ಈ ಸಾರಿ ದರ್ಶನ್ ಅಷ್ಟು ಬೇಗ ಹೊರಬರೋದು ಅಸಾಧ್ಯ,. ದರ್ಶನ್​ ಪೆರೋಲ್ ಮೇಲೆ ಹೊರಬರೋಕೆ ಸಾಧ್ಯ ಇಲ್ಲ. ಯಾಕಂದ್ರೆ ಇನ್ನೂ ಅವರು ವಿಚಾರಣಾಧೀನ ಕೈದಿ ಅಷ್ಟೇ. ಇನ್ನೂ ಇಷ್ಟು ಬೇಗ ದರ್ಶನ್​ಗೆ ಬೇಲ್ ಸಿಕ್ಕೋದು ಕೂಡ ಅಸಾಧ್ಯ. ಯಾಕಂದ್ರೆ ಸುಪ್ರೀಂ ಕೋರ್ಟ್​ನಲ್ಲೇ ದರ್ಶನ್ ಬೇಲ್ ರದ್ದಾಗಿದೆ. ಹಾಗಿದ್ರೆ ಮುಂದೇನು?

ದರ್ಶನ್ ಬಿಡುಗಡೆ ಯಾವಾಗ?

ನಟ ದರ್ಶನ್ (Darshan Thoogudeepa) ನಟನೆಯ ದಿ ಡೆವಿಲ್ (The Devil) ತೆರೆಗೆ ಬರಲಿಕ್ಕೆ ಇನ್ನು 15 ದಿನಗಳು ಮಾತ್ರ ಬಾಕಿ ಇವೆ. ಫ್ಯಾನ್ಸ್​ ಎರಡು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ ಮೇಲೆ ದಾಸನ ದರ್ಶನ ಮಾಡೋದಕ್ಕೆ ಸಜ್ಜಾಗಿದ್ದಾರೆ. ಆದ್ರೆ ಖುದ್ದು ದರ್ಶನ್​ಗೆ ತನ್ನ ಸಿನಿಮಾದ ದರ್ಶನ ಆಗೋದು ಯಾವಾಗ..? ದರ್ಶನ್​ಗೆ ಪೆರೋಲ್, ಬೇಲ್ ಸಿಗೋ ಚಾನ್ಸ್ ಇದೆಯಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಡಿಸೆಂಬರ್ 11ಕ್ಕೆ ಫ್ಯಾನ್ಸ್​ಗೆ ‘ದಿ ಡೆವಿಲ್’ ದರ್ಶನ; ದಾಸನಿಗೆ ಯಾವಾಗ ಹೊರಜಗತ್ತಿನ ದರ್ಶನ..?

ಯೆಸ್ ಡಿಸೆಂಬರ್ 11ಕ್ಕೆ ದರ್ಶನ್ ನಟನೆಯ ದಿ ಡೆವಿಲ್ ಮೂವಿ ತೆರೆಗೆ ಬರ್ತಾ ಇದೆ. ಸಿನಿಮಾದ ರಿಲೀಸ್ ಗೆ​ ಜಸ್ಟ್ 15 ದಿನಗಳು ಬಾಕಿ ಇದ್ದು, ಅಭಿಮಾನಿಗಳು ಡೆವಿಲ್ ನ ಬಿಗ್ ಸ್ಕ್ರೀನ್​ ಮೇಲೆ ನೋಡೋದಕ್ಕೆ ಕಾತುರದಿಂದ ಕಾಯ್ತಾ ಇದ್ದಾರೆ.

ದರ್ಶನ್ ನಟನೆಯ ಹಿಂದಿನ ಸಿನಿಮಾ ತೆರೆಗೆ ಬಂದಿದ್ದು, 2023ರ ಡಿಸೆಂಬರ್​ನಲ್ಲಿ. 29 ಡಿಸೆಂಬರ್ 2023ರಂದು ಕಾಟೇರ ತೆರೆಗೆ ಬಂದಿತ್ತು. ದರ್ಶನ್ ಕರೀಯರ್​ನಲ್ಲೇ ದೊಡ್ಡ ಹಿಟ್ ಅನ್ನಿಸಿಕೊಂಡಿದ್ದ ಈ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು,

ಇಷ್ಟು ದೊಡ್ಡ ಯಶಸ್ಸಿನ ನಂತರ ಸೆಟ್ಟೇರಿದ ದರ್ಶನ್ ಹೊಸ ಚಿತ್ರವೇ ದಿ ಡೆವಿಲ್. ಭರದಿಂದ ಶೂಟಿಂಗ್ ಆರಂಭಿಸಿದ್ದ ದಿ ಡೆವಿಲ್ ಕಳೆದ ವರ್ಷ ಡಿಸೆಂಬರ್​ಗೇನೇ ತೆರೆಗೆ ಬರಬೇಕಿತ್ತು.

ಆದ್ರೆ ಕಳೆದ ವರ್ಷ ಜೂನ್​ನಲ್ಲಿ ದರ್ಶನ್ ಇದೇ ಸಿನಿಮಾದ ಸೆಟ್​ನಿಂದ ಅರೆಸ್ಟ್ ಆಗಿದ್ದು ಸಿನಿಮಾಗೆ ಹಿನ್ನಡೆ ಆಯ್ತು. ಬೇಲ್ ಮೇಲೆ ಹೊರಬಂದ ದರ್ಶನ್ ಸಿನಿಮಾವನ್ನ ಕಂಪ್ಲೀಟ್ ಮಾಡಿಕೊಟ್ರು. ಸದ್ಯ ದಿ ಡೆವಿಲ್ ರಿಲೀಸ್ ಆಗ್ತಾ ಇದೆ. ಆದ್ರೆ ದಾಸ ರಿಲೀಸ್ ಆಗೋದ್ಯಾವಾಗ ಗೊತ್ತಿಲ್ಲ.

ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಲ್ಲಿ ಇದ್ರು. ಆದ್ರೆ ಎರಡೇ ವಾರದಲ್ಲಿ ದರ್ಶನ್ ಖುಲಾಸೆಯಾಗಿ ಹೊರಬಂದು ಸಿನಿಮಾದ ಸಕ್ಸಸ್ ಯಾತ್ರೆಯಲ್ಲಿ ಭಾಗಿಯಾಗಿದ್ರು.

ದರ್ಶನ್​ ಪೆರೋಲ್ ಮೇಲೆ ಹೊರಬರೋಕೆ ಸಾಧ್ಯ ಇಲ್ಲ

ಆದ್ರೆ ಈ ಸಾರಿ ದರ್ಶನ್ ಅಷ್ಟು ಬೇಗ ಹೊರಬರೋದು ಅಸಾಧ್ಯ,. ದರ್ಶನ್​ ಪೆರೋಲ್ ಮೇಲೆ ಹೊರಬರೋಕೆ ಸಾಧ್ಯ ಇಲ್ಲ. ಯಾಕಂದ್ರೆ ಇನ್ನೂ ಅವರು ವಿಚಾರಣಾಧೀನ ಕೈದಿ ಅಷ್ಟೇ. ಇನ್ನೂ ಇಷ್ಟು ಬೇಗ ದರ್ಶನ್​ಗೆ ಬೇಲ್ ಸಿಕ್ಕೋದು ಕೂಡ ಅಸಾಧ್ಯ. ಯಾಕಂದ್ರೆ ಸುಪ್ರೀಂ ಕೋರ್ಟ್​ನಲ್ಲೇ ದರ್ಶನ್ ಬೇಲ್ ರದ್ದಾಗಿ ಆಗಿದೆ.

ಒಟ್ಟಾರೆ ಫ್ಯಾನ್ಸ್​ಗಂತೂ ಬಿಗ್​ಸ್ಕ್ರೀನ್ ಮೇಲೆ ದಾಸನ ದರ್ಶನ ಆಗ್ತಾ ಇದೆ. ಆದ್ರೆ ದಾಸನಿಗೆ ಫ್ಯಾನ್ಸ್ ದರ್ಶನ ಯಾವಾಗ..? ಈ ಪ್ರಶ್ನೆಗೆ ಸದ್ಯಕ್ಕಂತೂ ಯಾರಿಗೂ ಉತ್ತರ ಗೊತ್ತಿಲ್ಲ..!