ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ ಮುಂಡಾಡಿ ಮತ್ತೊಂದು ಹೊಸತನದ ಕತೆಯೊಂದಿಗೆ ಬಂದಿದ್ದಾರೆ. ‘ಭಾವಪೂರ್ಣ’ ಅವರ ಹೊಸ ಚಿತ್ರದ ಹೆಸರು. ಈ ಕುರಿತು ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ ಮುಂಡಾಡಿ ಮತ್ತೊಂದು ಹೊಸತನದ ಕತೆಯೊಂದಿಗೆ ಬಂದಿದ್ದಾರೆ. ‘ಭಾವಪೂರ್ಣ’ ಅವರ ಹೊಸ ಚಿತ್ರದ ಹೆಸರು. ರಮೇಶ್‌ ಪಂಡಿತ್‌, ಮಂಜುನಾಥ್‌ ಹೆಗಡೆ, ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್‌, ವಿ.ಮನೋಹರ್‌, ಸುಜಯ್‌ ಶಾಸ್ತ್ರಿ, ಎಂ ಕೆ ಮಠ, ವಿನ್ಯಾ, ಉಗ್ರಂ ಮಂಜು, ಜೆಜಿ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ‘ಸೆ.8 ರಿಂದ ಸೌತಡ್ಕ, ಸಾಗರ, ಜೋಗ, ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆಯಲಿದೆ ಆರಂಭವಾಗಲಿದೆ. ಇದು ಹಳೆಯದರ ನೆನಪುಗಳ ಸಿನಿಮಾ. ಕತೆಯಲ್ಲಿ ಪ್ರತಿಯೊಂದು ಪಾತ್ರವೂ ಭಾವಪೂರ್ಣವಾಗಿ ನಟಿಸುತ್ತವೆ. ಜನನ, ಮರಣಗಳ ನಡುವೆ ಬದುಕು ಸಾಗುತ್ತಿದೆ. 

ಹೊಸ ಕಾಲಘಟ್ಟದಲ್ಲಿ ನಿಂತು ಹಳೆಯದ ಸುಮಧುರವಾದ ಕ್ಷಣಗಳನ್ನು ನೆನಪಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿಯ ಜೀವನ ಪಯಣ ಸಾಗುತ್ತದೆ. ಆ ಮೂಲಕ ಸಿನಿಮಾ ತೆರೆದುಕೊಳ್ಳುತ್ತದೆ. ಅಂದರೆ ಒಂದು ಚಿಕ್ಕ ಹಳ್ಳಿಯಲ್ಲಿ 50ರ ವಯಸ್ಸಿನ ವ್ಯಕ್ತಿ ಕತೆ ಇದಾಗಿರುತ್ತದೆ’ ಎಂದು ಮಾಹಿತಿ ನೀಡಿದರು ಚೇತನ್‌ ಮುಂಡಾಡಿ. ರಮೇಶ್‌ ಪಂಡಿತ್‌ ಅವರು ಧರ್ಮಣ್ಣ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಬದುಕಿನ ಹುಡುಕಾಟದ ಮೂಲಕ ಕತೆ ಸಾಗುತ್ತದೆ. ತಿಳಿ ಹಾಸ್ಯ, ಭಾವನೆಗಳ ಮೇಲೆ ಇಡೀ ಕತೆ ಸಾಗುತ್ತದೆ’ ಎಂದರು ರಮೇಶ್‌ ಪಂಡಿತ್‌. ನನಗೆ ಅಳುವ ಹಾಗೂ ಸಂದೇಶ ನೀಡುವ ಚಿತ್ರಗಳಲ್ಲಿ ಆಸಕ್ತಿ ಇಲ್ಲ. ಜನ ಸಿನಿಮಾ ನೋಡಲು ಬರುವುದು ತಮ್ಮ ನಿತ್ಯದ ಕಷ್ಟಗಳನ್ನು ಮರೆಯುವುದಕ್ಕಾಗಿ. 

ಸ್ಟಾರ್ ಆಗಿದ್ರೂ ತೆಲುಗು ಬಿಟ್ಟು ಹಿಂದಿಯಲ್ಲಿ ನಟಿಸುವ ಧೈರ್ಯ ಇರ್ಲಿಲ್ಲ; ರಮ್ಯಾ ಕೃಷ್ಣ

ಚಿತ್ರದಲ್ಲೂ ದುಖದ ಸಂಗತಿ ಇದ್ದರೆ ಯಾರು ಇಷ್ಟ ಪಡುವುದಿಲ್ಲ. ಹಾಗಾಗಿ ಚೇತನ್ ಮುಂಡಾಡಿ ಒಳ್ಳೆಯ ಮನೋರಂಜನೆಯಿರುವ ಕಥೆ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದನ್ನು ಒದಗಿಸುವುದನ್ನು ನಾನು ಮಾಡುತ್ತೇನೆ ಎಂದರು ನಿರ್ಮಾಪಕ ಪ್ರಶಾಂತ್ ಅಂಜನಪ್ಪ. ಪೋಷಕ ನಟ ಸುಂದರ್‌ ವೀಣಾ ಚಿತ್ರಕ್ಕೆ ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪ್ರಶಾಂತ್‌ ಅಂಜನಪ್ಪ ಚಿತ್ರದ ನಿರ್ಮಾಪಕರು. ಅವರಿಗೆ ರೆಗ್ಯೂಲರ್‌ ಮಾಸ್‌ ಹಾಗೂ ಕಮರ್ಷಿಯಲ್‌ ಚಿತ್ರಗಳಿಗಿಂತ ಮನಸ್ಸಿಗೆ ನೆಮ್ಮದಿ ಕೊಡುವ ಚಿತ್ರಗಳನ್ನು ನಿರ್ಮಿಸುವ ಆಸೆಯಂತೆ. ಹೀಗಾಗಿ ‘ಭಾವಪೂರ್ಣ’ ಚಿತ್ರಕ್ಕೆ ಬಂಡವಾಳ ಹೂಡಿರುವುದಾಗಿ ಹೇಳಿಕೊಂಡರು. ಚಿತ್ರಕ್ಕೆ ವಿ ಮನೋಹರ್‌ ಸಂಗೀತ, ಪ್ರಸನ್ನ ಛಾಯಾಗ್ರಹಣ ಇದೆ.

ಮರೆಯಾದ ಚರಿತ್ರೆಯ ಕಿಡಿ: ನಟ ಅಭಿಷೇಕ್‌ ಅವರ ನಾಲ್ಕನೇ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್‌ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದರು. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರವನ್ನು ಮಹೇಶ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ‘ಮದಗಜ’ ಚಿತ್ರದ ನಂತರ ಮಹೇಶ್‌ ಕುಮಾರ್‌ ಕೈಗೆತ್ತಿಕೊಂಡಿರುವ ಈ ಚಿತ್ರಕ್ಕೆ ಕತೆಗಾರ ಟಿ ಕೆ ದಯಾನಂದ ಅವರು ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮೊದಲ ಬಾರಿಗೆ ಅಭಿಷೇಕ್‌ ಅವರು ಐತಿಹಾಸಿಕ ಕತೆಯಲ್ಲಿ ವಾರಿಯರ್‌ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. 

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

‘ಇದು ನನ್ನ ಐತಿಹಾಸಿಕ ಹೆಜ್ಜೆಯ ಸಿನಿಮಾ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಅಭಿಷೇಕ್‌ ಅವರು ಈ ರೀತಿಯ ಪಾತ್ರ ಮಾಡಬಹುದೇ ಎನ್ನುವಷ್ಟುಅಚ್ಚರಿ ಮೂಡಿಸುವಂತೆ ಅವರ ಪಾತ್ರ ಇಲ್ಲಿದೆ. ಚರಿತ್ರೆಯ ಪುಟಗಳಿಂದ ಮರೆಯಾದ ಕಿಡಿಯೊಂದನ್ನು ತೆರೆ ಮೇಲೆ ಕಾಲ್ಪನಿಕ ನೆರಳಿನಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈಗಷ್ಟೆಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಆಗಿದೆ’ ಎನ್ನುತ್ತಾರೆ ಮಹೇಶ್‌ ಕುಮಾರ್‌.