ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು.
ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಸಿಕ್ಕಾಪಟ್ಟೆ ಸಕ್ಸಸ್ ಟ್ರ್ಯಾಕ್ನಲ್ಲಿದ್ದಾರೆ. ಡೈರೆಕ್ಷನ್ ಅಂತ ಬಂದ್ರೆ ವಿಜಯ್ ಬ್ರ್ಯಾಂಡ್ ಆಗಿದ್ದಾರೆ. ಕರೆಕ್ಟ್ ಆಗಿ ಕಥೆ ಬರೆದು ಕ್ಯಾಮೆರಾ ಇಟ್ಟು ಆ್ಯಕ್ಷನ್ ಅನ್ನೋ ವಿಜಯ್ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಇವರ ಆ ಹೆಜ್ಜೆ ಹೇಗಿದೆ ಅಂದ್ರೆ ಸಿಟಿ ಎಲ್ಲಾ ಲೈಟ್ ಹೊತ್ತಿಕೊಂಡಿದೆ. ಈ ಸಿಟಿಲೈಟ್ಸ್ನಲ್ಲಿ ಬ್ಯಾಡ್ ಬಾಯ್ಸ್ ಮಾತ್ರವಲ್ಲ ಬ್ಯಾಡ್ ಗರ್ಲ್ಸ್ ಇದ್ದಾರೆ ಅಂತ ಮಹಾನಟಿ ಉಮಾಶ್ರೀ ಡೈಲಾಗ್ ಹೊಡೆದಿದ್ದಾರೆ. ಹಾಗಾದ್ರೆ ಈ ಸಿಟಿಲೈಟ್ಸ್ನ ಸಖತ್ ಸಮಾಚಾರ ಏನು..?

ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ನಟ ದುನಿಯಾ ವಿಜಯ್ ತನ್ನ ನಿರ್ದೇಶನದಲ್ಲಿ ಸಲಗ, ಭೀಮ ಅನ್ನೋ ಎರಡು ಬಿಗ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ವಿಜಯ್ ಈಗ ಮೂರನೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಪ್ರಯತ್ನದಲ್ಲಿ ನಟ ವಿಜಯ್ಗೆ ಎರಡನೇ ಪುತ್ರಿ ಮೋನಿಷಾ ಕೂಡ ಜೊತೆಯಾಗಿದ್ದಾರೆ. ಈ ಅಪ್ಪ ಮಗಳ ಜುಗಲ್ಬಂದಿ ತೆರೆದುಕೊಳ್ತಿರೋ ಸಿನಿಮಾ ಸಿಟಿಲೈಟ್ಸ್. 'ಸಲಗ', 'ಭೀಮ' ಸಿನಿಮಾದ ಬಳಿಕ ಮತ್ತೊಂದು ಸಿನಿಮಾಗೆ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿರೋ ನಿರೀಕ್ಷಿತ ಸಿನಿಮಾ 'ಸಿಟಿಲೈಟ್ಸ್'.
ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು. ಇದೀಗ ಈ ಸಿನಿಮಾದ ಸಖತ್ತಾಗಿರೋ ಬಾವಾ ಬಾವಾ ಹಾಡು ರಿಲೀಸ್ ಆಗಿದೆ. ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಸಿನಿಮಾದ ಮೊದಲ ಹಾಡು ಇದು. "ಬಾವ ಬಾವ.." ಅನ್ನೋ ಸಾಂಗ್ ಮೂಲಕ ದುನಿಯಾ ವಿಜಯ್ ಮತ್ತೆ ಹೊಸ ಟ್ರೆಂಡ್ ಹುಟ್ಟಾಕಿದ್ದಾರೆ.
ಕಥೆ ಸಿಕ್ಕಾಪಟ್ಟೆ ಯುನೀಕ್
ವಿಶೇಷ ಅಂದ್ರೆ ವಿಜಯ್ ತನ್ನ ಮಗಳಿಗೆ ಈ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳಿರೋದು ಸಿಟಿಲೈಟ್ಸ್ ಮೇಲಿನ ಕುತೂಹಲ ಹೆಚ್ಚಿಸಿದೆ. ಸಿಟಿಲೈಟ್ಸ್ ಸಿನಿಮಾದ ಕಥೆ ಸಿಕ್ಕಾಪಟ್ಟೆ ಯುನೀಕ್ ಆಗಿದೆ. ವಿಜಯ್ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಆಗಿರೋ ಸ್ಟೋರಿಗೇನು ಬರ ಇರೋಲ್ಲ. ಹಾಗೆ ಈ ಸಿನಿಮಾಕ್ಕೆ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಆಯ್ಕೆ ಆಗಿದ್ದೇ ಒಂದು ರೋಚಕ ಕಥೆ. ವಿನಯ್ ಪೆಪ್ಪೆ ಸಿನಿಮಾದಲ್ಲಿ ನಟಿಸುತ್ತಿದ್ರು. ಈ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ವಿಜಯ್ ಅವರು ನನ್ನ ಸಿನಿಮಾದಲ್ಲಿ ನಟಿಸ್ತೀರಾ ಅಂತ ವಿನಯ್ ರಾಜ್ಕುಮಾರ್ಗೆ ಓಪನ್ ಆಗಿ ಕೇಳಿದ್ರು.
ಆ ಕಮೀಟ್ಮೆಂಟ್ ಡೆವಲಪ್ ಆಗಿ ಇಂದು ಸಿಟಿಲೈಟ್ಸ್ನಲ್ಲಿ ವಿನಯ್ ಹೀರೋ ಆಗಿದ್ದಾರೆ. 'ಸಿಟಿಲೈಟ್ಸ್'ನಲ್ಲಿ ಸಿನಿಮಾಗೆ "ಜವಾಬ್ ದಾರಿ... ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟ ಎದುರಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಶಿವಸೇನಾ ಕ್ಯಾಮರಾ ಕುಸುರಿ, ದೀಪು ಎಸ್.ಕುಮಾರ್ ಎಡಿಟಿಂಗ್, ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಸಿನಿಮಾದ ಗತ್ತು ಹೆಚ್ಚಿಸಿದೆ. ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.


