡದ ಕಾರಣ, ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ತೆಗದುಕೊಂಡಿದ್ದಾರೆ. ಅವರಿಬ್ಬರೂ ಕಳೆದ ಒಂದು ವರ್ಷದಿಂದ ಗಂಡ-ಹೆಂಡತಿ ತರ ಇರಲಿಲ್ಲ ಎಂಬುದನ್ನು ಸ್ವತಃ ಚಂದನ್ ಶೆಟ್ಟಿಯವರೇ ಹೇಳಿದ್ದಾರೆ. ಅಷ್ಟೇ ಅಲ್ಲ, ನಾನು ಹಾಗು ನಿವೇದಿತಾ ಒಂದೇ ಮನೆಯಲ್ಲಿ ಸಹ ಇರಲಿಲ್ಲ ಎಂದಿದ್ದಾರೆ. 

ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು?

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮೇ ಆರನೇ ತಾರೀಖು (06 May 2027) ರಂದು ಫ್ಯಾಮಿಲಿ ಕೋರ್ಟ್‌ಗೆ ಅಪ್ಲೈ ಮಾಡಿ ಮಾರನೇ ದಿನ ಅಂದರೆ 7ಕ್ಕೇ ಡಿವೋರ್ಸ್‌ ಪಡೆದಿದ್ದಾರೆ. ಯಾವಾಗ ಈ ಸಂಗತಿ ಹೊರಜಗತ್ತಿಗೆ ಗೊತ್ತಾಯಿತೋ ಆಗ ಎಲ್ಲರೂ ತಮ್ಮತಮ್ಮ ಮನೆಗಳಿಗೇ ಬೆಂಕಿ ಬಿದ್ದಂತೆ ಆಡತೊಡಗಿದರು. ಮಾಧ್ಯಮಗಳು ಕೂಡ ಅದನ್ನೊಂದು ದೊಡ್ಡ ಸುಂಟರಗಾಳಿ ಮಾಡಿಬಿಟ್ಟರು ಎನ್ನಲಾಗುತ್ತಿದೆ.

ಏನ್ರೀ ಇದೂ, ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರಿಂದ್ಲೂ ಆಗದೇ ಇರೋದನ್ನ ಮಾಡಿದ್ರು ವಿಷ್ಣುವರ್ಧನ್!

ತಮ್ಮಿಬ್ಬರ ಡಿವೋರ್ಸ್ ಬಗ್ಗೆ ಮಾತನಾಡಿರುವ ಚಂದನ್ ಶೆಟ್ಟಿ 'ನಾವಿಬ್ಬರೂ ಯಾವುದೇ ಮನಸ್ತಾಪ. ಜಗಳ ಮಾಡಿಕೊಳ್ಳದೇ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರೂ ಜನರು ಹಾಗೂ ಮೀಡಿಯಾ ಅದನ್ನೊಂದು ಬಹುದೊಡ್ಡ ಇಶ್ಯೂ ಮಾಡಿಬಿಟ್ಟರು. ನಮ್ಮಿಬ್ಬರಿಗೂ ಆ ಸಮಯದಲ್ಲಿ ಬಹಳಷ್ಟು ನೋವು, ಆತಂಕ ನಿರ್ಮಾಣವಾಗಿತ್ತು. ನಮ್ಮಿಬ್ಬರ ಒಪ್ಪಿಗೆಯ ಮೇರೆಗೆ ಮದುವೆಯಾಗಿ ನಮ್ಮಿಬ್ಬರದೇ ನಿರ್ಧಾರದಂತೆ ಬೇರೆಬೇರೆ ಆಗುವುದಕ್ಕೂ ಕಾರಣ ಕೊಡಬೇಕಾಗಿದ್ದು, ಆ ಬಗ್ಗೆ ಎಲ್ಲರೆದುರು ಕ್ಯಾಮರಾ ಮುಂದೆ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದು ನನಗೆ ಮತ್ತು ನಿವಾದಿತಾ ಇಬ್ಬರಿಗೂ ತುಂಬಾ ನೋವು ತರಿಸಿತು.

ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್ 

ಪ್ರೀತಿಸಿ ಮದುವೆಯಾಗಿದ್ದರೂ ಕೂಡ ಸಂಸಾರದಲ್ಲಿ ಸರಿಗಮ ಮೂಡಲಿಲ್ಲ ಎಂದಾದರೆ, ಮುಖ್ಯವಾಗಿ, ಹೊಂದಾಣಿಕೆ ಇಲ್ಲ ಎಂದಾದರೆ, ದಾಂಪತ್ಯ ಮುಂದುವರೆಸಲು ಮನಸ್ಸಿಲ್ಲ ಎಂದಾದಾಗ, ಪರಸ್ಪರ ಮಾತನಾಡಿಕೊಂಡು ನಗುನಗುತ್ತಲೇ ಡಿವೋರ್ಸ್‌ ಮಾಡಿಕೊಂಡರೆ ಸಮಸ್ಯೆಯೇನು? ಇಲ್ಲಿ ಎಲ್ಲರ ಜೀವನವೂ ವೈಯಕ್ತಿಕವೇ ಆಗಿದೆ. ಸಾರ್ವಜನಿಕ ವ್ಯಕ್ತಿಗಳದ್ದೇ ಆಗಿದ್ದರೂ ಮದುವೆ, ಮಕ್ಕಳು, ಊಟ-ತಿಂಡಿ ಸೇರಿದಂತೆ ಹಲವು ಸಂಗತಿಗಳು ವೈಯಕ್ತಿಕವೇ. ಆದರೂ ಕೂಡ ಆ ಬಗ್ಗೆ ಸಾರ್ವಜನಿಕರಿಗೆ ಆಸಕ್ತಿ ಇರುತ್ತದೆ ಎಂಬುದು ಅಚ್ಚರಿಯ ಸತ್ಯ. 

ಜೈಲಿಂದ ವಾಪಸ್ ಆದ್ಮೇಲೆ ಮತ್ತೆಂದೂ 'ಅದನ್ನು' ಮಾಡ್ಬೇಡ; ನಟ ದರ್ಶನ್‌ಗೆ ಅಗ್ನಿ ಶ್ರೀಧರ್ ಸಲಹೆ!

ಇಲ್ಲಿ ನಾನು ಸರಿ-ತಪ್ಪುಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ಯಾರೇ ಆಗಿರಲಿ, ಸಲೆಬ್ರಿಟಿ ಆಗಿದ್ದರೂ ಸಾಮಾನ್ಯ ಜನರೇ ಆಗಿದ್ದರೂ ಎಲ್ಲರಿಗೂ ವೈಯಕ್ತಿಕ ಬದುಕು ಇರುತ್ತದೆ. ಅದನ್ನು ಪ್ರತಿಯಬ್ಬರೂ ಗೌರವಿಸಬೇಕು. ಸಮಸ್ಯೆಗಳಾದಾಗ ಕಾನೂನಿನ ಅಡಿಯಲ್ಲಿ ಪರಿಹಾರ ಕಂಡುಕೊಂಡರೆ ಮುಗಿಯಿತು. ಆದರೆ, ಅದಕ್ಕೆಲ್ಲಾ ಸಾರ್ವಜನಿಕವಾಗಿ ಉತ್ತರ ಕೊಡುತ್ತಾ ಇರಬೇಕಾದ ಸಮಯ-ಸಂದರ್ಭ ಸೃಷ್ಟಿಯಾದಾಗ ನಿಜವಾಗಿಯೂ ಮನಸ್ಸಿಗೆ ತುಂಬಾ ಬೇಸರ ಉಂಟಾಗುತ್ತದೆ. ಅದನ್ನು ನಾನು ಹಾಗು ನಿವೇದಿತಾ ಇಬ್ಬರೂ ಅನುಭವಿಸಿದ್ದೇವೆ' ಎಂದಿದ್ದಾರೆ ಚಂದನ್ ಶೆಟ್ಟಿ. 

ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಖ್ಯಾತ ಆ್ಯಂಕರ್ ಓಡಾಟ; ಅಲ್ಯಾಕೆ ಹೋಗಿ ನಗು ಚೆಲ್ಲಿದ್ರು ಅನುಶ್ರೀ..?

Latest Videos
Follow Us:
Download App:
  • android
  • ios