ನಟಿ ಜಯಮಾಲಾ ಪುತ್ರಿ ಸೌಂದರ್ಯ ಹಾಗೂ ರುಷಬ್ ಅವರ ಮದುವೆ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಈ ಅದ್ದೂರಿ ಮದುವೆಯಲ್ಲಿ ಸಾಕಷ್ಟು ಜನರು ಆಗಮಿಸಿದ್ದಾರೆ.
ಇಂದು ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ʼಕ್ರೇಜಿ ಕ್ವೀನ್ʼ ರಕ್ಷಿತಾ ಪ್ರೇಮ್ ಸಹೋದರ ರಾಣ ಮದುವೆ ನಡೆದಿದೆ. ಇನ್ನೊಂದು ಕಡೆ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಮದುವೆ ನಡೆದಿದೆ. ಹೌದು, ಚಿತ್ರರಂಗದವರೆಲ್ಲರೂ ಇಂದು ಈ ಎರಡು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟಿ ಜಯಮಾಲಾ ಪುತ್ರಿ ಸೌಂದರ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ಮದುವೆಯಲ್ಲಿ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.
ಅದ್ದೂರಿ ಮದುವೆ!
ಜಯಮಾಲಾ ಅವರು ಚಿತ್ರರಂಗ ಹಾಗೂ ರಾಜಕೀಯದಲ್ಲಿ ತುಂಬ ಆಕ್ಟಿವ್ ಆಗಿದ್ದಾರೆ. ಹೀಗಾಗಿ ಅವರ ಮಗಳ ಮದುವೆಯಲ್ಲಿ ಗಣ್ಯರ ಸಮಾಗಮ ಆಗಿದೆ. ಈ ಮದುವೆಗೆ ನಟಿ ಸುಮಿತ್ರಾ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡ್, ಸಿಪಿ ಯೋಗೇಶ್ವರ್, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಪ್ರಿಯಾ, ಸುಧಾರಾಣಿ, ಶ್ರೀನಾಥ್, ಅಂಬಿಕಾ, ಗಾಯತ್ರಿ ಅನಂತ್‌ನಾಗ್, ಹೊನ್ನವಳ್ಳಿ ಕೃಷ್ಣ, ಹೇಮಾ ಚೌಧರಿ, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ಜನರು ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ನವಜೋಡಿಗೆ ಶುಭ ಹಾರೈಸಿದ್ದಾರೆ.
Soundarya Jayamala Wedding: ಸೌಂದರ್ಯ ಜಯಮಾಲಾ ಹಳದಿ ಸಂಭ್ರಮದಲ್ಲಿ ಕುಣಿದ ಹಿರಿಯ ನಟಿಯರು! ಫೋಟೋಗಳಿವು!
ನಾಲ್ಕು ಸಿನಿಮಾಗಳಲ್ಲಿ ನಟನೆ!
ಐಶ್ವರ್ಯಾ ಅವರು ಎರಡು ವರ್ಷಗಳ ಕಾಲ ನಟಿಸಿದ್ದರು. ಆ ಟೈಮ್‌ನಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ನಟ ಯಶೋ ಸಾಗರ್ ನಟನೆಯ ʼಮಿಸ್ಟರ್ ಪ್ರೇಮಿಕುಡುʼ, ದುನಿಯಾ ವಿಜಯ್ ನಟನೆಯ ʼಸಿಂಹಾದ್ರಿʼ, ನಟ ಉಪೇಂದ್ರ ಅಭಿನಯದ ʼಗಾಡ್ ಫಾದರ್ʼ, ಶ್ರೀನಗರ ಕಿಟ್ಟಿ ಅಭಿನಯದ ʼಪಾರು ವೈಫ್ ಆಫ್ ದೇವದಾಸ್ʼ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮದುವೆಯಾಗಿರುವ ಹುಡುಗ ಯಾರು?
ಸೌಂದರ್ಯ ಅವರು ನಾಲ್ಕು ಸಿನಿಮಾಗಳಲ್ಲಿ ನಟಿಸಿದ ಬಳಿಕ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸೌಂದರ್ಯ ಅವರು ಕೆಲ ವರ್ಷಗಳ ಕಾಲ ಓದಿದ್ದರು. ರುಷಬ್ ಯಾರು? ರುಷಬ್ ಎಲ್ಲಿಯವರು? ಅವರು ಏನು ಮಾಡುತ್ತಿದ್ದಾರೆ? ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಮ್ಯಾರೇಜ್? ಎಂಬ ಬಗ್ಗೆ ಪ್ರಶ್ನೆಗಳಿವೆ. ಈ ಬಗ್ಗೆ ಜಯಮಾಲಾ ಕುಟುಂಬ ಮಾತನಾಡಿಲ್ಲ. ಜಯಮಾಲಾ ಅವರು ಮಗಳ ಮದುವೆಗೆ ಸಾಕಷ್ಟು ಗಣ್ಯರನ್ನು ಆಹ್ವಾನಿಸಿದ್ದರು. ಇನ್ನು ಯಾರು ಯಾರು ಬರುತ್ತಾರೆ ಎಂದು ಕಾದು ನೋಡಬೇಕಿದೆ.
ಒಂದೇ ಫ್ರೇಮ್‌ನಲ್ಲಿ ಟೈಗರ್ ಪ್ರಭಾಕರ್ ಮಗ - ಜಯಮಾಲಾ ಮಗಳು: ಜೊತೆಯಾಗಿ ಫೋಟೋ ತೆಗೆಸಿಕೊಂಡ ಅಣ್ಣ-ತಂಗಿ..!
ಹಳದಿ ಶಾಸ್ತ್ರ!
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೌಂದರ್ಯ ಅವರ ಹಳದಿ ಶಾಸ್ತ್ರ ನೆರವೇರಿತು. ನಟಿ ಮಾಳವಿಕಾ ಅವಿನಾಶ್, ಸುಧಾರಾಣಿ, ಶ್ರುತಿ, ಹರ್ಷಿಕಾ ಪೂಣಚ್ಛ, ಭುವನ್ ಪೊನ್ನಣ್ಣ, ಹೇಮಾ ಚೌಧರಿ ಮುಂತಾದವರು ಈ ಹಳದಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲೆಲ್ಲೂ ಹಳದಿ ಬಣ್ಣದಲ್ಲಿ ಸಿಂಗಾರ ಮಾಡಲಾಗಿತ್ತು. ಇನ್ನು ಜಯಮಾಲಾ ಅವರು ಭರ್ಜರಿ ಡ್ಯಾನ್ಸ್ ಮಾಡಿದ್ದರು. ಈ ಶಾಸ್ತ್ರಕ್ಕೆ ಮದುವೆ ಹುಡುಗನಿಗೆ ಗ್ರ್ಯಾಂಡ್ ಸ್ವಾಗತ ಮಾಡಲಾಗಿತ್ತು. ಇನ್ನು ಎಲ್ಲ ನಟಿಯರು ಕೂಡ ಮೆಹೆಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದರು. ನೀವೆಲ್ಲವೂ ನವಜೋಡಿಗೆ ಹಾರೈಸಿ…!
