ಸ್ಯಾಂಡಲ್‌ವುಡ್‌ ಲವರ್‌ ಬಾಯ್ ನಾಯಕನಾಗಿ ಅಭಿನಯಿಸಿರುವ 'ಕೃಷ್ಣ ಟಾಕೀಸ್' ಚಿತ್ರದ ಹಾಸ್ಯಕ್ಕೆ ಚಿಕ್ಕಣ್ಣ ಸಾಥ್ ನಿಡಿದ್ದಾರೆ. ಇತ್ತೀಚಿಗೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಆರ್‌ಸಿಬಿ ತಂಡದ ಬಗ್ಗೆ ಸುಮಾರು 40 ಸೆಕೆಂಡ್ ಡೈಲಾಗ್ ಹೇಳಿರುವ ಚಿಕ್ಕಣ್ಣನನ್ನು ನೆಟ್ಟಿಗರು ಹೊಗಳಿದ್ದಾರೆ. 

ಆರ್‌ಸಿಬಿ ತಂಡದ ಬಗ್ಗೆ ಅಭಿಮಾನ ತೋರಿಸಿ ಡೈಲಾಗ್‌ ಹೇಳಿರುವ ಚಿಕ್ಕಣ್ಣ, ಇದೇ ರೀತಿ ಡೈಲಾಗ್ ತಮ್ಮ ಚಿತ್ರದ ನಾಯಕ ಅಜಯ್ ರಾವ್ ಹೇಳಬೇಕು ಎಂದು ಟ್ಟಿಟ್ಟರ್ ಮೂಲಕ ಜಾಲೆಂಜ್‌ ಹಾಕಿದ್ದಾರೆ. ಚಿಕ್ಕಣ್ಣ ಹಾಗೂ ಅಜಯ್ ರಾವ್ ಇಬ್ಬರೂ ವಿಭಿನ್ನ ವ್ಯಕ್ತಿತ್ವದವರು. ಚಿಕ್ಕ ಫುಲ್ ಮಾಸ್‌ ಲುಕ್‌ನಲ್ಲಿ ಹೇಳಿರುವ ಈ ಡೈಲಾಗ್‌ನ ಅಜಯ್ ಹೇಗೆ ಹೇಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. 

ಕೃಷ್ಣ ಹೆಸರಲ್ಲಿ ನೂರು ಸಿನಿಮಾ ಬಂದ್ರೂ ಮಾಡ್ತೀನಿ: ಅಜಯ್‌ ರಾವ್‌

'ABD ಹೇಳುವುದು ಬೇಕಾದರೆ ಬಿಡ್ತೀವಿ, ಆದರೆ ABD ABD ಅಂತ ಕೂಗುವುದು ಬಿಡಲ್ಲ. ಆರ್‌ ಅರು ಜನ ಹುಡುಗೀರ್ನಾ ಬೇಕಾದ್ರೂ ಚೇಂಜ್  ಮಾಡ್ತೀವಿ, ಆದರೆ ಆರ್‌ಸಿಬಿ ಫಾರ್‌ ಲೈಫ್‌ ಎಂಬ ಸ್ಲೋಗನ್‌ ಮಾತ್ರ ಬಿಡಲ್ಲ....' ಹೀಗೆ 40 ಸೆಕೆಂಡ್ ಉದ್ದವಾದ ಡೈಲಾಗ್‌ ಇದಾಗಿದೆ.

ಚಾಲೆಂಜ್‌ ಸ್ವೀಕರಿಸಿದ ಅಜಯ್ ರಾವ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ಚಾಲೆಂಜ್‌ನ ಕೊನೆಯಲ್ಲಿ ಕೃಷ್ಣ ಟಾಕೀಸ್‌ ನಾಯಕಿ ಅಪೂರ್ವಗೆ ಸವಾಲ್ ಹಾಕಿದ್ದಾರೆ. ಜೊತೆಗೆ ವಿಡಿಯೋದಲ್ಲಿ ಒಂದು ನಂಬರ್ ಪ್ರಸಾರ ಮಾಡಿದ್ದಾರೆ. ಇದೇ ರೀತಿ 40 ಸೆಕೆಂಡ್ ನಾನ್‌ಸ್ಟಾಪ್‌ ಡೈಲಾಗ್‌ ಹೇಳುವ 50 ಜನರಿಗೆ ಚಿತ್ರತಂಡದಿಂದ ಬಂಪರ್ ಬಹುಮಾವಿದೆ. 

‘ಕೃಷ್ಣ ಟಾಕೀಸ್‌’ನಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಟಪ್ಪಾಂಗುಚ್ಚಿ ಸ್ಪೆಪ್ಸ್

ನೀವೂ ಯಾಕೆ ಒಮ್ಮೆ ಟ್ರೈ ಮಾಡಬಾರದು? All the Best.