ಮೈಸೂರಿನ ಸಂದೇಶ್ ಹೋಟೆಲ್‌ನಲ್ಲಿ ‘ಶ್ರೀಕೃಷ್ಣ @ ಜಿಮೇಲ್‌.ಕಾಮ್‌’ ಸಿನಿಮಾ ಚಿತ್ರೀಕರಣ ಮುಕ್ತಾಯ.  

ಕನ್ನಡ ಚಿತ್ರರಂಗದಲ್ಲಿ ಪ್ರೀತಿಯ ಹೊಸ ಅಲೆ ಎಬ್ಬಿಸಿದ ನಟ ಡಾರ್ಲಿಂಗ್ ಕೃಷ್ಣ ತಮ್ಮ ಮುಂದಿನ ಸಿನಿಮಾ ಶ್ರೀಕೃಷ್ಣ ಆ್ಯಟ್ ಜಿಮೇಲ್.ಕಾಮ್ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಟಿ ಭಾವನಾ ಕಾಣಿಸಿಕೊಂಡಿದ್ದಾರೆ. 

ಲವ್ ಮಾಕ್ಟೀಲ್ ಸಿನಿಮಾ ವೀಕ್ಷಿಸಿ ಫಿದಾ ಆಸ್ಟ್ರೇಲಿಯಾ ಪತ್ರಕರ್ತೆ!

ನಾಗಶೇಖರ್‌ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂದೇಶ್‌ ನಾಗರಾಜ್‌ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಕೊನೆಯ ಭಾಗವನ್ನು ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಚಂದನ್‌ ಗೌಡ ಎರಡನೇ ನಾಯಕನಾಗಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಿರ್ದೇಶಕ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧು ಕೋಕಿಲ, ಚಿಕ್ಕಣ್ಣ, ಸಾತ್ವಿಕ್‌ ಅವರ ತಾರಾ ಬಳಗವೂ ಈ ಚಿತ್ರದಲ್ಲಿದೆ. 

ಮನೆಗೆ ಹೊಸ ಅತಿಥಿ: ಆರೈಕೆಯಲ್ಲಿ ಮಿಲನಾ-ಕೃಷ್ಣ ಬ್ಯುಸಿ!

ಚಿತ್ರದ ಪ್ರಮುಖ ಹೈಲೈಟ್‌ ಹಾಡುಗಳು. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಕವಿರಾಜ್‌ ಗೀತ ರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಒಟ್ಟು ತೊಂಬತ್ತು ದಿನಗಳ ಚಿತ್ರೀಕರಣದಲ್ಲಿಯೇ ಸಿನಿಮಾವನ್ನು ಮುಗಿಸಿದ್ದಾರೆ. ಸದ್ಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ.