ಕನ್ನಡ ಕಿರುತೆರೆಯಲ್ಲಿ ಸುಷ್ಮಾ ನಾನಯ್ಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಕಾವೇರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಆರು ವರ್ಷಗಳ ನಂತರ ಮಗುವಿಗಾಗಿ ಬ್ರೇಕ್ ತೆಗೆದುಕೊಂಡಿದ್ದ ಇವರು, ತಾಯಿ ಪಾತ್ರಕ್ಕೆ ಆಯ್ಕೆಯಾಗಿದ್ದು ಅಚ್ಚರಿ ಮೂಡಿಸಿತು. ಈ ಪಾತ್ರವು ವಿಭಿನ್ನ ಛಾಯೆಗಳನ್ನು ಹೊಂದಿದ್ದು, ಜನಪ್ರಿಯತೆ ಗಳಿಸಿದೆ. ಸೀರಿಯಲ್‌ನಲ್ಲಿನ ಪಾತ್ರಗಳು ಮತ್ತು ಕಥೆಯು ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸುಷ್ಮಾ ನಾನಯ್ಯ ಈಗ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮಗನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇಟ್ಟುಕೊಂಡಿರುವ ತಾಯಿ ಜಾಗತವನ್ನು ತನ್ನೊಟ್ಟಿಗೆ ಮ್ಯಾಚ್ ಆಗುತ್ತಾ ಎಂದು ಚೆಕ್ ಮಾಡಿದ್ದರು. ಆರಂಭದಲ್ಲಿ ಒಳ್ಳೆ ಅತ್ತೆ- ಸೊಸೆ ಸಂಬಂಧ ಹೊಂದಿದ್ದರು ಆದರೆ ಕೀರ್ತಿ ಸಾವಿಗೆ ಅತ್ತೆನೇ ಕಾರಣ ಎಂದು ತಿಳಿಯುತ್ತಿದ್ದಂತೆ ಲಕ್ಷ್ಮಿ ಮಾತ್ರವಲ್ಲ ಜನರು ಕೂಡ ತಿರುಗಿ ಬಿದ್ದರು. 

6 ವರ್ಷ ಬ್ರೇಕ್ ತೆಗೆದುಕೊಂಡಿದ್ದಾಗ ಹುಡುಕಿಕೊಂಡ ಬಂದ ಪಾತ್ರ ಇದು. ನನ್ನ ಮಗುವಿಗೆ ಎರಡು ಅಷ್ಟೇ ಆಗಿದ್ದ ಕಾರಣ ನಾನು ಕಮ್‌ ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿರಲಿಲ್ಲ. ಆಡಿಷನ್‌ಗೆ ಬನ್ನಿ ಬನ್ನಿ ಎಂದು ಕಾಲ್ ಮಾಡುತ್ತಿದ್ದರು..ಅಯ್ಯೋ ತಾಯಿ ಪಾತ್ರಕ್ಕೆ ಯಾರು ಕೊಡುತ್ತಾರೆ ಅಂತ ಅನಿಸಿತ್ತು. ಆಡಿಷನ್ ಕೊಟ್ಟು ಬರೋಣ ಟೈಮ್ ಪಾಸ್ ಆಗುತ್ತದೆ ಸ್ನೇಹಿತರು ಸಿಗುತ್ತಾರೆ ಎಂದು ಬಂದಿದ್ದು. ಆಡಿಷನ್ ಆದ್ಮೇಲೆ ನನಗೆ ಕಾಲ್ ಮಾಡಿರಲಿಲ್ಲ. ಒಂದು ದಿನ ಕಾಲ್ ಮಾಡಿ ಪಾತ್ರಕ್ಕೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ ಅಂದ್ರು. ನಿಜಕ್ಕೂ ಅಷ್ಟು ದೊಡ್ಡ ಮಗನ ತಾಯಿ ಪಾತ್ರವನ್ನು ಮಾಡಲು ನನಗೆ ಆಗುತ್ತಾ ಎಂದು ಪ್ರಶ್ನೆ ಮಾಡಿದಾಗ ಓಕೆ ಎಂದು ಒಪ್ಪಿಕೊಂಡರು. ಮಗು ಚಿಕ್ಕ ಇದ್ದ ಕಾರಣ ನೈಟ್ ಶೂಟ್ ಮಾಡಲು ಆಗುವುದಿಲ್ಲ ಅಂದಿದ್ದಕ್ಕೆ ಅದಕ್ಕೂ ಕೂಡ ಒಪ್ಪಿಕೊಂಡರು. ಸೀರಿಯಲ್ ಆಯ್ಕೆ ಆಗಿದ್ದ ತಕ್ಷಣ ತಾಯಿ ಮತ್ತು ಗಂಡ ಇಬ್ಬರೂ ಸಪೋರ್ಟ್ ಮಾಡಿದ್ದರು. ಅವರೇ ಆಫರ್ ಕೊಡುತ್ತಿದ್ದಾರೆ ಒಪ್ಪಿಕೊಂಡು ಸೀರಿಯಲ್ ಮಾಡು ಮಗು ಅಂತ ಸುಮ್ಮನೆ ಮನೆಯಲ್ಲಿ ಇರಬೇಡ ಎಂದು ಪತಿ ಹೇಳಿದ್ದರು.

ಆರೇಂಜ್‌ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ ಎಂದ ಫ್ಯಾನ್ಸ್

ಈ ಹಿಂದೆ ಕೂಡ ನಾನು ವಿಲನ್ ಪಾತ್ರಗಳನ್ನು ಮಾಡಿದ್ದೀನಿ ಆದರೆ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಎಂಜಾಯ್ ಮಾಡುತ್ತಿದ್ದೀನಿ. ಕಾವೇರಿ ಪಾತ್ರಕ್ಕೆ ತುಂಬಾ ಶೇಡ್‌ಗಳು ಇದೆ. ಲಕ್ಷ್ಮಿಗೆ ಸಮಸ್ಯೆ ಕೊಡಲು ಶುರು ಮಾಡಿದಾಗ ಜನರು ನನ್ನನ್ನು ಕೆಟ್ಟ ರೀತಿಯಲ್ಲಿ ನೋಡಲು ಶುರು ಮಾಡುತ್ತಾರೆ. ದಿನದಿಂದ ದಿನಕ್ಕೆ ಲಕ್ಷ್ಮಿ ಬಾರಮ್ಮ ಸೀರಿಯಲ್‌ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದೆ. ಸೈಲೆಂಟ್ ಮಗ ವೈಷ್ಣವ್‌, ಸ್ಮಾರ್ಟ್‌ ಹುಡುಗಿ ಲಕ್ಷ್ಮಿ, ಖಡಕ್‌ ಹುಡುಗಿ ಕೀರ್ತಿ,ಮಾಸ್ಟರ್ ಮೈಂಡ ಅತ್ತೆ ಕಾವೇರಿ. ಎಲ್ಲವೂ ಜನರಿಗೆ ತುಂಬಾನೇ ಇಷ್ಟವಾಗಿದೆ. 

ಮಗಳ 2ನೇ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇದು ಖುಷಿ ಅಲ್ಲ ಅವಿರಾ!