- Home
- Entertainment
- Sandalwood
- ವಯಸ್ಸಾದ ಪಾತ್ರದಲ್ಲಿ ರಚಿತಾ ರಾಮ್.. ನಿಂಗವ್ವನ ಬಗ್ಗೆ ದುನಿಯಾ ವಿಜಯ್ ಹೀಗಾ ಹೇಳೋದು?
ವಯಸ್ಸಾದ ಪಾತ್ರದಲ್ಲಿ ರಚಿತಾ ರಾಮ್.. ನಿಂಗವ್ವನ ಬಗ್ಗೆ ದುನಿಯಾ ವಿಜಯ್ ಹೀಗಾ ಹೇಳೋದು?
ಜ.23ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾದಲ್ಲಿ ವಯಸ್ಸಾದ ಪಾತ್ರದಲ್ಲಿ ನಾಯಕಿಯರು ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ, ಆದರೆ ರಚಿತಾ ರಾಮ್ ಒಪ್ಪಿಕೊಂಡು ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ ಎಂದರು ದುನಿಯಾ ವಿಜಯ್.

ನಿಂಗವ್ವ ನಿಂಗವ್ವ ಹಾಡು ಬಿಡುಗಡೆ
ಸ್ಯಾಂಡಲ್‌ವುಡ್‌ನ ತಾರಾ ದಂಪತಿಗಳಾದ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್, ತರುಣ್ ಸುಧೀರ್ - ಸೋನಾಲ್ ಮೊಂತೆರೋ ಹಾಗೂ ನೆನಪಿರಲಿ ಪ್ರೇಮ್- ಜ್ಯೋತಿ ದಂಪತಿ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ‘ನಿಂಗವ್ವ ನಿಂಗವ್ವ’ ಹಾಡು ಬಿಡುಗಡೆ ಮಾಡಿದ್ದಾರೆ.
ವಯಸ್ಸಾದ ಪಾತ್ರದಲ್ಲಿ ರಚಿತಾ ರಾಮ್
ದುನಿಯಾ ವಿಜಯ್, ಜ.23ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾದಲ್ಲಿ ವಯಸ್ಸಾದ ಪಾತ್ರದಲ್ಲಿ ನಾಯಕಿಯರು ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ, ಆದರೆ ರಚಿತಾ ರಾಮ್ ಒಪ್ಪಿಕೊಂಡು ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ.
ಜಡೇಶ್ ಕೆ ಹಂಪಿ ಅವರಿಗೆ ಧನ್ಯವಾದ
ನನಗೂ ಕೂಡ ಈ ಹಾಡು ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಪ್ರಶಂಸೆ ನೀಡುತ್ತಿದ್ದಾರೆ. ಒಳ್ಳೆಯ ಕಥೆ ಮಾಡಿಕೊಂಡಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಅವರಿಗೆ ಧನ್ಯವಾದ ಎಂದರು.
ನಿಂಗವ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ
ರಚಿತಾ ರಾಮ್, ಈ ಸಿನಿಮಾದಲ್ಲಿ ವಿಜಯ್ ರಾಚಯ್ಯ ಪಾತ್ರದಲ್ಲಿ, ನಾನು ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಹಾಡಲ್ಲಿ ನಮ್ಮಿಬ್ಬರ ಅಭಿನಯಕ್ಕೆ ಎಲ್ಲರೂ ನೀಡುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ.
ವಿಜಯ್ ಪ್ರಕಾಶ್ ಗಾಯನ ಚೆನ್ನಾಗಿದೆ
ಈ ಹಾಡಿನ ಚಿತ್ರೀಕರಣ ಸಮಯದಿಂದಲೂ ಯಾವಾಗ ಬಿಡುಗಡೆಯಾಗಬಹುದೆಂದು ಕಾಯುತ್ತಿದೆ. ಸ್ವಾಮಿ ಅವರ ಛಾಯಾಗ್ರಹಣ, ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲವೂ ಚೆನ್ನಾಗಿದೆ ಎಂದರು.
ಚಿತ್ರಕ್ಕೆ ಶುಭ ಕೋರಿದ ಯೋಗರಾಜ್ ಭಟ್
ಇನ್ನು ಹಾಡು ಹುಟ್ಟಿದ ಸಮಯವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ ಗೀತರಚನೆಕಾರ ಯೋಗರಾಜ್ ಭಟ್ ಚಿತ್ರಕ್ಕೆ ಶುಭ ಕೋರಿದರು. ಜಡೇಶ್ ಕೆ ಹಂಪಿ ನಿರ್ದೇಶನದ ಈ ಸಿನಿಮಾವನ್ನು ಕೆ.ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

