ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕವಿತಾ ರೆಡ್ಡಿ, ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ನೈತಿಕ ಪೊಲೀಸ್‌ ಗಿರಿಯನ್ನು ವಿರೋಧಿಸುತ್ತೇನೆ. ನಾನು ಇನ್ನು ಈ ವಾದವನ್ನು ಇಲ್ಲಿಗೆ ಪೂರ್ಣಗೊಳಿಸಲಿದ್ದೇನೆ. ಸಂಯುಕ್ತ ಹೆಗಡೆ ಅವರ ಬಳಿ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಮಾನ್ಯ ಮಾಡಿರುವ ಸಂಯುಕ್ತಾ ಹೆಗ್ಡೆ, ಘಟನೆಯಲ್ಲಿ ಇಲ್ಲಿಗೆ ಮರೆತು ಬಿಡೋಣ ಎಂದು ಟ್ವೀಟ್‌ ಮಾಡಿದ್ದಾರೆ.

ನಿಜಕ್ಕೂ ನಟಿ ಸಂಯುಕ್ತಾ ಹೆಗ್ಡೆ- ಕವಿತಾ ರೆಡ್ಡಿ ನಡುವೆ ಏನಾಯ್ತು?

ಆದರೆ ಘಟನೆ ಬಗ್ಗೆ ಶನಿವಾರವಷ್ಟೇ ಸಂಯುಕ್ತ ಹೆಗಡೆ ಕವಿತಾ ರೆಡ್ಡಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ಕೂಡ ದಾಖಲಾಗಿದೆ. ಇದೀಗ ಕವಿತಾ ರೆಡ್ಡಿ ಅವರು ಕ್ಷಮೆ ಕೇಳಿದ್ದಾರೆ. ‘ಕ್ಷಮೆ ಬಗ್ಗೆ ನಮಗೆ ಏನು ಗೊತ್ತಿಲ್ಲ. ಸಂಯುಕ್ತ ಹೆಗಡೆ ಅವರು ನೀಡಿರುವ ದೂರಿನಂತೆ ತನಿಖೆ ನಡೆಸಲಿದ್ದೇವೆ. ರಾಜೀ ಸಂಧಾನದ ಅವರಿಗೆ ಬಿಟ್ಟಿದ್ದು’ ಎಂದು ಪೊಲೀಸರು ಹೇಳಿದ್ದಾರೆ.

ಸಂಯುಕ್ತಾ ಹೆಗ್ಡೆ ಪರ ನಿಂತ ಜಗ್ಗೇಶ್; ಕವಿತಾ ರೆಡ್ಡಿಗೆ ಟಾಂಗ್?

ಸೆ.4ರಂದು ಸಂಯುಕ್ತ ಹೆಗಡೆ ಅಗರ ಕೆರೆಯ ಪಾರ್ಕ್ನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕವಿತಾ ರೆಡ್ಡಿ ತುಂಡು ಬಟ್ಟೆತೊಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದೀರಾ ಎಂದು ಸಂಯುಕ್ತ ಹೆಗಡೆ ಬಳಿ ಜಗಳ ತೆಗೆದಿದ್ದರು. ಸಂಪೂರ್ಣ ಘಟನೆಯನ್ನು ತೊಟ್ಟಬಟ್ಟೆಯಲ್ಲೇ ಸಂಯುಕ್ತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಕಳುಹಿಸಿದ್ದರು. ಇದೀಗ ಸಂಯುಕ್ತ ಹೆಗಡೆ ಪರವಾಗಿ ಟ್ವಿಟರ್‌ ಹ್ಯಾಷ್‌ ಟ್ಯಾಗ್‌ ಟ್ರೇಡಿಂಗ್‌ ಪ್ರಾರಂಭಗೊಂಡಿತ್ತು.