ದುನಿಯಾ ವಿಜಯ್‌ ನಿರ್ದೇಶನದ ʻಸಿಟಿಲೈಟ್ಸ್‌ʼ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ. ʻಬಾವ ಬಾವʼ ಅನ್ನೋ ರ್ಯಾಪ್‌ ಹಾಡಿನ ಮೂಲಕ ದುನಿಯಾ ವಿಜಯ್‌ ಮತ್ತೆ ಟ್ರೆಂಡಿ ಸಾಂಗ್‌ ಅನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ.

‘ಸೆಟ್‌ನಿಂದ ಆಚೆ ಬಂದಾಗ ಮಾತ್ರ ಮಗಳು. ಸೆಟ್‌ನಲ್ಲಿ ಮೋನಿಷಾ ನಟಿ, ನಾನು ನಿರ್ದೇಶಕ’. ಇದು ದುನಿಯಾ ವಿಜಯ್‌ ಮಾತು. ತನ್ನ ನಿರ್ದೇಶನದಲ್ಲಿ ಮಗಳು ಮೋನಿಷಾ ಹಾಗೂ ವಿನಯ್‌ ರಾಜ್‌ಕುಮಾರ್‌ ನಟಿಸಿರುವ ‘ಸಿಟಿಲೈಟ್ಸ್‌’ ಸಿನಿಮಾದ ಹಾಡು ಬಿಡುಗಡೆಯಲ್ಲಿ ಮಾತನಾಡಿದ ಅವರು, ‘ನಿರ್ದೇಶನ ಅನ್ನುವುದು ಪರೀಕ್ಷೆ ಬರೆದ ಹಾಗಿದೆ’ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಸಿಟಿಲೈಟ್ಸ್‌ನಲ್ಲಿ ಇರುವ ಕತ್ತಲ ಜಗತ್ತು ನನ್ನನ್ನು ಬಹಳ ಕಾಡಿದೆ. ಇದರಲ್ಲಿ ಬಹಳ ನೋವು ತರುವಂಥಾ ವಿಚಾರವನ್ನು ಹೇಳಲು ಹೊರಟಿದ್ದೇನೆ, ಈ ಕಥೆಗೆ ವಿನಯ್‌ ರಾಜ್‌ಕುಮಾರ್‌ ಅವರೇ ಬೇಕಿತ್ತು. ವೈಯಕ್ತಿಕವಾಗಿಯೂ ನನಗೆ ವಿನಯ್‌ ಬಹಳ ಇಷ್ಟವಾಗುವ ವ್ಯಕ್ತಿತ್ವ’ ಎಂದರು. ಮೋನಿಷಾ ವಿಜಯ್‌ಕುಮಾರ್‌, ವಿನಯ್‌ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿದ್ದರು.

ಚರಣ್‌ ಸರ್‌ಗೆ ಒಂದು ಒಳ್ಳೆ ಸಾಂಗ್‌ ಕೊಡಿ ಅಂತ ಕೇಳಿದ್ದೆ ಆದರೆ ಅವರು ಐದು ಹಾಡುಗಳನ್ನು ಕೊಟ್ಟಿದ್ದಾರೆ ಖುಷಿ ಆಗ್ತಿದೆ ಎಂದರು ನಟ ವಿನಯ್‌ ರಾಜ್‌ ಕುಮಾರ್‌.ಇನ್ನು ವಿನಯ್‌ ರಾಜ್‌ ಕುಮಾರ್‌ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನು ಕಲಿತಿದ್ದೇನೆ ಎಂದರು ನಟಿ ಮೋನಿಷಾವಿಜಯ್‌.

ಸಿಟಿಲೈಟ್ಸ್‌ಗೆ ಭಾರಿ ಹೈಪ್

'ಸಿಟಿಲೈಟ್ಸ್' ಚಿತ್ರಕ್ಕೆ ʻಜವಾಬ್ ದಾರಿ…ದೀಪಗಳುʼ ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನ ಎದುರಿಸುತ್ತಾರೆ ಎನ್ನುವ ಕಥೆ ಸಿನಿಮಾದಲ್ಲಿದೆ. ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್‌ ಹಾಗೂ ಯಂತ್ರೋದ್ದಾರಕ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.