ಬೆಂಗಳೂರಿನ ಪಾರ್ಕ್‌ವೊಂದರಲ್ಲಿ ಸ್ನೇಹಿತೆಯರ ಜೊತೆ ವ್ಯಾಯಾಮ ಮಾಡುತ್ತಾ ಹೋಲಾ ಹೂಪ್‌ ಡ್ಯಾನ್ಸ್ ಮಾಡುತ್ತಿದ್ದ ನಟಿ ಸಂಯುಕ್ತಾಳ ಮೇಲೆ  ಸಾಮಾಜಿಕ ಕಾರ್ಯಕರ್ತೆ ಕವಿತಾ ರೆಡ್ಡಿ ಹಲ್ಲೆ ಮಾಡಿದ್ದಾರೆ.

ಹುಂಬತನ ಬಿಡಿ, ಮಾಸ್ಕ್ ಧರಿಸಿ ಓಡಾಡಿ; ಜಗ್ಗೇಶ್ ಕಳಕಳಿಯ ಮನವಿ

ಹೆಚ್ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಕವಿತಾ ರೆಡ್ಡಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ವಿಡಿಯೋ ಸಾಕ್ಷಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತರ ಇನ್ನಿತ್ತರ ಸೆಲೆಬ್ರಿಟಿಗಳು ಸಂಯುಕ್ತ ಪರ ನಿಂತರು.  ಸಮಾಜದಲ್ಲಿ ನಡೆಯುವ ಅನೇಕ ಕಾರ್ಯಗಳ ಬಗ್ಗೆ ಟ್ಟಿಟರ್‌ ಮೂಲಕ ಅಭಿಪ್ರಾಯ ತಿಳಿಸುವ ನಟ ಜಗ್ಗೇಶ್‌ ಈ ಘಟನೆ ಬಗ್ಗೆಯೂ ಮಾತನಾಡಿದ್ದಾರೆ.

ಹುಚ್ಚ ವೆಂಕಟ್‌ ಮೇಲೆ ಕೈ ಮಾಡಿದವರು ಕಂಬಿ ಹಿಂದೆ; ಜಗ್ಗೇಶ್‌ ಧನ್ಯವಾದ! 

ಜಗ್ಗೇಶ್ ಟ್ಟೀಟ್‌:

'ಕೋಪ ದುಃಖಕ್ಕೆಮೂಲ! ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು! ಇತ್ತೀಚಿಗೆ ಜಾಲತಾಣ ಪ್ರಚಾರಕ್ಕೆ ಮೊಬೈಲ್ ರೆಕಾರ್ಡರ್  ಚಾಲುಮಾಡಿ ಕಾಲುಕೆರದು ಜಗಳಕ್ಕೆ ಬರುವವರ ಸಂಖ್ಯೆ ಜಾಸ್ತಿಆಗುತ್ತಿದೆ!ಇಂದು ಬಾಪ್ ಕಟ್ ಪ್ಯಾಂಟ್ ಶರ್ಟಿನ ಹೆಂಗಸು  ಅನ್ಯರ  ಬಟ್ಟೆ ಬಗ್ಗೆ ಬುದ್ದಿ ಹೇಳುವಂತೆ ಕೈ ಮಾಡಿ ರೆಕಾರ್ಡ್  ಮಾಡುತ್ತಾಳೆ!ನಾವು ನೋಡಿ ಪರವಿರೋಧ ಚರ್ಚೆಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.

 

ನಟಿ ಸಂಯುಕ್ತಾ ಪರ ಅನೇಕ ಸ್ಯಾಂಡಲ್‌ವುಡ್‌ ನಟ ನಟಿಯರು ನಿಂತಿದ್ದಾರೆ. ಕವಿತಾ ಒಬ್ಬ ಮಹಿಳೆಯಾಗಿ ಮತ್ತೊರ್ವ ಮಹಿಳೆ ವಸ್ತ್ರ ಬಗ್ಗೆ ಹೀಗೆ ಮಾತನಾಡಿದ್ದು ತಪ್ಪು ಎಂದು ಖಂಡಿಸಿದ್ದಾರೆ.