ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಜತೆಗೆ ಮಾಲ್‌ಗಳಲ್ಲೂ ಚಿತ್ರ ಪ್ರದರ್ಶನ ಇಲ್ಲ. ಚಿತ್ರಮಂದಿರಗಳು ಹಾಗೂ ಮಾಲ್‌ಗಳಲ್ಲಿನ ಚಿತ್ರ ಪ್ರದರ್ಶನವನ್ನು ಒಂದು ವಾರ ಕಾಲ ರದ್ದು ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಕೊರೋನಾ ಇಂಪ್ಯಾಕ್ಟ್ ಚಿತ್ರರಂಗದ ಆರ್ಥಿಕ ವಹಿವಾಟಿಗೆ ಹೊಡೆದ ನೀಡುವುದು ಅಷ್ಟೇ ಸತ್ಯ.

ಕೊರೋನಾ ಕಾರಣದಿಂದಾಗಿ ಈಗಾಗಲೇ ಫಿಕ್ಸ್‌ ಆಗಿದ್ದ ಕೆಲವು ಚಿತ್ರಗಳ ಆಡಿಯೋ ರಿಲೀಸ್‌, ಟೀಸರ್‌ ಲಾಂಚ್‌ನಂತಹ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮಗಳು ಮುಂದೂಡುವ ಸಾಧ್ಯತೆ ಇದೆ. ಬಹುತೇಕ ಈ ಕಾರ್ಯಕ್ರಮಗಳು ಮುಂದೂಲ್ಪಡುವುದು ಗ್ಯಾರಂಟಿ ಆಗಿದೆ. ಜತೆಗೆ ಸ್ಟಾರ್‌ ಹುಟ್ಟುಹಬ್ಬದ ಅದ್ದೂರಿ ಸಮಾರಂಭಗಳು ಕ್ಯಾನ್ಸಲ್‌ ಆಗಲಿವೆ. ಪುನೀತ್‌ ರಾಜ್‌ಕುಮಾರ್‌ ಮಾ.17ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಗಮನಾರ್ಹ.

Fact Check| ಕೊರೋನಾ ವಿರುದ್ಧ ಲಸಿಕೆ ಕಂಡು​ಹಿ​ಡಿದ ಇಸ್ರೇಲ್‌, ಅಮೆರಿ​ಕ!

ಸಾರ್ವಜನಿಕರ ಹಿತಾದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನು ಸ್ವಾಗತಿಸುತ್ತದೆ. ಸರ್ಕಾರ ಮತ್ತೆ ಯಾವಾಗ ಚಿತ್ರಮಂದಿರಗಳು ಹಾಗೂ ಮಾಲ್‌ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸುತ್ತದೋ ಅಲ್ಲಿ ತನಕ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. - ಜೈರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು

ಸದ್ಯಕ್ಕೆ ಈ ವಾರ ರಿಲೀಸ್‌ ಆದ ‘ಶಿವಾರ್ಜುನ’, ‘5 ಅಡಿ 7 ಅಂಗುಲ’, ‘ನರಗುಂದ ಬಂಡಾಯ’, ‘ನಮ್‌ ಕತೆ ನಿಮ್‌ ಜತೆ’ ಹಾಗೂ ‘ಅಂಬಾನಿ ಪುತ್ರ’ ಚಿತ್ರಗಳು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಸೇರಿ ಮಲ್ಟಿಪ್ಲೆಕ್ಸ್‌ಗಳಲ್ಲಿ ರಿಲೀಸ್‌ ಆಗಿದ್ದವು. ಅದೇ ರೀತಿ ಈ ಮುಂಚೆ ರಿಲೀಸ್‌ ಆಗಿದ್ದ ‘ಲವ್‌ ಮಾಕ್ಟೇಲ್‌’, ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಒಂದು ಶಿಕಾರಿಯ ಕತೆ’, ‘ದ್ರೋಣ’, ‘ಶಿವಾಜಿ ಸುರತ್ಕಲ್‌’, ‘ಬಿಚ್ಚುಗತ್ತಿ’ ಹಾಗೂ ‘ಕಾಣದಂತೆ ಮಾಯವಾದನು’ ಸೇರಿದಂತೆ ಹಲವು ಚಿತ್ರಗಳು ಮಲ್ಟಿಪ್ಲೆಕ್ಸ್‌ ಸೇರಿದಂತೆ ವಿವಿಧ ಮಾಲ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದವು. ಇವೆಲ್ಲ ಚಿತ್ರಗಳ ಚಿತ್ರ ಪ್ರದರ್ಶನ ಇಂದಿನಿಂದ(ಮಾ.14) ಬಂದ್‌ ಆಗಲಿವೆ. ಇವುಗಳ ಜತೆಗೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಯ ಚಿತ್ರಗಳ ಪ್ರದರ್ಶನವೂ ಇಲ್ಲ.

ಮದುವೆಗೆ ನಿರ್ಬಂಧ : ಕಲ್ಯಾಣ ಮಂಟಪಗಳಿಗೆ 50 ಕೋಟಿ ನಷ್ಟ!

50ರಿಂದ 60 ಕೋಟಿ ರೂ. ನಷ್ಟದ ಸಂಭವ

ಮಲ್ಟಿಪ್ಲೆಕ್ಸ್‌ ಸೇರಿದಂತೆ ರಾಜ್ಯದಲ್ಲೀಗ 700ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಒಂದು ವಾರಗಳ ಕಾಲ ಚಿತ್ರಪ್ರದರ್ಶನ ರದ್ದಾಗಿದ್ದರಿಂದ ಚಿತ್ರ ನಿರ್ಮಾಪಕರು, ವಿತರಕರು, ಹಂಚಿಕೆದಾರರು ಹಾಗೂ ಪ್ರದರ್ಶಕರ ವಹಿವಾಟು ಸೇರಿದಂತೆ ಸರ್ಕಾರಕ್ಕೆ ತೆರಿಗೆ ಮೂಲಕ ಸೇರಲಿದ್ದ ದೊಡ್ಡ ಪ್ರಮಾಣದ ಆದಾಯಕ್ಕೂ ಹೊಡೆತ ಬೀಳಲಿದೆ. ಅಧಿಕೃತ ಮೂಲಗಳ ಪ್ರಕಾರವೇ ಒಂದು ವಾರಕ್ಕೆ ಅಂದಾಜು 50 ರಿಂದ 60 ಕೋಟಿ ರೂ. ನಷ್ಟಉಂಟಾಗುವ ಸಾಧ್ಯತೆಗಳಿವೆ.

ಸರ್ಕಾರದ ತೀರ್ಮಾನ ತೆಗೆದುಕೊಂಡಿದೆ. ಇದು ನಮ್ಮ ಒಳ್ಳೆಯದಕ್ಕೆ ಆಗಿದೆ. ಜನರ ಆರೋಗ್ಯ ಮುಖ್ಯ. ಆಮೇಲೆ ನಮ್ಮ ಸಿನಿಮಾ ವಹಿವಾಟು. ಹಾಗಾಗಿ ಸರ್ಕಾರದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಪ್ರದರ್ಶನಕ್ಕೆ ಅವಕಾಶ ಕೊಟ್ಟಾಗ ಚಿತ್ರಮಂದಿರಗಳು ಬಾಗಿಲು ತೆರೆಯಲಿವೆ. - ನರಸಿಂಹಲು, ಚಿತ್ರಮಂದಿರದ ಮಾಲೀಕರು

ಚಿತ್ರೀಕರಣಕ್ಕೂ ಹೊಡೆತ

ಹೊರವಲಯಗಳಲ್ಲಿ ಫಿಕ್ಸ್‌ ಆಗಿರುವ ಸಿನಿಮಾ ಚಿತ್ರೀಕರಣ ಬಂದ್‌ ಆಗುವ ಸಾಧ್ಯತೆಗಳಿವೆ. ಈಗ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಸಿನಿಮಾ ತಂಡಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲವಾದರೂ, ಇನ್ನೇನು ನಾಳೆ ಅಥವಾ ನಾಡಿದ್ದು ಚಿತ್ರೀಕರಣಕ್ಕೆ ಹೊರಡಬೇಕಿದ್ದ ಸಿನಿಮಾ ನಿರ್ದೇಶಕರೊಬ್ಬರು, ಪರಿಸ್ಥಿತಿ ನೋಡಿಕೊಂಡೇ ಚಿತ್ರೀಕರಣಕ್ಕೆ ಹೊರಡುವುದು ಸೂಕ್ತ, ನಿರ್ಮಾಪಕರ ಜತೆಗೆ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ.

ರಾಬರ್ಟ್‌ ಆಡಿಯೋ ರಿಲೀಸ್‌ ಮುಂದಕ್ಕೆ?

ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ‘ರಾಬರ್ಟ್‌’ ಆಡಿಯೋ ರಿಲೀಸ್‌ ಕಾರ್ಯಕ್ರಮಕ್ಕೂ ಕೊರೋನಾ ವೈರಸ್‌ ಭೀತಿಯ ಬಿಸಿ ತಟ್ಟಿದೆ.ಈಗಾಗಲೇ ಮಾ.21ಕ್ಕೆ ಫಿಕ್ಸ್‌ ಆಗಿದ್ದ ನಿಗದಿತ ಆಡಿಯೋ ರಿಲೀಸ್‌ ಕಾರ್ಯಕ್ರಮದ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ‘ದರ್ಶನ್‌ ಇಂದು( ಮಾ.14) ಚಿತ್ರತಂಡದ ಜತೆಗೆ ಸಭೆ ಕರೆದಿದ್ದಾರೆ. ನಾವೆಲ್ಲ ಒಂದೆಡೆ ಕುಳಿತು ಚರ್ಚೆ ನಡೆಸಿದ ನಂತರ ಏನು ಎನ್ನುವುದು ಗೊತ್ತಾಗಲಿದೆ’ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ.