ಸ್ಯಾಂಡಲ್‌ವುಡ್‌ ಓನ್ ಆ್ಯಂಡ್ ಓನ್ಲಿ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಗ್‌ಗಳಿಗೇ ಚಾಲೆಂಜ್‌ ಹಾಕುವ ಸರದಾರ, ಖಡಕ್ ಐರಾವತ ದರ್ಶನ್‌ ಸೋಷಿಯಲ್‌ ಮೀಡಿಯಾದ ಮೂಲಕ ತಮ್ಮೆಲ್ಲಾ ಅಭಿಮಾನಿಗಳಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಂಕಲ್ ಅಂತ ಹೇಳೆಂದು ಅಮೂಲ್ಯಗೆ ಕಿಚಾಯಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ 

ರಾಬರ್ಟ್‌ ಪೋಸ್ಟರ್ ಲುಕ್ ವಿಶ್ ಎಲ್ಲೆಡೆ ವೈರಲ್ ಆಗುತ್ತಿದೆ. ಆದರ ಜೊತೆಗೆ ಇಂದು ವಿಶೇಷವಾಗಿ ಮತ್ತೊಂದು ಫೋಟೋ ವೈರಲ್ ಆಗುತ್ತಿದೆ. ಅದುವೇ ಅವಳಿ ಗಂಡು ಮಕ್ಕಳ ಜೊತೆ ದರ್ಶನ್ ಕಾಣಿಸಿಕೊಂಡಿರುವುದು.

ಫೋಟೋದಲ್ಲಿರುವ ಅವಳಿ ಮಕ್ಕಳು ಯಾರೆಂದು ಇನ್ನೂ ತಿಳಿದಿಲ್ಲ. ಆದರೆ ಡಿ-ಬಾಸ್ ಎಲ್ಲೇ ಹೋದರೂ ಮಕ್ಕಳು ಹಾಗೂ ಹಿರಿಯರು ಫೋಟೋಗೆ ಮುಗಿ ಬೀಳುತ್ತಾರೆ. ಕೆಲವೊಮ್ಮೆ ಹಬ್ಬದ ದಿನ ದರ್ಶನ್ ಆಪ್ತ ಗೆಳೆಯರ ಮನೆಯಲ್ಲಿ ಸಮಯ ಕಳೆಯುತ್ತಾರೆ. ಕೆಲವು ಮೂಲಗಳು ಈ ಫೋಟೋ ಕಬಿನಿಯಲ್ಲಿ ಸೆರೆ ಹಿಡಿದಿರುವುದು ಎನ್ನಲಾಗಿದೆ.

ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ಡಿ-ಬಾಸ್ ವಿರುದ್ಧ ದೂರು! 

ಒಂದು ಮಕ್ಕಳ ದಿನಾಚರಣೆ ಆಗಿರುವ ಕಾರಣ ಡಿ-ಬಾಸ್ ಫ್ಯಾನ್ ಪೇಜ್‌ಗಳಲ್ಲಿ ಮಕ್ಕಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.