ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಏನ್ ಮಾಡಿದಾಗ್ಲೂ ಪ್ರಶಂಸೆ ಸಿಕ್ಕಿದಷ್ಟೇ ಟ್ರೋಲ್ ಕೂಡಾ ಅಗ್ತಾರೆ. ಇದೀಗ ಮತ್ತೊಮ್ಮೆ ನಟನ ಕಾಲೆಳೆದಿದ್ದಾರೆ ನೆಟ್ಟಿಗರು. ಸುಮ್‌ ಸುಮ್ನೆ ತರ್ಲೆ ಕಮೆಂಟ್ ಹಾಕಿದ ವ್ಯಕ್ತಿಗೆ ಫನಿಯಾಗಿಯಾಗಿ ಟಾಂಗ್ ಕೊಟ್ಟಿದ್ದಾರೆ ಚಂದನ್ ಶೆಟ್ಟಿ.

ಬಿಗ್‌ಬಾಸ್ ಮೂಲಕ ಫೇಮಸ್ ಆದ ಚಂದನ್ ಶೆಟ್ಟಿ ಸಹ ಸ್ಪರ್ಧಿ ನಿವೇದಿತಾ ಗೌಡ ಅವರನ್ನೇ ಪ್ರೀತಿಸಿದ ಮದುವೆಯಾದರು. ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಕಪಲ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫ್ಯಾನ್ಸ್ ಜೊತೆ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಸಿಕ್ಕಾಪಟ್ಟೆ ದಪ್ಪಗಾಗಿರೋ ನಿವೇದಿತಾ ಗುಡ್ ನ್ಯೂಸ್ ಕೊಡ್ತಾರಾ!

ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಅವರ ಕೋಲು ಮಂಡೆ ಸಾಂಗ್ ರಿಲೀಸ್ ಆಗಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದೇ ಸಮಯಕ್ಕೆ ಈ ವಿಡಿಯೋ ಸಾಂಗ್ ಸಾಕಷ್ಟು ಕಾಂಟ್ರವರ್ಸಿ ಸೃಷ್ಟಿಸಿತ್ತು.

ಆಮೇಲೆ ಸಾಂಗ್ ಡಿಲೀಟ್ ಮಾಡಿ, ರಿರಿಲೀಸ್ ಎಂದು ಬಹಳಷ್ಟು ಸುದ್ದಿಯಾಗಿತ್ತು ಈ ಕೋಲುಮಂಡೆ ಸಾಂಗ್. ಇದೀಗ ಚಂದನ್ ಅವರ ಸ್ಟ್ರಾ ಮ್ಯೂಸಿಕ್ ಬೀಟ್ಸ್‌ ವೈರಲ್ ಆಗಿದೆ.

ಕೋಲುಮಂಡೆ ಸಾಂಗ್ ರೀ ರಿಲೀಸ್, ಈಗ ಹೇಗಿದೆ ನೋಡಿ

ಸ್ಟ್ರಾಬೀಟ್ ಅಂತ ಬರೆದಿರೋ ಚಂದನ್ ಶೆಟ್ಟಿ ಚಂದದ ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರೋ ವ್ಯಕ್ತಿಯೊಬ್ಬರು ಕನ್ನಡವನ್ನು ಇಂಟರ್‌ನ್ಯಾಷನಲ್ ಲೆವೆಲ್‌ಗೆ ಕರ್ಕೊಂಡ್ ಹೋಗ್ತೀನಿ ಅಂದ್ಬಿಟ್ಟು, ನಿನ್ ಹೆಂಡ್ತಿ ಜೊತೆ ರಸಂ ಮಾಡ್ಕೊಂಡ್ ಕುಡಿತಿದ್ಯಲ್ಲಾ ಗುರು ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಆನ್ಸರ್ ಮಾಡಿದ ಚಂದನ್ ಶೆಟ್ಟಿ, ಗುರು, ನಾನ್ ರಸಂ ಆದ್ರೂ ಮಾಡ್ತೀನಿ, ಕೋಳಿ ಸಾರ್ ಆದ್ರೂ ಮಾಡ್ತೀನಿ. ನಿಮ್ ಮನೆ ಸ್ಟೌ ಮೇಲೆ ಮಾಡ್ತಿಲ್ವಲ್ಲಾ.. ಚಿಲ್.. ನನ್ನ ಈ ಮೊದಲ ಹಾಡು ಈಗಾಗಲೇ ಫಾರಿನ್ ಪಬ್‌ಗಳಲ್ಲಿ ಪ್ಲೇ ಆಗ್ತಿದೆ. ಕನ್ನಡ ಬೆಂಬಲಿಸೋರಿಂದ ಕನ್ನಡ ಅಂತಾರಾಷ್ಟ್ರೀಯ ಮಟ್ಟ ತಲುಪಬಹುದು.

ಆದರೆ ನಿಮ್ಮಂತವರು ದ್ವೇಷ ಮಾಡ್ತಾ, ಕಲಾವಿದರನ್ನು ಡಿಮೋಟಿವೇಟ್ ಮಾಡ್ತೀರಿ. ನಿಮ್ಮಂತವರಿರಬೇಕು. ಅದೇ ನಮಗೆ ಮೋಟಿವೇಷನ್. ನಾನು ಗುರಿ ತಲುಪೋ ತನಕ ಹೇಟ್ ಮಾಡ್ತಿರಿ ಎಂದು ಉತ್ತರಿಸಿದ್ದಾರೆ.

ಸ್ಟ್ರಾನಲ್ಲಿ ಜ್ಯೂಸ್ ಕುಡಿಯೋಕೆ ಹೊರಟು ಅಲ್ಲಿಂದಲೇ ಸ್ಟ್ರಾಬೀಟ್ಸ್ ಹಾಕಿದ ಚಂದನ್ ಅವರನ್ನು ಮತ್ತೊಮ್ಮ ಅಭಿಮಾನಿ ಕಾಲೆಳೆದಿದ್ದಾರೆ. ಪ್ಲಾಸ್ಟಿಕ್ ಸ್ಟ್ರಾ ಬಳಸೋದು ಪರಿಸರಕ್ಕೆ ಒಳ್ಳೆಯದಲ್ಲ ಅಂತ ಚಂದನ್ ಶೆಟ್ಟಿ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರಿಸಿದ ಚಂದನ್ ಶೆಟ್ಟಿ ಇದು ಪರಿಸರ ಸ್ನೇಹಿ ಸ್ಟ್ರಾ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂತೂ ಚಂದನ್ ಶೆಟ್ಟಿ ಕುಂತ್ರು ನಿಂತ್ರು ಸುದ್ದಿಯಾಗ್ತಾನೆ ಇರ್ತಾರೆ. ನೆಟ್ಟಿಗರು ಬೇಕಂತಾನೆ ಇವ್ರ ಕಾಲೆಳಿತಿದ್ದಾರೆನೋ ಎಂಬಂತಿತ್ತು ಸ್ಟ್ರಾ ಬೀಟ್ಸ್ ವಿಡಿಯೋಗೆ ಬಂದ ಕಮೆಂಟ್ಸ್. ಏನೇ ಆಗ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ ಚಂದನ್.