ಸ್ಟಾರ್ ಆಗಿದ್ರೂ ತೆಲುಗು ಬಿಟ್ಟು ಹಿಂದಿಯಲ್ಲಿ ನಟಿಸುವ ಧೈರ್ಯ ಇರ್ಲಿಲ್ಲ; ರಮ್ಯಾ ಕೃಷ್ಣ
ಬಾಲಿವುಡ್‌ನಲ್ಲಿ ಸಕ್ಸಸ್ ಸಿಗದೆ ಇರುವ ಬಗ್ಗೆ ರಮ್ಯಾ ಕೃಷ್ಣ ಇದೀಗ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ಸಿನಿಮಾರಂಗ ತನ್ನ ಕೈಹಿಡಿಲಿಲ್ಲ ಎನ್ನುವುದನ್ನು ಬಾಹುಬಲಿ ನಟಿ ಒಪ್ಪಿಕೊಂಡಿದ್ದಾರೆ.
ರಮ್ಯಾ ಕೃಷ್ಣ, ದಕ್ಷಿಣ ಭಾರತದ ಖ್ಯಾತ ನಟಿರಲ್ಲಿ ಒಬ್ಬರು. ದಕ್ಷಿಣ ಭಾರತ ಮತ್ತು ಬಾಲಿವುಡ್ ಸಿನಿಮಾಗದಲ್ಲೂ ಮಿಂಚಿಸುವ ಬಹುಭಾಷಾ ಸುಂದರಿ. ಹಿಂದಿಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ರಮ್ಯಾ ಕೃಷ್ಣ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಬಾಹುಬಲಿ ಸಿನಿಮಾ ಬಳಿಕ ಉತ್ತರದಲ್ಲಿ ರಮ್ಯಾ ಕೃಷ್ಣ ಅವರ ಖ್ಯಾತಿ ಹೆಚ್ಚಾಯಿತು. ಅದಕ್ಕೂ ಮೊದಲು ಅನೇಕ ಸಿನಿಮಾಗಳನ್ನು ಮಾಡಿದ್ದಾರೆ ಆದರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಾಲಿವುಡ್‌ನಲ್ಲಿ ಸಕ್ಸಸ್ ಸಿಗದೆ ಇರುವ ಬಗ್ಗೆ ರಮ್ಯಾ ಕೃಷ್ಣ ಇದೀಗ ಬಹಿರಂಗ ಪಡಿಸಿದ್ದಾರೆ. ಸಂದರ್ಶನದಲ್ಲಿ ರಮ್ಯಾ ಕೃಷ್ಣ ಬಾಲಿವುಡ್ ಸಿನಿಮಾರಂಗ ತನ್ನ ಕೈಹಿಡಿಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ರಮ್ಯಾ ಕೃಷ್ಣ, ದಯಾವನ್, ಪರಂಪರಾ, ಖಳ್ ನಾಯಕ್, ಚಾಹತ್, ಬನಾರಸಿ ಬಾಬು ಸೇರಿದಂತೆ ಇನ್ನು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ರಮ್ಯಾ ಕೃಷ್ಣ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿಲ್ಲ.
ಈ ಬಗ್ಗೆ ಮಾತನಾಡಿರುವ ರಮ್ಯಾ ಕೃಷ್ಣ, 'ಹಿಂದಿಯಲ್ಲಿ ಯಾವುದೇ ಚಿತ್ರಗಳು ವರ್ಕೌಟ್ ಆಗಿಲ್ಲ. ನಾನು ಆಗಲೇ ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿದ್ದೆ, ಟಾಪ್ ನಾಯಕಿಯಾಗಿದ್ದೆ. ಆದರೂ ತೆಲುಗು ಉದ್ಯಮವನ್ನು ತೊರೆದು ಹಿಂದಿಗೆ ಬಂದು ಫೈಟ್ ನನಗೆ ಧೈರ್ಯವಿರಲಿಲ್ಲ. ಎಲ್ಲವನ್ನೂ ಬಿಟ್ಟುಕೊಡಲು ಧೈರ್ಯವಿಲ್ಲ' ಎಂದು ಹೇಳಿದ್ದಾರೆ.
ರಮ್ಯಾ ಕೃಷ್ಣ- ಕೃಷ್ಣವಂಶಿ ಡಿವೋರ್ಸ್..? ಶಿವಗಾಮಿ ಬದುಕಲ್ಲಿ ಬಿರುಗಾಳಿ
'ಒಂದು ನಿರ್ದಿಷ್ಟ ಉದ್ಯಮದಲ್ಲಿಯೇ ಹೆಚ್ಚು ಚಲನಚಿತ್ರಗಳನ್ನು ಮಾಡಬೇಕು ಎಂದರೆ ಯಶಸ್ವಿ ಚಲನಚಿತ್ರಗಳು ಬೇಕು. ದುರದೃಷ್ಟವಶಾತ್, ಅದು ಹಿಂದಿಯಲ್ಲಿ ನನಗೆ ಆಗಲಿಲ್ಲ ಮತ್ತು ನಾನು ತೆಲುಗು ಚಿತ್ರಗಳನ್ನು ಮಾಡಲು ಆರಾಮವಾಗಿದ್ದೆ' ಎಂದರು. ಅಂದಹಾಗೆ ರಮ್ಯಾ ಕೃಷ್ಣ ಬಾಹುಬಲಿ ಸಿನಿಮಾ ಬಳಿಕ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದಲ್ಲಿ ರಮ್ಯಾ ಕೃಷ್ಣ ನಟಿಸಿದ್ದರು. ವಿಜಯ್ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ಲೈಗರ್ ಸಿನಿಮಾ ನಿರೀಕ್ಷೆಯ ಯಶಸ್ಸು ಕಂಡಿಲ್ಲ. ಮೊದಲ ದಿನ ಉತ್ತಮ ಕಮಾಯಿ ಮಾಡಿದ್ದರೂ ಸಹ ಬಳಿಕ ಕಲೆಕ್ಷನ್ ಸಂಪೂರ್ಣ ಡೌಲ್ ಆಗಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಾಲಿವುಡ್ ಬ್ಯೂಟಿ ರೇಖಾ ನೃತ್ಯ ನೋಡಿ ಕಣ್ಣೀರು ಹಾಕಿದ ಬಾಹುಬಲಿ ನಟಿ..!
ಲೈಗರ್ ಸಿವನಿಮಾಗೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು. ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದರು. ಮೊದಲ ಬಾರಿಗೆ ಅನನ್ಯಾ ಪಾಂಡೆ ಸೌತ್ ಸಿನಿರಂಗದಲ್ಲಿ ಮಿಂಚಿದ್ದರು. ದೊಡ್ಡ ಮಟ್ಟದಲ್ಲಿ, ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಇನ್ನು ರಮ್ಯಾ ಕೃಷ್ಣ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೇ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನ ಜೈಲರ್ ಸಿನಿಮಾದಲ್ಲಿ ನಟಸುತ್ತಿದ್ದಾರೆ ಎನ್ನಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣ ಕೂಡ ಇದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಕನ್ನಡದಲ್ಲಿ ಕೊನೆಯದಾಗಿ ಅಂಜನಿ ಪುತ್ರ ಸಿನಿಮಾದಲ್ಲಿ ನಟಿಸಿದ್ದರು. ಪವರ್ ಸ್ಟಾರ್ ಪುನೀತ್ ನಾಯಕನಾಗಿ ನಟಿಸಿದ್ದ ಸಿನಿಮಾ ಇದು. ಸದ್ಯ ಶಿವಗಾಮಿ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನು ರಿಲೀಸ್ ಆಗಬೇಕಿದೆ.