Asianet Suvarna News Asianet Suvarna News

ಈ ವಾರ ತೆರೆ ಮೇಲೆ 'ಶುಗರ್ ಫ್ಯಾಕ್ಟರಿ' ರಿಲೀಸ್: ಪಬ್‌ನಿಂದ ಆರಂಭ.. ಪಬ್‌ನಲ್ಲೇ ಕ್ಲೈಮ್ಯಾಕ್ಸ್.!

'ಶುಗರ್ ಫ್ಯಾಕ್ಟರಿ' ಈ ವಾರ ನವೆಂಬರ್ 24 ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೈಲರ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲೂ ಟ್ರೈಲರ್ ರಿಲೀಸ್ ಆದ ಬಳಿಕ ಇದೊಂದು ಪಕ್ಕಾ ಯೂತ್‌ಫುಲ್ ಸಿನಿಮಾ ಅನ್ನೋದು ಗೊತ್ತಿದೆ.

Darling Krishna Starrer Sugar Factory Released On Nov 24th gvd
Author
First Published Nov 23, 2023, 8:27 PM IST

'ಶುಗರ್ ಫ್ಯಾಕ್ಟರಿ' ಈ ವಾರ ನವೆಂಬರ್ 24 ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೈಲರ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲೂ ಟ್ರೈಲರ್ ರಿಲೀಸ್ ಆದ ಬಳಿಕ ಇದೊಂದು ಪಕ್ಕಾ ಯೂತ್‌ಫುಲ್ ಸಿನಿಮಾ ಅನ್ನೋದು ಗೊತ್ತಿದೆ. 'ಶುಗರ್ ಫ್ಯಾಕ್ಟರಿ' ಈ ವಾರ ನವೆಂಬರ್ 24 ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೈಲರ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. 

ಅದರಲ್ಲೂ ಟ್ರೈಲರ್ ರಿಲೀಸ್ ಆದ ಬಳಿಕ ಇದೊಂದು ಪಕ್ಕಾ ಯೂತ್‌ಫುಲ್ ಸಿನಿಮಾ ಅನ್ನೋದು ಗೊತ್ತಿದೆ. ಶುಗರ್ ಫ್ಯಾಕ್ಟರಿಯಲ್ಲಿ 100% ಮನರಂಜನೆ ಗ್ಯಾರಂಟಿ. ಯೂತ್‌ಫುಲ್ ಸ್ಟೋರಿ ಜೊತೆ ಹಾಸ್ಯ ಭರಿತ ಸಂಭಾಷಣೆ ಯುವ ಮನಸ್ಸುಗಳಿಗೆ ಮತ್ತಷ್ಟು ಕಿಕ್ ಕೊಡುತ್ತೆ. ಸಿನಿಮಾದುದ್ದಕ್ಕೂ ನಾನ್ ಸ್ಟಾಪ್ ಎಂಟರ್‌ಟೈನ್ಮೆಂಟ್ ಫಿಕ್ಸ್ ಅಂತ ಟ್ರೈಲರ್ ಹೇಳಿದೆ. ಆದ್ರೆ ಹೊಸ ವಿಷ್ಯ ಏನ್ ಗೊತ್ತಾ.?  'ಶುಗರ್ ಫ್ಯಾಕ್ಟರಿ' ನೈಜ ಘಟನೆಯ ಸಿನಿಮಾ ಆಗಿದ್ದು, ಪಬ್‌ನಿಂದ ಆರಂಭವಾಗಿ ಪಬ್‌ನಲ್ಲೇ ಕ್ಲೈಮ್ಯಾಕ್ಸ್ ಮುಗಿತುತ್ತಂತೆ. ಸ್ಯಾಂಡಲ್‌ವುಡ್‌ನಲ್ಲಿ ಪಬ್ ಕಲ್ಚರ್ ಇಟ್ಟುಕೊಂಡು ಬಂದು ಸಿನಿಮಾ ತೀರಾ ವಿರಳ. 

ಈಗ ದೀಪಕ್ ಅರಸ್ ಪಬ್‌ನಲ್ಲಿ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇದು ಪಬ್‌ ಒಂದರಲ್ಲಿ ಕಣ್ಮುಂದೆ ನಡೆದ ಒಂದು ಚಿಕ್ಕ ಘಟನೆಯ ಸಿನಿಮಾ ಅಂತೆ. ಇವತ್ತು ಕರ್ನಾಟಕದಲ್ಲೂ ಕಬ್ ಕಲ್ಚರ್ ಬೇರೂರುತ್ತಿದೆ. ಈಗಿನ ಟ್ರೆಂಡ್ ನೋಡಿ ಬಾಲಿವುಡ್ ರೇಂಜ್ಗೆ ಶುಗರ್ ಫ್ಯಾಕ್ಟರಿ ಮಾಡಿದ್ದಾರಂತೆ. ಈ ಕಥೆ ಹುಟ್ಟೋದು ಪಬ್‌ನಲ್ಲೇ.. ಇಂಟರ್‌ವಲ್ ಬರೋದೂ ಕೂಡ ಪಬ್‌ನಲ್ಲೇ.. ಕ್ಲೈಮ್ಯಾಕ್ಸ್ ಆಗೋದು ಕೂಡ ಒಂದು ಪಬ್‌ನಲ್ಲೇ.

ಡಾರ್ಲಿಂಗ್ ಪ್ರಭಾಸ್ ಸಕ್ಸಸ್‌ಗೆ ರೆಡಿಯಾಗ್ತಿದೆ ವೇದಿಕೆ?: ಶುರುವಾಯ್ತು ಸಲಾರ್ ಟಿಕೆಟ್ ಬುಕ್ಕಿಂಗ್!

ಮೂವರು ಹುಡುಗಿಯರ ಜೊತೆ ನಾಯಕ ಆರ್ಯನ ಲವ್, ಪ್ಯಾಚಪ್, ಬ್ರೇಕಪ್ ಕಹಾನಿಯೇ ಈ 'ಶುಗರ್ ಫ್ಯಾಕ್ಟರಿ'. ಶೂಗರ್ ಫ್ಯಾಕ್ಟರಿ ನಿರ್ದೇಶಕ ದೀಪಕ್ ಅರಸ್. ಈ ಹಿಂದೆ ಅಮೂಲ್ಯ ನಟಿಸಿದ್ದ 'ಮನಸಾಲಜಿ' ಸಿನಿಮಾ ನಿರ್ದೇಶಿಸಿದ್ರು. ಈಗ 12 ವರ್ಷಗಳ ಬಳಿಕ ಮತ್ತೆ 'ಶುಗರ್ ಫ್ಯಾಕ್ಟರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿಗೆ ದೀಪಕ್ ಆಕ್ಷನ್ ಕಟ್ ಹೇಳಿದ್ದಾರೆ. ನವೆಂಬರ್ 24ಕ್ಕೆ ಸಿನಿಮಾ ತೆರೆ ಮೇಲೆ ಮೂಡಿ ಬರಲಿದೆ.

Follow Us:
Download App:
  • android
  • ios