ಅಪ್ಪು ಜೊತೆ ನನ್ನ ಜರ್ನಿ ತುಂಬಾ ದೊಡ್ಡದು: ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ
ಅಪ್ಪು ಜೊತೆಗಿದ್ದ ಯಾರನ್ನದರೂ ಕೇಳಿ ಅವರು ಎಂದೂ ಯಾರನ್ನೂ ಭೇದ ಭಾವ ಮಾಡಿಲ್ಲ. ಯಾರನ್ನು ಕೂಡಾ ಕೀಳಾಗಿ ನೋಡಿಲ್ಲ. ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ಒಳಗೆ ಮತ್ತು ನಮ್ಮ ಜೊತೆಗೆ ಇದ್ದೇ ಇರುತ್ತಾರೆ.
ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಸಮಾಧಿಯ ದರ್ಶನ ಪಡೆದು, ಚಿತ್ರರಂಗದ ತಾರೆಯರು ನಮನ ಸಲ್ಲಿಸುತ್ತಿದ್ದಾರೆ. ಇಂದು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ (Imran Sardhariya) ಆಗಮಿಸಿ, ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದ್ದಾರೆ. ಅಭಿಮಾನಿಗಳ ಜೊತೆ ಕ್ಯೂನಲ್ಲಿಯೇ ಬಂದು ಅಪ್ಪು ಸಮಾಧಿ ದರ್ಶನ ಪಡೆದಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಇವತ್ತಿಗೂ ಅವರು ಇಲ್ಲ ಎಂಬುದನ್ನು ನಾನು ಇವತ್ತಿಗೂ, ಎಂದಿಗೂ ಒಪ್ಪಲ್ಲ. ಏಕೆಂದರೆ ಅವರ ಜೊತೆ ನನ್ನ ಜರ್ನಿ ತುಂಬಾ ದೊಡ್ಡದಾಗಿದೆ. ಅವರೊಂದಿಗೆ ನನ್ನ ಒಡನಾಟ ಬಹಳ ದೊಡ್ಡದು ಎಂದು ನೆನೆದರು. ಅಪ್ಪು ಜೊತೆಗಿದ್ದ ಯಾರನ್ನದರೂ ಕೇಳಿ ಅವರು ಎಂದೂ ಯಾರನ್ನೂ ಭೇದ ಭಾವ ಮಾಡಿಲ್ಲ.
ಯಾರನ್ನು ಕೂಡಾ ಕೀಳಾಗಿ ನೋಡಿಲ್ಲ. ಅವರ ಬಗ್ಗೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ನಮ್ಮೊಳಗೆ ಮತ್ತು ನಮ್ಮ ಜೊತೆಗೆ ಇದ್ದೇ ಇರುತ್ತಾರೆ ಎಂದು ಹೇಳಿದರು. ಅಪ್ಪು ಅವರ ನಿಧನ ಸುದ್ದಿ ಬರುವ ಒಂದು ವಾರದ ಮುನ್ನ ನಾನು ಗೋವಾದಲ್ಲಿ ಶೂಟಿಂಗ್‍ನಲ್ಲಿದ್ದೆ. ಆಗ ಅವರು ಗೋವಾದಿಂದ ಬಂದ ತಕ್ಷಣ ನನ್ನನ್ನು ಭೇಟಿ ಮಾಡು, ಹೊಸ ಪ್ರಾಜೆಕ್ಟ್ ಏನಾದರೂ ಪ್ಲ್ಯಾನ್ ಮಾಡೋಣ ಎಂದಿದ್ದರು. ಆದರೆ ನಾನು ಗೋವಾದಲ್ಲಿ ಇರುವಾಗಲೇ ಈ ಸುದ್ದಿ ಬಂತು. ಸುದ್ದಿ ತಿಳಿದ ತಕ್ಷಣ ನಾವು ಇಲ್ಲಿಗೆ ಬಂದೆವು. ಆದರೆ ಅವರು ಇಲ್ಲ ಎಂದು ನನಗೆ ಅನಿಸುತ್ತಿಲ್ಲ ಎಂದರು. ಪುನೀತ್ ಅವರ ಜೊತೆ ನಾನು ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದೇನೆ. ಬಹಳ ಡೌನ್ ಟು ಅರ್ಥ್ ವ್ಯಕ್ತಿತ್ವ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಮ್ರಾನ್ ಸರ್ದಾರಿಯಾ ತಿಳಿಸಿದರು.
ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಮದುವೆಯಾಗಲು ಬಂದ ಜೋಡಿ
ಇಮ್ರಾನ್ ಸರ್ದಾರಿಯಾ ಹೆಸರಾಂತ ನೃತ್ಯ ಸಂಯೋಜಕರಾಗಿದ್ದು, ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಸಿನಿಮಾಗಳಿಗೆ ಕೊರಿಯೋಗ್ರಾಫ್ ಮಾಡಿ ಡ್ಯಾನ್ಸ್ ಹೇಳಿ ಕೊಟ್ಟಿದ್ದಾರೆ. ಜೊತೆಗೆ ಪುನೀತ್ ರಾಜ್‌ಕುಮಾರ್ ಅವರ ಜೊತೆ ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದು, ಡಿಫರೆಂಟ್ ಸ್ಟೆಪ್ಸ್‌ಗಳನ್ನು ಹೇಳಿಕೊಟ್ಟಿದ್ದಾರೆ. ಜೊತೆಗೆ ಪುನೀತ್‌ಗೆ ಹೆಚ್ಚು ಆಪ್ತರಾಗಿದ್ದ ಇಮ್ರಾನ್, ಈ ಹಿಂದೆ 'ದೇವರುಗಳು ದೇವಲೋಕಕ್ಕೆ ಹೋಗಬೇಕಾದರೆ, ಒಂದು ದೈವಾಂಶವನ್ನು ಭೂಲೋಕದಲ್ಲಿ ಬಿಟ್ಟು ಹೋಗುತ್ತಾರೆ. ಅದೇ ಅಪ್ಪು ಸರ್ ಅವರ ನಗು, ಮಗುವಿನ ಮನಸ್ಸು, ಮುತ್ತಿನಂತಹ ನಗು ಹೊತ್ತಿರುವ ನಮ್ಮ ಅಪ್ಪು ಸರ್ ಯಾವಾಗಲೂ ಎಲ್ಲರಿಗೂ ಹತ್ತಿರ. ಬದಲಾಗು ನೀನು ಬದಲಾಯಿಸು ನೀನು ದೃಶ್ಯರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕಾಗಿ ಲವ್ ಯು ಸರ್' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಕೂಡಾ ಹಂಚಿಕೊಂಡಿದ್ದರು.
ಪುನೀತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ
ಇನ್ನು ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ದೊಡ್ಡದಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್ ರಾಜ್ಕುಮಾರ್ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬಂದು ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆಯ ಅನೇಕ ಸೆಲೆಬ್ರಿಟಿಗಳು ಸಹ ಭೇಟಿ ನೀಡುತ್ತಿದ್ದಾರೆ. ನಟ ಸೂರ್ಯ, ರಾಮ್ ಚರಣ್, ರಾಜೇಂದ್ರ ಪ್ರಸಾದ್ ಸೇರಿದಂತೆ ಅನೇಕ ಸ್ಟಾರ್ ನಟರು ಬೆಂಗಳೂರಿಗೆ ಆಗಮಿಸಿ ಪುನೀತ್ ಕುಟುಂಬವನ್ನು ಭೇಟಿ ಮಾಡಿ ತೆರಳಿದ್ದಾರೆ.
"