Asianet Suvarna News Asianet Suvarna News

Fact Check| ಕೊರೋನಾ ವಿರುದ್ಧ ಲಸಿಕೆ ಕಂಡು​ಹಿ​ಡಿದ ಇಸ್ರೇಲ್‌, ಅಮೆರಿ​ಕ!

ಇನ್ನುಮುಂದೆ ಕೊರೋನಾ ವೈರ​ಸ್‌​ನಿಂದ ಯಾರೂ ಮೃತ​ಪ​ಡು​ವು​ದಿಲ್ಲ. ಏಕೆಂದರೆ ಕೊನೆಗೂ ಇಸ್ರೇ​ಲ್‌ ಮತ್ತು ಅಮೆ​ರಿಕ ಸೇರಿ ಕೊರೋನಾ ವಿರುದ್ಧ ಲಸಿಕೆ ಕಂಡು​ಹಿ​ಡಿ​ದಿವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿ​ದೆ. ಇದು ನಿಜಾನಾ? ಇಲ್ಲಿದೆ ವಿವರ

Fact Check Take this novel coronavirus vaccine claim with a pinch of salt
Author
Bangalore, First Published Mar 14, 2020, 8:40 AM IST

ವಾಷಿಂಗ್ಟನ್[ಮಾ.14]: ಜಗ​ತ್ತಿನಾದ್ಯಂತ ಕೋವಿಡ್‌-19 ಅಥವಾ ಕೊರೋನಾ ವೈರಸ್‌ ಮರಣ ಮೃದಂಗ ಬಾರಿ​ಸು​ತ್ತಿ​ದೆ. ಲಸಿಕೆ, ಔಷ​ಧವೇ ಇಲ್ಲದ ಈ ವೈರ​ಸ್‌ಗೆ ಜಗ​ತ್ತಿ​ನಾ​ದ್ಯಂತ ಈಗಾ​ಗಲೇ 4000ಕ್ಕೂ ಹೆಚ್ಚು ಜನರು ಬಲಿ​ಯಾ​ಗಿ​ದ್ದಾ​ರೆ.

ಈ ನಡುವೆ ಇನ್ನುಮುಂದೆ ಕೊರೋನಾ ವೈರ​ಸ್‌​ನಿಂದ ಯಾರೂ ಮೃತ​ಪ​ಡು​ವು​ದಿಲ್ಲ. ಏಕೆಂದರೆ ಕೊನೆಗೂ ಇಸ್ರೇ​ಲ್‌ ಮತ್ತು ಅಮೆ​ರಿಕ ಸೇರಿ ಕೊರೋನಾ ವಿರುದ್ಧ ಲಸಿಕೆ ಕಂಡು​ಹಿ​ಡಿ​ದಿವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿ​ದೆ. ಸ್ಯಾನ್‌ ಡಿಯಾಗೋ ಎನ್ನುವ ಪ್ರಯೋ​ಗಾ​ಲ​ಯ​ದ​ಲ್ಲಿ ಕೇವಲ 3 ಗಂಟೆ​ಗ​ಳ​ಲ್ಲಿ ಈ ಲಸಿಕೆ ಕಂಡು​ಹಿ​ಡಿ​ಯ​ಲಾ​ಗಿದೆ ಎಂದೂ ಹೇಳ​ಲಾ​ಗಿ​ದೆ. ಇದೀಗ ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ವೈರಲ್‌ ಆಗು​ತ್ತಿ​ದೆ.

Fact Check Take this novel coronavirus vaccine claim with a pinch of salt

ಆದರೆ ನಿಜಕ್ಕೂ ಕೊರೋನಾ ಮಾಹಾ​ಮಾ​ರಿಯ ನಿಯಂತ್ರ​ಣಕ್ಕೆ ಲಸಿಕೆ ಸಿದ್ಧ​ವಾ​ಗಿ​ದೆಯೇ ಎಂದು ಸುದ್ದಿ​ಸಂಸ್ಥೆ​ಯೊಂದು ಪರಿ​ಶೀ​ಲಿ​ಸಿ​ದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿ​ತ​ವಾ​ಗಿ​ದೆ. ಏಕೆಂದರೆ ವೈರಲ್‌ ಆಗಿ​ರುವ ಫೋಟೋ ಇಂಟ​ರ್‌​ನೆ​ಟ್‌​ನಲ್ಲಿ ಲಭ್ಯ​ವಿ​ರುವ ಫೋಟೋ. ಹಾಗೆಯೇ ವಿಶ್ವ ಆರೋ​ಗ್ಯ ಸಂಸ್ಥೆ ಕೂಡ ಲಸಿಕೆ ಕಂಡು​ಹಿ​ಡಿ​ಯುವ ಪ್ರಯತ್ನ ನಡೆ​ದಿದೆ. ಒಂದೊಮ್ಮೆ ಈ ಕಾರ‍್ಯ​ದಲ್ಲಿ ಯಶಸ್ಸು ಕಂಡರೂ ಅದು ಮನು​ಷ್ಯರ ಮೇಲೆ ಬಳ​ಕೆ​ಯಾ​ಗಲು ಇನ್ನೂ ಕನಿಷ್ಠ 12-18 ತಿಂಗಳು ಬೇಕು ಎಂದಿದೆ.

ಅಲ್ಲ​ದೆ ಇಸ್ರೇ​ಲಿನ ಎಂಐ​ಜಿ​ಎ​ಎಲ್‌ ಸಂಶೋ​ಧನಾ ಕೇಂದ್ರ ಕೂಡ ವೈರಲ್‌ ಸಂದೇ​ಶ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಕೊರೋನಾ ವಿರುದ್ಧ ಲಸಿಕೆ ಕಂಡು​ಹಿ​ಡಿ​ಯಲು ನಿರಂತರ ಶ್ರಮಿ​ಸ​ಲಾ​ಗು​ತ್ತಿದೆ ಎಂದೂ ಹೇಳಿ​ದೆ. ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಕಂಡಳಿ ಎಚ್‌​ಐವಿ ವಿರು​ದ್ಧದ ಲಸಿ​ಕೆ​ಯನ್ನೇ ಕೊರೋನಾ ವಿರುದ್ಧ ಬಳ​ಸಲು ಅನು​ಮತಿ ಪಡೆ​ದಿದೆ. ಅದಿನ್ನೂ ಪರೀ​ಕ್ಷೆಗೆ ಒಳ​ಪ​ಟ್ಟಿ​ದೆ. ಅದು ಬಿಟ್ಟು ಕೊರೋನಾ ವಿರುದ್ಧ ಯಾವುದೇ ನಿರ್ದಿಷ್ಟಲಸಿ​ಕೆ​ಯನ್ನು ಇದು​ವ​ರೆಗೂ ಅಭಿ​ವೃ​ದ್ಧಿ​ಪ​ಡಿ​ಸಿ​ಲ್ಲ.

Follow Us:
Download App:
  • android
  • ios