ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಶಿಖಂಡಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಬಾ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಸೂರಪ್ಪ ಬಾಬು ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಚಂದ್ರಚೂಡ್ ಆಕ್ರೋಶ ಹೊರಹಾಕಿದ್ದಾರೆ.
ನಟ ಸುದೀಪ್ ಮತ್ತು ನಿರ್ಮಾಪಕ ಎಮ್ ಎನ್ ಕುಮಾರ್ ಜಟಾಪಟಿ ನಡುವೆ ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ನಡುವಿನ ಕಿತ್ತಾಟ ಜೋರಾಗಿದೆ. ಈ ಹಿಂದೆ ಸುದೀಪ್ ವಿರುದ್ಧದ ಷಡ್ಯಂತ್ರದ ಹಿಂದೆ ಸೂರಪ್ಪ ಬಾಬು ಕೈವಾಡವಿದೆ ಎಂದು ಚಂದ್ರಚೂಡ್ ಆರೋಪ ಮಾಡಿದ್ದರು. ಆರೋಪದ ಬೆನ್ನಲ್ಲೇ ಸೂರಪ್ಪ ಬಾಬು ಪ್ರೆಸ್‌ಮೀಟ್ ಮಾಡಿ ಚಂದ್ರಚೂಡ್ ವಿರುದ್ಧ ಕಿಡಿ ಕಾರಿದ್ದರು. ಸೂರಪ್ಪ ಬಾಬು ಸುದ್ಧಿಗೋಷ್ಠಿಮಾಡಿದ ಬೆನ್ನಲ್ಲೇ ಚಂದ್ರಚೂಡ್ ಕೂಡ ಪತ್ರಿಕಾಗೋಷ್ಠಿ ನಡೆಸಿ ಸೂರಪ್ಪ ಬಾಬು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಚೂಡ್, ಸೂರಪ್ಪ ಬಾಬು ಅವರ ಮಾತಿಗೆ ತಿರುಗೇಟು ನೀಡಿದ್ದಾರೆ. ಸೂರಪ್ಪ ಬಾಬು ಅವರನ್ನು ಶಿಖಂಡಿ ಎಂದು ಚಂದ್ರಚೂಡ್ ಕರೆದಿದ್ದರು. ಆ ಮಾತಿಗೆ ಪ್ರತಿಕ್ರಿಯೆ ನೀಡದ್ದ ಸೂರಪ್ಪ ಬಾಬು ನನಗೂ ಹೆಂಡತಿ, ಮಕ್ಕಳು ಇದ್ದಾರೆ ಎಂದಿದ್ದರು. ಅದಕ್ಕೆ ಪ್ರತಿಯಾಗಿ ಚಂದ್ರಚೂಡ್, ‘ಹೆಂಡತಿ, ಮಕ್ಕಳು ಇದ್ರೆ ಗಂಡಸ್ತನ ಬರುವುದಿಲ್ಲ, ಗಂಡಸಿನ ರೀತಿ ಬದುಕಬೇಕು’ ಎಂದಿದ್ದಾರೆ.
‘ಈ ವ್ಯಕ್ತಿಗೆ ಎಲ್ಲವನ್ನೂ ಕೆದಕಬೇಕು. ಆತ ಸ್ಯಾಡಿಸ್ಟ್. ಈತ ಜೊತೆಯಲ್ಲಿದ್ದವರಿಗೇ ಈ ರೀತಿ ಮಾಡೊದು. ಸೂರಪ್ಪ ಬಾಬು ಪ್ರೆಸ್ಮೀಟ್ಗೆ ಕುಮಾರ್ ಅವರ ಮಗ ಏಕೆ ಬರಬೇಕಿತ್ತು’ ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಶ್ನೆ ಮಾಡಿದ್ದಾರೆ. 'ಸುದೀಪ್ ಸರ್ ಗೆ ಸಮಸ್ಯೆ ಮಾಡೋದೆ ಇವರ ಗುರಿ. ಸಮಸ್ಯೆ ಇದ್ದಾಗ ಸುದೀಪ್ ಸರ್ ಹತ್ರ ಹೋಗಿ ಮಾತಡಬೇಕು. ಕೋಟಿಗೊಬ್ಬ 3 ಸಿನಿಮಾ ಮಾಡುವಾಗ ಸೂರಪ್ಪ ಬಾಬುಗೆ ಸುದೀಪ್ ಸರ್ ಎಷ್ಟು ಸಹಾಯ ಮಾಡಿದ್ದಾರೆ ಗೊತ್ತಾ?' ಎಂದು ಕಿಡಿ ಕಾರಿದ್ದಾರೆ.
'ಮೊದಲು ಸೂರಪ್ಪ ಬಾಬು ತಾಕತ್ ಇದ್ರೆ ಮನೆ ಅಡ್ರಸ್ ಕೋಡಲಿ. ವಂಚಕ ಸೂರಪ್ಪ ಬಾಬು ಕಾರ್ಮಿಕರಿಗೆ ಎಷ್ಟು ವಂಚನೆ ಮಾಡಿದ್ದಾರೆ ಗೊತ್ತಾ. ನನ್ನ ಬಗ್ಗೆ ಮಾತಾಡೋಕೆ ನೈತಿಕತೆ ಇಲ್ಲ. ನನಗೆ ಮಗಳು ಇದ್ದಾಳೆ ನಾನು ಸೂರಪ್ಪ ಬಾಬು ಮಗಳ ಬಗ್ಗೆ ಮಾತಡಲ್ಲ. ಕೋಟಿಗೊಬ್ಬ ಡೇಟ್ ಗಾಗಿ ಸೂರಪ್ಪ ಬಾ ಮಗಳನ್ನ ಯಾಕೆ ಕಳಿಸಿದ್ರು?' ಎಂದು ಹೇಳಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಸುದೀಪ್: ನಿರ್ಮಾಪಕ ಎಂ. ಎನ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
'ತಲೆ ಬೆಳ್ಳಗಾಗಿಲ್ಲ ಕಂಡೋರ ವಿರುದ್ಧ ಷಡ್ಯಂತ್ರ ಮಾಡ್ತಾರೆ. ಸುದೀಪ್ ಸರ್ ಕ್ಷಮಿಸಬಹುದು ಅದ್ರೆ ನಾನು ಕ್ಷಮಿಸಲ್ಲ. ಸುದೀಪ್ ಎಷ್ಟು ನೋಂದಿಕೊಂಡಿದ್ದಾರೆ ಅಂತ ಗೊತ್ತಾ. ಈಗ ಈ ಸಮಸ್ಯೆ ಬಗೆಹರಿತಿದೆ ಶಿವಣ್ಣ ರವಿಸರ್ ಬಂದು ಬಗೆ ಹರಿಸ್ತಿದ್ದಾರೆ ಇದನ್ನ ಜೀವಂತವಾಗಿ ಇಡಲು ಪ್ರಯತ್ನ ಮಾಡ್ತಿದ್ದಾರೆ. ಹೇಡಿ ಸೂರಪ್ಪ ಬಾಬು ಅವ್ರಿಂದಲೇ ಸಹಾಯ ಪಡೆದು ಅವ್ರಿಗೆ ವಂಚನೆ ಮಾಡ್ತೀರಾ ಅಂದ್ರೆ ನಿಮ್ದು ಲಜ್ಜೆಗೇಡಿತನ' ಎಂದು ಕಿಡಿಕಾರಿದ್ದಾರೆ.
ನಟ ಸುದೀಪ್, ನಿರ್ಮಾಪಕ ಕುಮಾರ್ ನಡುವೆ ರವಿಚಂದ್ರನ್ ರಾಜಿ ಸಂಧಾನ
'ಈ ವಿವಾದ ಬಗೆಹರಿಯಬಾರದು ಎಂದು ಕೆದಕುತ್ತಿದ್ದಾರೆ. ನಿನ್ನೆ ಪ್ರೇಸ್ ಮೀಟ್ ನಲ್ಲಿ ಎನ್.ಕುಮಾರ್ ಯಾಕೆ ಬಂದಿದ್ರು. ನನ್ನ ಆಫೀಸ್ ಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಇದೆ ನಿನಗೆ ಕೊಡ್ತೀನಿ ಬಾ.
ನನ್ನ ಚರಿತ್ರೆ ಏನು, ಎರಡು ವಿವಾಹ ಆಗಿದೆ ಎಲ್ರಿಗೂ ಗೊತ್ತು. ಸುದೀಪ್ ಮತ್ತು ಎನ್.ಕುಮಾರ್ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡೋಕೆ ಹೊರಟ್ಟಿದ್ದಾರೆ ಅದು ಸುಖಾಂತ್ಯವಾಗಲಿ' ಎಂದು ಹೇಳಿದ್ದಾರೆ.
