Asianet Suvarna News Asianet Suvarna News

ಡಾರ್ಲಿಂಗ್ ಪ್ರಭಾಸ್ ಸಕ್ಸಸ್‌ಗೆ ರೆಡಿಯಾಗ್ತಿದೆ ವೇದಿಕೆ?: ಶುರುವಾಯ್ತು ಸಲಾರ್ ಟಿಕೆಟ್ ಬುಕ್ಕಿಂಗ್!

ಡಾರ್ಲಿಂಗ್ ಪ್ರಭಾಸ್. ಒಂದೇ ಒಂದು ಬಿಗ್ ಸಕ್ಸಸ್ ಸಿನಿಮಾ ಕೋಡೋ ಆತುರದಲ್ಲಿದ್ದಾರೆ. ಬಾಹುಬಲಿ ನಂತರ ಮಾಡಿದ್ದ ಸಿನಿಮಾಗಳೆಲ್ಲಾ ಹೇಳಿಕೊಳ್ಳೋ ಗೆಲುವು ದಾಖಲಿಸಲಿಲ್ಲ. ನಂಬಿದ್ದ ಸಿನಿಮಾಗಳೆಲ್ಲಾ ಡಾರ್ಲಿಂಗ್ಗೆ ಕೈ ಕೊಟ್ವು. 

prabhas prashanth neel movie salaar full fledged advance bookings to commence in america gvd
Author
First Published Nov 23, 2023, 8:17 PM IST

ಡಾರ್ಲಿಂಗ್ ಪ್ರಭಾಸ್. ಒಂದೇ ಒಂದು ಬಿಗ್ ಸಕ್ಸಸ್ ಸಿನಿಮಾ ಕೋಡೋ ಆತುರದಲ್ಲಿದ್ದಾರೆ. ಬಾಹುಬಲಿ ನಂತರ ಮಾಡಿದ್ದ ಸಿನಿಮಾಗಳೆಲ್ಲಾ ಹೇಳಿಕೊಳ್ಳೋ ಗೆಲುವು ದಾಖಲಿಸಲಿಲ್ಲ. ನಂಬಿದ್ದ ಸಿನಿಮಾಗಳೆಲ್ಲಾ ಡಾರ್ಲಿಂಗ್ಗೆ ಕೈ ಕೊಟ್ವು. ಆದ್ರೆ ಈಗ ಪ್ರಭಾಸ್ ಗೆದ್ದೇ ಗೆಲ್ತೇನೆ ಅಂತ ನಂಬಿ ಕೂತಿರೋ ಒಂದೇ ಒಂದು ಸಿನಿಮಾ ಸಲಾರ್. ಸಲಾರ್ ಸಿನಿಮಾದ ಜನಕ ಪ್ರಶಾಂತ್ ನೀಲ್. 

ಅಲ್ಲಿಗೆ ಪ್ರಭಾಸ್ ಗೆದ್ದೇ ಗೆಲ್ತಾರೆ ಅನ್ನೋ ಆಸೆ ಅವ್ರ ಅಭಿಮಾನಿಗಳಲ್ಲಿ ತುಸು ಹೆಚ್ಚಾಗೆ ಇದೆ. ಯಾಕಂದ್ರೆ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಟಾಪ್ ಟೈರೆಕ್ಟರ್. ಕೆಜಿಎಫ್ ಸಿನಿಮಾದಲ್ಲಿ ನೀಲ್ ಮಾಡಿದ್ದ ಮೋಡಿಯನ್ನ ಇಡೀ ಜಗತ್ತೇ ಕೊಂಡಾಡಿದೆ. ಸಲಾರ್ ಸಿನಿಮಾ ವಿಶ್ವದಾದ್ಯಂತ ಡಿಸೆಂಬರ್ 22ಕ್ಕೆ ರಿಲೀಸ್ ಆಗ್ತಿದೆ. ಸಲಾರ್ ತೆರೆ ಮೇಲೆ ಅಪ್ಪಳಿಸೋಕೆ ಕರೆಕ್ಟ್ ಆಗಿ ಇನ್ನು ಒಂದು ತಿಂಗಳು ಭಾಗಿ ಇದೆ. ಆದ್ರೆ ಪ್ರಭಾಸ್ ಫ್ಯಾನ್ಸ್ಗೆ ಸಲಾರ್ ನೋಡೋ ಭಾರಿ ಆತುರ. ಸಲಾರ್ ಟ್ರೈಲರ್ ಇನ್ನೂ ರಿಲೀಸ್ ಆಗಿಲ್ಲ. ಸಿನಿಮಾ ನೋಡಲು ತಮ್ಮ ಸೀಟು ಕಾಯ್ದಿರಿಸಿಕೊಳ್ಳಲು ಟಿಕೆಟ್ ಬುಕ್ಕಿಂಗ್ ಮಾಡ್ತಿದ್ದಾರೆ. 

ಡಿಸೆಂಬರ್1 ಕ್ಕೆ ಸಲಾರ್ ಪ್ಯಾನ್ ಇಂಡಿಯಾ ಟ್ರೈಲರ್ ರಿಲೀಸ್ ಆಗುತ್ತೆ. ಸಲಾರ್ ದೇಶ ಮಾತ್ರವಲ್ಲ ವಿದೇಶದಲ್ಲೂ ರಿಲೀಸ್ ಆಗ್ತಿದೆ. ಹೀಗಾಗಿ ಅಮೇರಿಕಾದಲ್ಲಿ ಸಲಾರ್ ಟಿಕೆಟ್ ಬುಕ್ಕಿಂಗ್ ಆಗ್ಲೇ ಶುರುವಾಗಿದೆ. ಸಲಾರ್ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ ಟಿಕೆಟ್ ಮಾರಾಟ ಶುರು ಮಾಡಿದ್ದು 5 ಸಾವಿರ ಟಿಕೆಟ್ಗಳು ಸೇಲ್ ಆಗಿವೆ. ಇದರಿಂದ ಕೋಟ್ಯಾಂತಾರ ರೂಪಾಯಿ ಆದಾಯ ಬಂದಿದೆಯಂತೆ.  ವಿದೇಶದಲ್ಲಿ ಸಲಾರ್ ಕ್ರೇಜ್ ನೋಡಿದ್ರೆ ಪ್ರಭಾಸ್ ಈ ಹಿಂದೆ ಕಂಡ ಸೋಲುಗಳೆಲ್ಲಾ ಮರೆತು ಹೋಗ್ತಾರೆ ಅನ್ನೋದ್ರಲ್ಲಿ ನೋ ಡೌಟ್. ಸಲಾರ್ ಕ್ರೇಕ್ ಪ್ಯಾನ್ ಇಂಡಿಯಾ ತುಂಬೆಲ್ಲಾ ಇದೆ. ಇದು ಪ್ರಭಾಸ್ ಫ್ಯಾನ್ಸ್ ಗೆ ಹೊಸ ಹುರುಪು ತಂದಿರೋದಂತು ಸುಳ್ಳಲ್ಲ.

'ಮ್ಯಾಕ್ಸ್‌' ಸಿನಿಮಾದಲ್ಲಿ ಇವರೇ ವಿಲನ್: ಕಿಚ್ಚನ ಮುಂದೆ ಅಬ್ಬರಿಸುವವರು ಇವರೇ!

ಸಲಾರ್ ಚಿತ್ರದ ವಿತರಣೆ ಹೊಣೆ ಹೊತ್ತಿದ್ಯಾರು: ಸಲಾರ್ ಸಿನಿಮಾ ನಿರ್ಮಾಪಕರೇ ಈ ಚಿತ್ರವನ್ನು ವಿತರಣೆ ಕೂಡ ಮಾಡುತ್ತಿದ್ದಾರೆ ಎಂಬುದು ಅವರದೇ ಘೋಷಣೆ ಮೂಲಕ ಕನ್ಫರ್ಮ್ ಆಗಿದೆ. 'ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭವ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ ಸಲಾರ್‌' ಎಂದು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹೊಂಬಾಳೆ ಸಂಸ್ಥೆ ಬರೆದುಕೊಂಡಿದೆ. ಮುಂದಿನ ತಿಂಗಳು ಬಿಡುಗಡೆ, ಸಲಾರ್ ಚಿತ್ರದ ಫಲಿತಾಂಶಕ್ಕೆ ಇನ್ನೊಂದು ತಿಂಗಳು ಕಾಯಬೇಕಷ್ಟೇ. 

Follow Us:
Download App:
  • android
  • ios