ಬೆಂಗಳೂರು (ಅ.31):  ನನ್ನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲು ಅಂಕಲ್‌ ಅಂತ ಕರೆದಿದ್ದು ನೀನೇ (ಅಮೂಲ್ಯ). ಹೇಳಪ್ಪಿ ಅಂಕಲ್‌ ಅಂತನೇ ಹೇಳು ಎಂದು ಅಮೂಲ್ಯಳಿಗೆ ದರ್ಶನ್‌ ತಮಾಷೆ ಮಾಡಿದ ಪ್ರಸಂಗ ನಡೆಯಿತು.

ಶುಕ್ರವಾರ ಅರ್‌ಆರ್‌ ನಗರದ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಅಮೂಲ್ಯ ದರ್ಶನ್‌ ಅವರನ್ನು ಬಾಸ್‌ ಎಂದು ಸಂಬೋಧಿಸಿದರು. ಆಗ ದರ್ಶನ್‌, ‘ನನ್ನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲು ಅಂಕಲ್‌ ಅಂತ ಕರೆದಿದ್ದು ನೀನೇ (ಅಮೂಲ್ಯ). ಹೇಳಪ್ಪಿ ಅಂಕಲ್‌ ಅಂತನೇ ಹೇಳು ಪರವಾಗಿಲ್ಲ’ ಎಂದು ಅಮೂಲ್ಯಳ ಕೆನ್ನೆ ಚಿವುಟಿ ಪ್ರೀತಿ ತೋರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಮೂಲ್ಯ, ‘ಇಲ್ಲ ನಾನು ಹೇಳೋದಿಲ್ಲ. ಯೂ ಆರ್‌ ಅವರ್‌ ಹೀರೋ. ಐ ಕಾಂಟ್‌ ಕಾಲ್‌ ಯೂ ಅಂಕಲ್‌..’ ಎಂದು ಅಮೂಲ್ಯ ಪಟ್ಟುಹಿಡಿದಿದ್ದರು. 

 

"

ಯಾರನ್ನೂ ಟೀಕಿಸದೇ ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಮತಯಾಚನೆ

ರಾಜರಾಜೇಶ್ವರಿ ನಗರ ಉಪ ಚುನಾವಣಾ ಅಖಾಡದ ಕ್ಲೈಮ್ಯಾಕ್ಸ್‌ನಲ್ಲಿ ಬಿಜೆಪಿ ಹುರಿಯಾಳು ಹಾಗೂ ಮಾಜಿ ಶಾಸಕ ಮುನಿರತ್ನ ಅವರಿಗೆ ಶಕ್ತಿ ತುಂಬಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಶುಕ್ರವಾರ ದಿನವೀಡಿ ರೋಡ್‌ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದಾರೆ. 

ಆರ್ ಆರ್‌ ನಗರದಲ್ಲಿ ಒಡೆಯನ ಅಬ್ಬರ.. ದಾಸನ ಡೈಲಾಗ್ ಚಮತ್ಕಾರ

ಪ್ರಚಾರದುದ್ದಕ್ಕೂ ಎಲ್ಲಿಯೂ ಕೂಡ ವಿರೋಧಿ ಅಭ್ಯರ್ಥಿ ಹೆಸರು ಪ್ರಸ್ತಾಪಿಸದೆ, ವಿರೋಧಿಗಳ ಮಾತುಗಳಿಗೆ ಪ್ರತಿಕ್ರಿಯಿಸದೆ, ಟೀಕೆಗಳಿಗೆ ಟಾಂಗ್‌ ನೀಡದೆ ದರ್ಶನ್‌, ತಮ್ಮ ಎಂದಿನ ಶೈಲಿಯಲ್ಲೇ ಮುಗುಳು ನಗೆ ಬೀರುತ್ತ ಮುನಿರತ್ನ ಗೆಲುವಿಗೆ ಮತದಾರನಲ್ಲಿ ಮೊರೆಯಿಟ್ಟರು. ಕೊರೋನಾ ಕಾಲದಲ್ಲಿ ಆರ್‌.ಆರ್‌.ನಗರ ಕ್ಷೇತ್ರದ ಜನರ ನೋವಿಗೆ ಮುನಿರತ್ನ ಸ್ಪಂದಿಸಿದ್ದಾರೆ. ಈ ಮಾನವೀಯತೆ ಗುಣಕ್ಕಾಗಿ ಚುನಾವಣೆಯಲ್ಲಿ ಅವರ ಪರ ನಾನು ಪ್ರಚಾರ ನಡೆಸುತ್ತಿದ್ದೇನೆ ಎಂದು ಭಾಷಣದಲ್ಲಿ ದರ್ಶನ್‌ ಪದೇ ಪದೇ ಪ್ರಸ್ತಾಪಿಸಿದ್ದರು. 

ಇನ್ನೂ ದರ್ಶನ್‌ ಅವರಿಗೆ ಕಂದಾಯ ಸಚಿವ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಟ ಹಾಗೂ ಸಚಿವ ಬಿ.ಸಿ.ಪಾಟೀಲ್‌, ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಹಾಗೂ ನಟಿ ಅಮೂಲ್ಯ ಸಾಥ್‌ ನೀಡಿದ್ದರು. 

'ಆರ್‌ಆರ್‌ ನಗರ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸ್ತೀವಿ, ಕೈ ಕುತಂತ್ರವೆಲ್ಲಾ ಇಲ್ಲಿ ನಡೆಯಲ್ಲ'

‘ಐರಾವತ’ ಯಾತ್ರೆ:

ಯಶವಂತಪುರದಿಂದ ಬೆಳಗ್ಗೆ 11ಕ್ಕೆ ಪ್ರಚಾರ ಪ್ರಾರಂಭಿಸಿದ ದರ್ಶನ್‌, ದಣಿವರಿಯದೆ ರಾತ್ರಿ 10ರವರೆಗೆ ಆರ್‌.ಆರ್‌.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 5ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮತಯಾಚಿಸಿದರು. ಜಾಲಹಳ್ಳಿ, ಯಶವಂತಪುರ, ಮತ್ತಿಕೆರೆ, ಜೆ.ಪಿ.ನಗರ, ಎಚ್‌ಎಂಟಿ, ಲಕ್ಷ್ಮೇನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ನಂದಿನಿ ಲೇಔಟ್‌, ಕಂಠೀವರ ನಗರಗಳಲ್ಲಿ ರೋಡ್‌ ಶೋ ಮೂಲಕ ಮುನಿರತ್ನ ಅವರಿಗೆ ಮತ ನೀಡುವಂತೆ ದರ್ಶನ್‌ ಮನವಿ ಮಾಡಿದ್ದಾರೆ.

ಡಿ ಬಾಸ್‌ ಎಂದು ಕೂಗಿದ ಅಭಿಮಾನಿಗಳು:

ಇನ್ನೂ ಪ್ರಚಾರದಲ್ಲಿ ಗಲ್ಲಿ ಗಲ್ಲಿಯಲ್ಲೂ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ದರ್ಶನ್‌ ರೋಡ್‌ ಶೋ ಸಾಗಿದ ರಸ್ತೆಯಗಳ ಇಕ್ಕೆಲ್ಲಗಳೆಲ್ಲೆಲ್ಲ ಜನರು ಜಮಾಯಿಸಿದ್ದರು. ಕಟ್ಟಡಗಳ ಮೇಲೆ ನಿಂತು ದರ್ಶನ್‌ಗೆ ಜೈಕಾರ ಕೂಗಿದರು. ಡಿ ಬಾಸ್‌ ಎಂಬ ಘೋಷಣೆ ಮಾರ್ದನಿಸಿತು. ಎಲ್ಲೆಡೆ ಹೂಮಳೆ ಸುರಿಸಿದ ಅಭಿಮಾನಿಗಳು, 200 ಕೇಜಿ ತೂಕದ ಸೇಬಿನ ಹಾರವನ್ನು ದರ್ಶನ್‌ಗೆ ಹಾಕಿ ಸಂಭ್ರಮಿಸಿದರು.

ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ, ಸ್ಟಾರ್ ಪ್ರಚಾರಕಿ ಆಗ್ತಾರಾ..?

ಕುರುಕ್ಷೇತ್ರ ಸಿನಿಮಾಕ್ಕೆ ಬಂದಾಗ ಬೈದು ಕಳ್ಸಿದ್ದೆ:

‘ಕುರುಕ್ಷೇತ್ರ ಸಿನಿಮಾ ಮಾಡೋಣ ಎಂದೂ ಮನೆಗೆ ಬಂದಾಗ ಮುನಿರತ್ನ ಅವರಿಗೆ ಬೈದು ವಾಪಸ್‌ ಕಳುಹಿಸಿದ್ದೆ’ ಎಂದ ದರ್ಶನ್‌, ಆದರೆ ಪಟ್ಟು ಬಿಡದೆ ಅಂತಹ ಅದ್ಧೂರಿ ಸಿನಿಮಾವನ್ನು ಅವರು ನಿರ್ಮಿಸಿದರು. ಕುರುಕ್ಷೇತ್ರದಂತಹ ಸಿನಿಮಾ ಮಾಡುವುದಕ್ಕೆ ಒಂದು ಗುಂಡಿಗೆ ಎರಡು ಗುಂಡಿಗೆ ಇದ್ದರೆ ಸಾಲದು. ಹತ್ತು ಗುಂಡಿಗೆ ಇದ್ದವನು ಮಾತ್ರ ಸಿನಿಮಾ ಮಾಡಲು ಸಾಧ್ಯ. ಅಸಾಧ್ಯವಾದ ಕುರುಕ್ಷೇತ್ರವನ್ನು ತೆರೆ ಮೇಲೂ ತಂದು ದೇಶವೇ ನೋಡುವಂತೆ ಮುನಿರತ್ನ ಮಾಡಿದ್ದರು ಎಂದು ಹೊಗಳಿದರು.

ಅಶೋಕ್‌ ಮನೆಯಲ್ಲಿ ದರ್ಶನ್‌ ಭೋಜನ ಕೂಟ:

ಬೆಳಗ್ಗೆಯಿಂದ ಬಿರು ಬಿಸಿಲು ಲೆಕ್ಕಿಸದರೆ ಪ್ರಚಾರ ನಡೆಸಿದ ನಟ ದರ್ಶನ್‌, ಜಾಲಹಳ್ಳಿಯಲ್ಲಿರುವ ಕಂದಾಯ ಸಚಿವ ಆರ್‌.ಅಶೋಕ್‌ ಮನೆಯಲ್ಲಿ ಮಧ್ಯಾಹ್ನ ಊಟ ಮಾಡಿದರು. ಇನ್ನೂ ನಟನಿಗೆ ಸಚಿವರು ಭೂರಿ ಭೋಜನ ವ್ಯವಸ್ಥೆ ಮಾಡಿದ್ದರು. ಊಟ ಮುಗಿಸಿದ ನಂತರ ಮತ್ತೆ ಅವರ ಮತಬೇಟೆ ಶುರುವಾಯಿತು.

ಮುನಿರತ್ನ ಅಂಕಲ್‌ಗೆ ಓಟು ಕೊಡಿ ಎಂದ ನಟಿ ಅಮೂಲ್ಯ

ನಾನು ಚಲನಚಿತ್ರ ರಂಗದಿಂದ ರಾಜಕೀಯ ಕ್ಷೇತ್ರಕ್ಕೆ ಬರುತ್ತಿಲ್ಲ. ಮುನಿರತ್ನ ಅಂಕಲ್‌ ಪರವಾಗಿ ಮಾತ್ರ ಮತ ಕೇಳಲು ಬಂದಿದ್ದೇನೆ. ಬೆಳಗ್ಗೆಯಿಂದ ಪ್ರಚಾರಕ್ಕೆ ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ನಾನು ರಾಜರಾಜೇಶ್ವರ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿದ್ದೇನೆ. ಮುನಿರತ್ನ ಅವರು ತುಂಬಾ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಪ್ರಚಾರ ವೇಳೆ ನಟಿ ಅಮೂಲ್ಯ ವಿಶ್ವಾಸ ವ್ಯಕ್ತಪಡಿಸಿದರು.

ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು 

 

ದರ್ಶನ್‌ ಅವರ ಜೊತೆ ಪ್ರಚಾರ ನಡೆಸಿದ್ದ ಬಗ್ಗೆ ಟ್ವಿಟ್ಟರ್‌ನಲ್ಲಿ ನರೆದುಕೊಂಡಿರುವ ಅಮೂಲ್ಯ, ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ ಎಂದು ವಿನಂತಿಸಿಕೊಂಡಿದ್ದಾರೆ.