ಕನ್ನಡ ರಾಜ್ಯೋತ್ಸವದಂದು ಗಂಧದ ಗುಡಿಯ ನಟ ನಟಿಯರೆಲ್ಲ ಕನ್ನಡದಲ್ಲಿ ಸೊಗಸಾಗಿ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳೆಲ್ಲ ದರ್ಶನ್‌, ಸುದೀಪ್‌, ಧ್ರುವ ಸರ್ಜಾ, ರಮೇಶ್‌, ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ.

ದರ್ಶನ್‌ ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ರಸಋುಷಿ ಕುವೆಂಪು ಸಾಲಿನೊಂದಿಗೆ ಶುಭಾಶಯ ತಿಳಿಸಿದರೆ, ಸುದೀಪ್‌, ‘ಹೆತ್ತ ತಾಯಿ ಕನ್ನಡತಿಯಾದರೆ, ಹೊತ್ತ ತಾಯಿ ಕನ್ನಡ..’ ಎಂದು ಅಭಿಮಾನ ಮೆರೆದಿದ್ದಾರೆ. ಯಶ್‌, ‘ಈ ಮಣ್ಣಿನ ಪ್ರತಿ ಕಣವೂ ಬಂಗಾರ... ಕನ್ನಡಾಂಬೆ ನೀನೆ ಭಾರತ ಮಾತೆಯ ಸಿಂಧೂರ’ ಎಂದಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಕನ್ನಡವೇ ನಿತ್ಯ ಎಂದು ಹಾರೈಸಿದ್ದಾರೆ.

ಇನ್ನು 1 ವರ್ಷ ಕನ್ನಡ ಕಾಯಕ ವರ್ಷ: ಭಾಷೆ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ!

View post on Instagram

ರಮೇಶ್‌ ಅರವಿಂದ್‌ ಕೆಂಪು ಅಂಗಿ, ಹಳದಿ ಮಾಸ್ಕ್‌ನಲ್ಲಿ ಕನ್ನಾಡಾಭಿಮಾನ ಮೆರೆದರೆ, ಧ್ರುವ ಸರ್ಜಾ, ಕನ್ನಡಾಂಬೆಗೆ ಜೈ ಅಂದಿದ್ದಾರೆ. ‘ನರಕಕ್‌ ಇಳ್ಸಿ ನಾಲ್ಗೆ ಸೀಳ್ಸಿ ಬಾಯ… ಒಲಸಾಕಿದ್ರೂನು ಮೂಗ್ನಲ… ಕನ್ನಡ ಪದವಾಡ್ತೀನಿ..’ ಅಂತ ಅಬ್ಬರಿಸಿದ್ದು ಗಣೇಶ್‌. ‘ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು’ ಎಂದು ರಮ್ಯಾ ಶುಭ ಕೋರಿದ್ದಾರೆ. ‘ನವೆಂಬರ್‌ 1 ಕನ್ನಡಿಗರಾಗದಿರಿ, ನಂಬರ್‌ 1 ಕನ್ನಡಿಗರಾಗಿ’ ಎಂದಿದ್ದು ರಚಿತಾ ರಾಮ್‌.

ಹುಬ್ಬಳ್ಳಿ: ನೈಋುತ್ಯ ರೈಲ್ವೆಯಲ್ಲಿ ಕನ್ನಡದ ಕಂಪು..! 

View post on Instagram

ನಮ್ಮ ಭಾಷೆ, ನಮ್ಮ ಧ್ವನಿ, ನಮ್ಮ ಸಂಪತ್ತು ಕನ್ನಡ. ಇಂದು ನಮ್ಮ ಹಬ್ಬ, ಎಲ್ಲರೂ ಒಂದಾಗಿ ಸಂಭ್ರಮಿಸೊಣ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂಬುದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಹಾರೈಕೆ. ಉಪೇಂದ್ರ, ಜಗ್ಗೇಶ್‌ ಸೇರಿದಂತೆ ಹಲವು ನಟ ನಟಿಯರು ಕನ್ನಡ ಹಬ್ಬಕ್ಕೆ ಶುಭ ಕೋರಿದ್ದಾರೆ.