Asianet Suvarna News Asianet Suvarna News

ಪಿಸಿ ಶೇಖರ್‌ ಜತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ!

ಡಾರ್ಲಿಂಗ್ ಕೃಷ್ಣ ಮತ್ತೊಂದು ಚಿತ್ರಕ್ಕೆ ನಾಯಕನಾಗಿದ್ದಾರೆ. ಪಿಸಿ ಶೇಖರ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 

Darling Krishna announces new film project with Director PC Shekar vcs
Author
Bangalore, First Published Aug 30, 2021, 12:28 PM IST
  • Facebook
  • Twitter
  • Whatsapp

'ಲವ್ ಮಾಕ್ಟೇಲ್' ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ ಮತ್ತೊಂದು ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಕೃಷ್ಣ ಎಷ್ಟೇ ಪ್ರಾಜೆಕ್ಟ್ ಮಾಡಿದರೂ ನೆಟ್ಟಿಗರು ಕೇಳುವುದು ಒಂದೇ ಪ್ರಶ್ನೆ ಲವ್ ಮಾಕ್ಟೇಲ್ 2 ಯಾವಾಗ ರಿಲೀಸ್ ಎಂದು.

'ರೋಮಿಯೋ ಸಿನಿಮಾ ಆದ್ಮೇಲೆ ಅಂಥದ್ದೊಂದು ಜಾನರ್ ಸಿನಿಮಾ ಮಾಡುತ್ತಿರುವೆ. ಇದು ಲವ್ ಕಾಮಿಡಿ ಭಾವನೆ ಹಾಗೂ ಫ್ಯಾಮಿಲಿ ಅಂಶಗಳನ್ನು ಹೊಂದಿದೆ. ಈಗಿನ ಕಾರ್ಪೋರೇಟ್ ವಾತಾವರಣ ಕುಟುಂಬ ಹಿನ್ನೆಲೆ ಹೊಂದಿರುವ ಕಥಾ ನಾಯಕ. ಹಳ್ಳಿಗಳಲ್ಲಿ ನಡೆಯುವ ದೃಶ್ಯ ಇದೆ.  ಬೆಂಗಳೂರು, ಮಂಡ್ಯದಲ್ಲಿ ಚಿತ್ರೀಕರಣ ಮಾಡಬೇಕೆಂದು ಅಂದು ಕೊಂಡಿದ್ದೀವಿ,' ಎಂದು ಪಿಸಿ ಶೇಖರ್ ಹೇಳಿದ್ದಾರೆ. 

'ಶ್ರೀಕೃಷ್ಣ @ ಜಿಮೇಲ್‌.ಕಾಮ್‌' ಸಿನಿಮಾ ಶೂಟಿಂಗ್‌ ಮುಕ್ತಾಯ!

ಈ ಚಿತ್ರಕ್ಕೆ ಕಡ್ಡಿಪುಡಿ ಚಂದ್ರು ಬಂಡವಾಳ ಹಾಕುತ್ತಿದ್ದಾರೆ. ಯಾವುದೋ ಕಾರಣಕ್ಕೆ ಶೇಖರ್ ಮತ್ತು ಚಂದ್ರು ಭೇಟಿಯಾಗಿದ್ದರು. ಈ ವೇಳೆ ಮುಂದಿನ ಚಿತ್ರದ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪಿಸಿ ಶೇಖರ್ ಚಿತ್ರಕಥೆ ವಿವರಿಸಿದ್ದಾರೆ. ಕಥೆ ಕೇಳಿ ಸುಮ್ಮನೆ  ಹೋದ ಕಡ್ಡಿಪುಡಿ ಬಂದ್ರು ಈ ಚಿತ್ರವನ್ನು ತಾವೇ ನಿರ್ಮಾಣ ಮಾಡುತ್ತೇನೆ, ಎಂದು ನಿರ್ಧರಿಸಿದ್ದಾರೆ. 

ಲವ್‌ ಮಾಕ್ಟೇಲ್ 2, ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ಲವ್ ಮಿ ಆರ್ ಹೇಟ್ ಮೀ, ಶ್ರೀಕೃಷ್ಣ ಅಟ್ ಜಿ-ಮೇಲ್.ಕಾಮ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ.

Follow Us:
Download App:
  • android
  • ios