Asianet Suvarna News Asianet Suvarna News

ಒಪ್ಪಿಗೆ ಪಡೆಯದೇ ಸೊಸೆ ಎಂದ ಬಿಗ್ ಬಾಸ್ ಸ್ನೇಹಿತ್ ತಂದೆ; ನಮ್ರತಾ ಗೌಡ ಫುಲ್ ಗರಂ!

ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ನೆಗೆಟಿವ್ ಕಾಮೆಂಟ್‌ಗಳಿಗೆ ಸ್ಪಷ್ಟನೆ ಕೊಟ್ಟ ನಮ್ರತಾ ಗೌಡ. ಯಾಕೆ ಸೊಸೆ ಅನ್ನಬೇಕು?

Colors Kannada Bigg Boss Namrtha Gowda angry on Snehith father for calling her daughter in law vcs
Author
First Published Jan 25, 2024, 12:40 PM IST | Last Updated Jan 25, 2024, 12:40 PM IST

ಬಿಗ್ ಬಾಸ್‌ ಸೀಸನ್ 10ರಲ್ಲಿ ಸಖತ್ ಹ್ಯಾಪಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಮ್ರತಾ ಗೌಡ 7ನೇ ಟಾಪ್ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಬೇಸರದಲ್ಲಿ ಹೊರ ಬರುತ್ತಿದ್ದ ನಮ್ರತಾ ಗೌಡರಿಗೆ ರಿಯಾಲಿಟಿಯಲ್ಲಿ ಬಿಗ್ ಶಾಕ್ ಕಾದಿತ್ತು. ಸಖತ್ ಪಾಸಿಟಿವ್ ಆಗಿದ್ದ ಹುಡುಗಿಯನ್ನು ನೆಗೆಟಿವ್ ಆಗಿ ಟ್ರೋಲ್ ಮಾಡಿ ಟಾರ್ಗೆಟ್‌ ಮಾಡಿದ್ದು, ಚಮಚಗಿರಿ, ಗುಂಪುಗಾರಿಕೆ, ಲವ್ ಬರ್ಡ್‌ ಮತ್ತು ಪ್ರ್ಯಾಂಕ್‌ ಎಲ್ಲವೂ ತಿರುಗಿ ಬಿದ್ದಿದ್ದೆ. ಸ್ನೇಹಿತ್ ಮತ್ತು ನಮತ್ರಾ ಸ್ನೇಹವನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದರು, ಅವರಲ್ಲಿ ಸ್ನೇಹಿತ್ ತಂದೆ ಕೂಡ ಒಬ್ಬರು. 

ನಿಜಕ್ಕೂ ನಮ್ರತಾ ಅಂದ್ರೆ ಇಷ್ಟ ಎನ್ನುತ್ತಿದ್ದ ಸ್ನೇಹಿತ್‌ನ ನೋಡಿ ಅವರಿಬ್ಬರಿಗೆ ಇಷ್ಟವಿದ್ದರೆ ಮದುವೆ ಮಾಡೋಣ ಆಕೆ ನನ್ನ ಸೊಸೆ ಆಗಲಿ ಎಂದು ಕನ್ನಡ ಸಂದರ್ಶನವೊಂದರಲ್ಲಿ ಹೇಳಿದ್ದರಂತೆ. ಈ ವಿಚಾರವನ್ನು ಕನ್ನಡದ ಖಾಸಗಿ ಟಿವಿ ಸಂದರ್ಶನದಲ್ಲಿ ನಮ್ರತಾರಿಗೆ ಪ್ರಶ್ನೆ ಹಾಕಲಾಗಿತ್ತು.  'ಸ್ನೇಹಿತ್ ಅವರ ತಂದೆ ನೀಡಿರುವ ಹೇಳಿಕೆಯಿಂದ ನನ್ನ ಅಪ್ಪ-ಅಮ್ಮ ಬೇಸರ ಮಾಡಿಕೊಂಡಿದ್ದಾರೆ. ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಗೊತ್ತಿರಲಿಲ್ಲ, ಹೊರಗೆ ಬಂದ ಮೇಲೆ ಶಾಕ್ ಆಯ್ತು. ಒಂದು ಹೆಣ್ಣು ಹುಡುಗಿ ಜೀವನದ ಬಗ್ಗೆ ಅವಳ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೀರಾ ಅದರಲ್ಲಿ ನಿಮ್ಮ ಮಗನ ಭವಿಷ್ಯವೂ ಇದೆ ಯೋಚನೆ ಮಾಡಿ ಮಾತನಾಡಬೇಕು. ಅಪ್ಪ ಅಮ್ಮ ಇದ್ದಾರೆ ನಿರ್ಧಾರ ತೆಗೆದುಕೊಳ್ಳಲು. ಹುಡುಗಿ ಮನೆಯಲ್ಲಿ ಮಾತನಾಡಿ ಕನ್ಫರ್ಮ್ ಮಾಡಿದ್ರೆ ಅಥವಾ ಹುಡುಗಿ ಓಕೆ ಅಂತ ಹೇಳಿದರೆ ಮಾತನಾಡಿ ಪರ್ವಾಗಿಲ್ಲ ಆದರೆ ಯಾರನ್ನು ಸಂಪರ್ಕ ಇಲ್ಲ ಮಾಡದೇ ಹೇಳಿಕೆ ನೀಡುವುದು ತಪ್ಪು. ಕೆಲವರು ನನ್ನ ತಂದೆ ತಾಯಿಗೆ ಕರೆ ಮಾಡಿ ಮದುವೆಗೆ ಒಪ್ಪಿಕೊಂಡಿದ್ದೀರಾ, ಮದುವೆ ಕನ್‌ಫರ್ಮ್ ಆಗಿದ್ಯಾ ಅಂತ ಕೇಳಿದ್ದಾರೆ. ಅವರ ಹೇಳಿಕೆ ಬೇಕಿರಲಿಲ್ಲ. ದೊಡ್ಡವರಾಗಿ ಕುಳಿತು ಮಾತನಾಡಿ ಆನಂತರ ಹೇಳಿಕೆ ಕೊಟ್ಟರೆ ಚೆನ್ನಾಗಿರುತ್ತೆ' ಎಂದು ನಮ್ರತಾ ಗೌಡ ಉತ್ತರ ಕೊಟ್ಟಿದ್ದಾರೆ. 

ವಿನಯ್ ಮತ್ತು ನನ್ನ ಮನೆಯವರು ನರಕ ಅನುಭವಿಸಿದ್ದಾರೆ; ನೆಗೆಟಿವ್ ಕಾಮೆಂಟ್‌ಗೆ ನಮ್ರತಾ ಗೌಡ ಕಿಡಿ!

ಸ್ನೇಹಿತ್‌ ಜೊತೆ ಸಖತ್ ಕ್ಲೋಸ್ ಆಗಿದ್ದ ನಮ್ರತಾ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಯಾವಾಗ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ರೀ-ಎಂಟ್ರಿ ಕೊಡುತ್ತಾರೆ ಆಗ ನಮ್ರತಾ ಖುಷಿ ಪಟ್ಟಿದ್ದಕ್ಕಿಂತ ಬೇಸರ ಮಾಡಿಕೊಂಡಿದ್ದೇ ಹೆಚ್ಚು. ಪಾಸಿಟಿವ್ ಆಗಿ ಫ್ರೆಂಡ್ ಸ್ನೇಹಿತ್ ಮಾತನಾಡುತ್ತಾರೆ ಅಂದುಕೊಂಡರೆ ಪ್ರತಿ ಕ್ಷಣ ನಿಮಗಾಗಿ ಹೋರಾಟ ಮಾಡುತ್ತಿರುವ, ನೀವು ಟಾಪ್‌ನಲ್ಲಿ ಬರುವುದಿಲ್ಲ ಹಾಗೆ ಹೀಗೆ ಎಂದು ಹೇಳಿದ್ದಾರೆ. ಇದರಿಂದ ನಮ್ರತಾ ಸಾಕಷ್ಟು ಕುಗ್ಗಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟ ಮೇಲೆ ನಮ್ರತಾ ಕೊಂಚ ರಿಲ್ಯಾಕ್ಸ್‌ ಆದರು. ಹೊರ ಬಂದ ಮೇಲೆ ಏನೆಲ್ಲಾ ಆಯ್ತು ಎಂದು ತಿಳಿದು ಬೇಸರ ಮಾಡಿಕೊಂಡು ಎಲ್ಲೇ ಹೋದರು ಯಾರೇ ಸ್ನೇಹಿತ್ ಬಗ್ಗೆ ಪ್ರಶ್ನೆ ಮಾಡಿದರು ಉತ್ತರ ಕೊಡದೆ ಮೌನವಾಗಿದ್ದಾರೆ. 

Latest Videos
Follow Us:
Download App:
  • android
  • ios