ಚಿರಂಜೀವಿಗೆ 2 ದಿನ ಟೈಂ ಇತ್ತು ನಾವು ಸರಿಯಾಗಿ ಬಳಸಿಕೊಳ್ಳಲಿಲ್ಲ; ಅಳಿಯನನ್ನು ನೆನೆದು ಸುಂದರ್ ರಾಜ್ ಬೇಸರ
ಮನೆಗೆ ಬಂದ ಮಗನನ್ನು ಕಳೆದುಕೊಂಡ ನೋವು ಇನ್ನೂ ಇದೆ...ದೇವರ ಮೇಲೆ ನಂಬಿಕೆ ಬಿಟ್ಟು ಹೋಗಿದ್ದೇ ಅಲ್ಲಿಂದ.......
ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್ ಮತ್ತು ಪತ್ನಿ ಪ್ರಮೀಳಾ ಅವರ ಮುದ್ದಿನ ಮಗಳು ಮೇಘನಾ ರಾಜ್ ಮತ್ತು ನಟ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆಯಾದರು. ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ಮದುವೆಯಾದ ಈ ಜೋಡಿಗೆ ಕೋವಿಡ್ ಸಮಯದಲ್ಲಿ ದೊಡ್ಡ ಶಾಕ್ ಕಾದಿತ್ತು. ಹೃದಯಾಘಾತದಿಂದ ಚಿರು ಅಗಲಿದರು, ಅದೇ ಸಮಯಕ್ಕೆ ಮೇಘನಾ ರಾಜ್ ತುಂಬು ಗರ್ಭಿಣಿ. ದುಖಃದಲ್ಲಿದ್ದ ಸರ್ಜಾ ಫ್ಯಾಮಿಲಿಗೆ ಸಪೋರ್ಟ್ ಆಗಿ ನಿಂತಿದ್ದು ಇಡೀ ಕರ್ನಾಟಕದ ಜನತೆ. ಸುಂದರ್ ರಾಜ್ ಕುಟುಂಬದಲ್ಲಿ ಚಿರು ಅಲಿಯನಿಗಿಂತ ಮಗನ ಸ್ಥಾನ ಸ್ವೀಕರಿಸಿದ್ದರು. ಈ ಸಮಯದಲ್ಲಿ ಮೇಘನಾ ರಾಜ್‌ಗೆ ಮೆಂಟಲಿ ಸಪೋರ್ಟ್ ಆಗಿ ನಿಂತಿದ್ದು ಸ್ನೇಹಿತರು ಮತ್ತು ಕನ್ನಡ ಚಿತ್ರರಂಗ.
ಈ ಘಟನೆ ನಡೆದ ನಂತರ ನಾನು ದೇವರನ್ನು ನಂಬುದುವಿಲ್ಲ ದೇವರು ಇಲ್ವೇ ಇಲ್ಲ ಎನ್ನುತ್ತಿದ್ದ ಸುಂದರ್ ರಾಜ್ ಮೊಮ್ಮಗ ಬಂದ ಮೇಲೆ ಮನೆಯಲ್ಲಿ ನಗು ಖುಷಿ ಮತ್ತು ಬೆಳಕು ಕಂಡರು. 'ನನ್ನ ಅಳಿಯನನ್ನು ಕಳೆದುಕೊಂಡಾಗ ದೇವರ ಮೇಲೆ ನಂಬಿಕೆ ಕಳೆದುಕೊಂಡೆ. 2018ರಲ್ಲಿ ನನ್ನ ತಾಯಿ ಕಳೆದುಕೊಂಡೆ, 2019ರಲ್ಲಿ ನನ್ನ ತಂದೆ ಕಳೆದುಕೊಂಡೆ ಆನಂತರ 2020ರಲ್ಲಿ ಚಿರುನ ಕಳೆದುಕೊಂಡೆ...ಇದೆಲ್ಲಾ ಒಂದೊಂದೇ ವರ್ಷದ ಗ್ಯಾಪ್‌ನಲ್ಲಿ ನಡೆದಿದ್ದು. ನನಗ ಹೆತ್ತವರು ಇಬ್ಬರು ಇಲ್ಲ ಅಲ್ಲದೆ ಮನೆಗೆ ಬಂದ ಮಗನೂ ಇಲ್ಲ..ಮಗಳು ಮನೆಯಲ್ಲಿದ್ದಾಳೆ ಹೊಟ್ಟೆಯಲ್ಲಿ ಮಗು ಇದೆ...ಆ ಸಮಯದಲ್ಲಿ ನಾನು ಪಟ್ಟ ನೋವಿಗೆ ದೇವರ ಮೇಲೆ ನಂಬಿಕೆ ಕಳೆದುಕೊಂಡೆ. ದೇವರು ಇಲ್ಲ ಅಂತ ಯಾಕೆ ಬೈದಿದ್ದು ಅಂದ್ರೆ ಒಂದೊಂದು ಸಲ ನಮಗೆ ಆ ಕೋಪ ಬರುತ್ತದೆ ದಿನ ಬೆಳಗ್ಗೆ ನಿನಗೆ ದೀಪಾ ಹಚ್ಚುತ್ತೀನಿ ಪೂಜೆ ಮಾಡುತ್ತೀನಿ ಹೀಗಿರುವಾಗ ನೀನು ನನಗೆ ಕಷ್ಟ ಕೊಡುತ್ತೀಯಾ?. ವಯನಾಡಿನಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ಎದ್ದಿಲ್ಲ ನೀರಿನಲ್ಲಿ ಹೋಗಿಬಿಟ್ಟರು...ಅದು ಕೂಡ ಇದೇ ಪನಿಷ್ಮೆಂಟ್' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸುಂದರ್ ರಾಜ್ ಮಾತನಾಡಿದ್ದಾರೆ.
ಶುಕ್ರವಾರ ದೇವಸ್ಥಾನಕ್ಕೆ ಹೋಗುತ್ತೀನಿ,ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ: ಭಾಗ್ಯಲಕ್ಷ್ಮಿ ಶ್ರೇಷ್ಠ ಮದುವೆ
'ಚಿರುಗೆ ಎರಡು ದಿನ ಅವಕಾಶವಿತ್ತು ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ನೋವು ಇದೆ. ಆ ಸಮಯದಲ್ಲಿ ಕೋವಿಡ್ ಇತ್ತು ಅಲ್ಲದೆ ಸಾಕಷ್ಟು ಸ್ಟ್ರಿಕ್ಟ್ ರೂಲ್ಸ್‌ಗಳು ಇತ್ತು...ಅದೆಲ್ಲಾ ಇರಲಿಲ್ಲ ಅಂದಿದ್ರೆ ಖಂಡಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ವಿ. ನಮ್ಮ ದುರಾದೃಷ್ಟ ಭಾನುವಾರ ಡಾಕ್ಟರ್‌ಗಳು ಇರಲಿಲ್ಲ ..ಇದು ಬ್ರೌನ್‌ಗೆ ಆದ ಸೀಜರ್ ಸರಿಯಾದ ಔಷದಿ ಕೊಡಬೇಡಿ ಸರಿಯಾದ ಮಾಹಿತಿ ಇರಲಿಲ್ಲ. ಇದು ವಿಧಿ ಎಲ್ಲಾ ಇದ್ದು ಏನೂ ಇರಲ್ಲ. ಬಹಳ ಪ್ರೀತಿಯಿಂದ ಮುದ್ದಾಡಿ ಬೆಳೆಸಿದ ಮಗಳು ಮೇಘನಾ ಆಕೆಯನ್ನು ನೋಡಿದರೆ ಬೇಸರವಾಗುತ್ತದೆ. ನನ್ನ ಗಮನ ಈಗ ರಾಯನ್ ಮೇಲೆ ಇದೆ ಏಕೆಂದರೆ ಕೆಲವು ವರ್ಷ ಆದ ಮೇಲೆ ಅಪ್ಪ ಅನ್ನೋದು ಅವನ ತಲೆಯಲ್ಲಿ ಬಂದೇ ಬರುತ್ತದೆ ಏಕೆಂದರೆ ಸ್ಕೂಲ್‌ಗೆ ಹೋಗುವ ಹುಡುಗ ಅಲ್ಲಿ ಜನರನ್ನು ನೋಡಿ ಅವನಿಗೆ ಕೆಲವೊಂದು ಮೈನಸ್ ಆಗಿ ಕಾಣಿಸುತ್ತದೆ. ಮೇಘನಾಳಿಗೂ ಹೇಳಿದ್ದೀನಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾಳೆ ನಾವು ತಾತ ಅಜ್ಜಿಯಾಗಿ ಪ್ರೀತಿ ಕೊಡುತ್ತಿದ್ದೀವಿ. ಪಾಪ ಆ ಮಗುವಿಗೆ ಈ ಕಷ್ಟ ಎದುರು ಆಯ್ತು ಅಲ್ವಾ ಅಂತ ಬೇಸರ ಮಾಡಿಕೊಳ್ಳುತ್ತೀನಿ' ಎಂದು ಸುಂದರ್ ರಾಜ್ ಹೇಳಿದ್ದಾರೆ.
ಹೆಣ್ಣುಮಗು ಹುಟ್ಟಿದ್ದು ನಿನಗೆ ಶಾಪ;ಮೆಸೇಜ್ ಮಾಡಿದವನಿಗೆ ಗ್ರಹಚಾರ ಬಿಡಿಸಿದ 'ಸುಬ್ಬಲಕ್ಷ್ಮಿ ಸಂಸಾರ' ನಟಿ ಪಂಕಜಾ!