ಪ್ರಾಣಿಗಳ ಜತೆಗೆ ಕಾಡಿನಲ್ಲೊಂದು ಮರದ ಕೆಳಗೆ ಕ್ಯಾಮೆರಾ ಹಿಡಿದು ಕುಳಿತಿರುವ ದರ್ಶನ್‌ ಕಾಮನ್‌ ಡಿಪಿ ವೈರಲ್‌ ಆಗಿದೆ. ಇಂದು ದರ್ಶನ್‌ ಅಭಿನಯದ, ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ ರಾಬರ್ಟ್‌ ಸಿನಿಮಾದ ಟ್ರೇಲರ್‌ ಕೂಡ ಬಿಡುಗಡೆಯಾಗಲಿದೆ. ಒಟ್ಟಾರೆ ದರ್ಶನ್‌ ಅಭಿಮಾನಿಗಳ ಸಂಭ್ರಮ ಮೇರೆ ಮೀರಿದೆ.

ಪ್ರತೀ ಸಲ ದರ್ಶನ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಎಲ್ಲೆಲ್ಲಿಂದಲೋ ಬರುತ್ತಿದ್ದರು. ಆದರೆ ಈ ಸಲ ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ, ಹುಟ್ಟುಹಬ್ಬಕ್ಕೆ ವೃಥಾ ಹಣ ಪೋಲು ಮಾಡದಿರಿ. ಬದಲಿಗೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ನಿಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ದರ್ಶನ್‌ ಹೇಳಿಕೊಂಡಿದ್ದರು. ಅದರಂತೆ ಅವರು ಈಸಲ ಅಭಿಮಾನಿಗಳಿಗೆ ಸಿಗುವ ಸಾಧ್ಯತೆ ಇಲ್ಲ. ಹಾಗಂತ ಅಭಿಮಾನಿಗಳು ಅವರ ಮೇಲಿಟ್ಟಿರುವ ಅಭಿಮಾನ ಕಡಿಮೆಯಾಗಿಲ್ಲ. ದರ್ಶನ್‌ರನ್ನು ಮನಸ್ಸಲ್ಲಿಟ್ಟುಕೊಂಡು ಜೋರಾಗಿ ಹುಟ್ಟುಹಬ್ಬ ಆಚರಿಸಲಿದ್ದಾರೆ.

ಫೆ.16ಕ್ಕೆ ರಾಬರ್ಟ್‌ ಟ್ರೇಲರ್; ಜಗಪತಿ ಬಾಬುಗೆ ಶುಭ ಕೋರಿದ ದರ್ಶನ್! 

ದರ್ಶನ್‌ ಕಾಮನ್‌ ಡಿಪಿ ವೈರಲ್‌ ಆಗಿದ್ದು, ಅಭಿಮಾನಿಗಳು, ಚಿತ್ರರಂಗದ ಗಣ್ಯರು ಎಲ್ಲರೂ ಶುಭ ಕೋರಿದ್ದಾರೆ.