ಕನ್ನಡ ಚಿತ್ರರಂಗಕ್ಕೆ ತೂಗುದೀಪ ಕುಟುಂಬದ ಇಬ್ಬರು ಕುಡಿಗಳ ಅಪಾರ ಕೊಡುಗೆಗಳಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಇತ್ತ ದಿನಕರ್ ತಮ್ಮ ಮುಂದಿನ ಚಿತ್ರ ಕತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಶಹಬ್ಬಾಸ್..! ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್ 

ದರ್ಶನ್ ಹಾಗೂ ದಿನಕರ್ ಕಾಂಬಿನೇಷನ್‌ ಅನ್ನು ಮತ್ತೆ ತೆರೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ನಡುವೆ ಆ ನಟಿ ಮಿಂಚಲಿದ್ದಾರೆ, ಈ ನಟರು ಜೊತೆಯಾಗಲಿದ್ದಾರೆ ಎಂಬೆಲ್ಲಾ ಗಾಳಿ ಮಾತುಗಳು ಕೇಳಿ ಬರುತ್ತಿದ್ದವು. ಮೊದಲ ಬಾರಿ ಸ್ವತಃ ದಿನಕರ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

'ತಯಾರಿ ಮಾಡುತ್ತಿರುವ ಹೊಸ ಸ್ಕ್ರಿಪ್ಟ್‌ಗೆ ಕಲಾವಿದರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಕೆಲವೊಂದು ಮೀಡಿಯಾ ವೆಬ್‌ಸೈಟ್‌ಗಳು ಹಾಗೂ ಚಾನೆಲ್‌ಗಳು ಇದನ್ನು ತಿಳಿದುಕೊಳ್ಳದೇ ಇಷ್ಟ ಬಂದವರ ಹೆಸರು ಬಳಸುತ್ತಿವೆ. ಇದರಿಂದ ಅವರಿಗೆ ಶೋಭೆ ತರುವುದಿಲ್ಲ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಮಾಹಿತಿ ನೀಡುತ್ತೇನೆ,' ಎಂದು ದಿನಾಕರ್ ಹೇಳಿದ್ದಾರೆ.

ಬೈಕ್ ರೈಡ್‌ಗೆ ತೆರಳಿದ ದರ್ಶನ್; ವೃದ್ಧ ದಂಪತಿ ಮನೆಯಲ್ಲಿ ವಿಶ್ರಾಂತಿ!

ಸಾರಥಿ ಹಾಗೂ ನವಗ್ರಹ ಚಿತ್ರದಲ್ಲಿ ಅಣ್ಣ-ತಮ್ಮನ ಕಾಂಬಿನೇಷನ್ ನೋಡಿದ ಪ್ರೇಕ್ಷಕರು ಮತ್ತೊಂದು ಸಿನಿಮಾವನ್ನು ಒಟ್ಟಾಗಿ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.