ಚಂದನ್​ ಶೆಟ್ಟಿ ಕಾರಿನ ಮೇಲೂ ಮಾಜಿ ಪತ್ನಿ ನಿವೇದಿತಾ ಗೌಡ! ನಂಬರ್​ ಪ್ಲೇಟ್​ ಮೇಲೆ ಫ್ಯಾನ್ಸ್​ ಕಣ್ಣು

ಡಿವೋರ್ಸ್​ ಬಳಿಕ ಚಂದನ್​ ಶೆಟ್ಟಿ ಕಾರು ಖರೀದಿಸಿದ್ದು, ಆ ಕಾರಿನ ನಂಬರ್​ ಪ್ಲೇಟ್​ಗೆ ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಲಿಂಕ್​ ಮಾಡಲಾಗಿದೆ. ಏನಿದು ವಿಷಯ?
 

Chandan Shetty bought a car and the number plate linked to his ex wife Nivedita Gowda by fans suc

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಡಿವೋರ್ಸ್​ ಆಗಿ ಕೆಲ ತಿಂಗಳು ಕಳೆದರೂ ಅವರಿಬ್ಬರ ವಿಷಯ ಇನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ನಿವೇದಿತಾ ಅವರು ಡಿವೋರ್ಸ್​ ಬಳಿಕ ಹಾಟ್​ ಅವತಾರದಲ್ಲಿ ರೀಲ್ಸ್​ ಮಾಡುವುದು ಹೆಚ್ಚುತ್ತಿದ್ದಂತೆಯೇ ಅಷ್ಟೇ ಟ್ರೋಲ್​ಗೆ ಒಳಗಾಗುತ್ತಲೇ ಸದ್ದು ಮಾಡುತ್ತಿದ್ದರೆ, ಚಂದನ್​ ಶೆಟ್ಟಿ ಕೂಡ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ, ಜೊತೆಗೆ ಒಂದಿಷ್ಟು ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಮಾಜಿ ದಂಪತಿ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಇಬ್ಬರನ್ನು ಲಿಂಕ್​ ಮಾಡುತ್ತಲೇ ಇರುತ್ತಾರೆ. ಇವರಿಬ್ಬರೂ ಬೇರೆ ಬೇರೆಯಾಗಿದ್ದನ್ನೂ ಹಲವರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಇದೀಗ ಡಿವೋರ್ಸ್​ ಬಳಿಕ ಚಂದನ್ ಶೆಟ್ಟಿಯವರು ಖರೀದಿ ಮಾಡಿರುವ ಕಾರಿಗೂ, ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರಿಗೂ ಲಿಂಕ್​  ಮಾಡಲಾಗುತ್ತಿದೆ. ಅಂದಹಾಗೆ ಡಿವೋರ್ಸ್​ ಬೆನ್ನಲ್ಲೇ ಚಂದನ್​ ಶೆಟ್ಟಿ,  ಟೊಯೊಟಾ ಫಾರ್ಚುನರ್ ಲೆಜೆಂಡರ್ (Toyota Fortuner Legender) ಎಸ್‍ಯುವಿ ಕಾರನ್ನು ಖರೀದಿ ಮಾಡಿದ್ದಾರೆ. ಇದೇ 3ರಂದು ಅವರು ಕಾರು ಖರೀದಿ ಮಾಡಿದ್ದು, ಅದರ ಮುಂದೆ ನಿಂತುಕೊಂಡಿರುವ ಫೋಟೋ ಶೇರ್​ ಮಾಡಿದ್ದರು. ಅವರ ಕಾರಿನ ನಂಬರ್​ ಕೂಡ ಇದಾಗಲೇ ವೈರಲ್​ ಆಗಿತ್ತು. ಅವರು ತಮ್ಮ ಕಾರಿಗೆ ಫ್ಯಾನ್ಸಿ ನಂಬರ್​ ತೆಗೆದುಕೊಂಡಿದ್ದಾರೆ. ಅದರ ಸಂಖ್ಯೆ KA 04 NC 1414. 1414 ಎನ್ನುವುದು ಫ್ಯಾನ್ಸಿ ನಂಬರ್​. ವಾಹನ ಮಾಲೀಕರು ತಮ್ಮ ಲಕ್ಕಿ ನಂಬರ್​ ಪಡೆಯಲು ಒಂದಿಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಇದು ಲಕ್ಷ ಲಕ್ಷ ರೂಪಾಯಿಗಳವರೆಗೂ ನಿಗದಿಯಾಗುತ್ತದೆ. ಅದೇನೇ ಇರಲಿ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗ್ತಿರೋದು ಇದೇ ನಂಬರ್​ ಕುರಿತು.

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

ಅದೇನಪ್ಪಾ ಎಂದರೆ, ಈ ನಂಬರ್​ ಹಿಂದೆ ಇರುವ NC ಬಗ್ಗೆ ಚರ್ಚೆ ಶುರುವಾಗಿದೆ. ಇವರ ಅಭಿಮಾನಿಗಳ ಪ್ರಕಾರ ಎನ್​ ಎಂದರೆ ನಿವೇದಿತಾ, ಸಿ ಎಂದರೆ ಚಂದನ್​ ಶೆಟ್ಟಿ ಎನ್ನುವುದು. ಇದನ್ನು ಚಂದನ್​ ಅವರು ಹಣ ಕೊಟ್ಟು ಪಡೆದುಕೊಂಡಿದ್ದಾರೆ ಎನ್ನುವುದು ಹಲವರ ಅಭಿಮತವಾದರೆ, ನಂಬರ್​ ಅಷ್ಟನ್ನೇ ಹಣ ಕೊಟ್ಟು ಪಡೆಯುತ್ತಾರೆ, ಆದರೆ ಅವರು ಕಾರು ಖರೀದಿ ಮಾಡುವ ಸಮಯದಲ್ಲಿ NC ಎನ್ನುವುದೇ ಚಾಲ್ತಿಯಲ್ಲಿ ಇದ್ದ ಕಾರಣ, ಅದು ಬಂದಿದೆಯಷ್ಟೆ. ಎಲ್ಲವೂ ದೈವ ಲೀಲೆ ಎಂದು ಇನ್ನಷ್ಟು ಮಂದಿ ಹೇಳುತ್ತಿದ್ದಾರೆ. ಮತ್ತೆ ಕೆಲವರು, ಇದು ಚಂದನ್​ ಶೆಟ್ಟಿಯವರಿಗೆ ಗೊತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳ ತಲೆ ಹೇಗ್ಹೇಗೆ ಓಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. 
 
ಅಂದಹಾಗೆ ಚಂದನ್​ ಶೆಟ್ಟಿಯವರು ಮೊನ್ನೆಯಷ್ಟೇ ಅಂದರೆ, ಸೆಪ್ಟೆಂಬರ್​ 17ರಂದು  35ನೇ ಹುಟ್ಟುಹಬ್ಬ ಆಚರಿಸಿಕೊಂಡರು.  ಆಗಲೂ ಅವರ ಅಭಿಮಾನಿಗಳಿಗೆ ಚಂದನ್ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಎನ್ನುವುದೇ ಚಿಂತೆ.  ನಿವೇದಿತಾ ಜೊತೆ ವಿಚ್ಛೇದನ ಆದಾಗಿನಿಂದಲೂ ಅವರ ಅಭಿಮಾನಿಗಳಿಗೆ ಒಂದೇ ಚಿಂತೆ. ಅವರು  ಯಾವಾಗ ಗುಡ್‌ನ್ಯೂಸ್‌ ಕೊಡುತ್ತಾರೆ ಎಂದೇ ಬಹುತೇಕ ಮಂದಿ ಕಾಯುತ್ತಿದ್ದಾರೆ. ಸದ್ಯ ಚಂದನ್‌ ಶೆಟ್ಟಿ ಅವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ.  ಇದೇ ರೀತಿ ಇವರ ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ.  ಸದ್ಯ ತಮ್ಮ ಕರಿಯರ್‌ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮದುವೆ ಎಲ್ಲಾ ಆಮೇಲೆ ಎಂದು ಇದಾಗಲೇ ಹಲವು ಬಾರಿ ಚಂದನ್‌ ಅವರು ಹೇಳಿದ್ದರೂ, ಅವರ ಅಭಿಮಾನಿಗಳಿಗೆ ಅವರನ್ನು ಮದುವೆ ಮಾಡಿಸುವವರೆಗೂ ಸಮಾಧಾನವಿಲ್ಲ. ಈಗ ಮತ್ತೆ ಕಾರನ್ನೂ ಬಿಡಲಿಲ್ಲ. 

ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!

Latest Videos
Follow Us:
Download App:
  • android
  • ios