ನಟಿ ಜಯಮಾಲಾ ಅವರ ಏಕೈಕ ಪುತ್ರಿ ಸೌಂದರ್ಯ ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದಲ್ಲಿ ಹಿರಿಯ ನಟಿಯರು ಭಾಗಿಯಾಗಿದ್ದಾರೆ.
ನಟಿ ಜಯಮಾಲಾ ಅವರ ಏಕೈಕ ಪುತ್ರಿ ಸೌಂದರ್ಯ ಈಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎರಡು ವರ್ಷಗಳ ಕಾಲ ನಟಿಸಿ, ಆ ನಂತರ ಸಿನಿಮಾ ರಂಗದಿಂದ ದೂರ ಆಗಿದ್ದ ಅವರೀಗ ವೈವಾಹಿಕ ಜೀವನಕ್ಕೆ ಅಡಿ ಇಡುತ್ತಿದ್ದಾರೆ. ಈಗಾಗಲೇ ಭರ್ಜರಿಯಾಗಿ ಹಳದಿ ಶಾಸ್ತ್ರ ನಡೆದಿದೆ.
ಮದುವೆ ಯಾವಾಗ?
ನಟಿ ಜಯಮಾಲಾ ಮಗಳ ಮದುವೆಯು ಫೆಬ್ರವರಿ 7, 8ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದೆ. ರುಷಬ್ ಕೆ ಎನ್ನುವವರ ಜೊತೆ ಸೌಂದರ್ಯ ಮದುವೆ ನಡೆಯಲಿದೆ.
ತಾರಾ ಮನೆಯ ಗೆಟ್ ಟುಗೆದರ್ ಪಾರ್ಟಿಯಲ್ಲಿ ಸುಧಾರಾಣಿ ಮಗಳು ಮಿಂಚಿದ್ದು ಹೇಗೆ?
ಅದ್ದೂರಿಯಾದ ಮದುವೆ ಶಾಸ್ತ್ರ!
ಈಗಾಗಲೇ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಹಳದಿ ಶಾಸ್ತ್ರ ನಡೆದಿದೆ. ಈ ಅದ್ದೂರಿಯಾದ ಹಳದಿ ಸಂಭ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಹಳದಿ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡಲಾಗಿತ್ತು. ಎಲ್ಲೆಲ್ಲೂ ಹಳದಿ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಇನ್ನು ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ. ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಡ್ಯಾನ್ಸ್ ಮಾಡಿರುವ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ.
ಸಿನಿಮಾ ಲೋಕದಿಂದ ದೂರ ಆಗಿದ್ದು ಯಾಕೆ?
ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಈ ಮೂಲಕ ಅವರು ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ನಟ ಯಶೋ ಸಾಗರ್ ಜೊತೆಗೆ ʼಮಿಸ್ಟರ್ ಪ್ರೇಮಿಕುಡುʼ, ದುನಿಯಾ ವಿಜಯ್ ಜೊತೆಗೆ ʼಸಿಂಹಾದ್ರಿʼ, ನಟ ಉಪೇಂದ್ರ ಅಭಿನಯದ ʼಗಾಡ್ ಫಾದರ್ʼ, ಶ್ರೀನಗರ ಕಿಟ್ಟಿ ಜೊತೆಗೆ ʼಪಾರು ವೈಫ್ ಆಫ್ ದೇವದಾಸ್ʼ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಯಾರ ರಾಜಕಾರಣ ಹೇಗೆ ಶುರುವಾಯ್ತು, ಪಾತಕಿಗಳು ಯಾರು ಅನ್ನೋದು ಜನಕ್ಕೆ ಗೊತ್ತು : ಸಿಟಿ ರವಿ ತಿರುಗೇಟು
ನಟನೆಯಿಂದ ದೂರ ಆಗಿದ್ದ ಸೌಂದರ್ಯ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅವರು ಕೆಲ ವರ್ಷಗಳ ಕಾಲ ಓದಿದ್ದಾರೆ. ಅಂದಹಾಗೆ ರುಷಬ್ ಯಾರು? ಎಲ್ಲಿಯವರು? ಏನು ಮಾಡುತ್ತಿದ್ದಾರೆ? ಇದು ಅರೇಂಜ್ ಮ್ಯಾರೇಜ್? ಲವ್ ಮ್ಯಾರೇಜ್? ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಈ ಬಗ್ಗೆ ಜಯಮಾಲಾ ಅವರು ಉತ್ತರ ಕೊಡಬೇಕಿದೆ.
ಅಂದಹಾಗೆ ಜಯಮಾಲಾ ಅವರು ಮಗಳ ಮದುವೆಗೆ ಚಿತ್ರರಂಗದ ಗಣ್ಯರು, ರಾಜಕೀಯದವರನ್ನು ಕೂಡ ಆಹ್ವಾನಿಸಿದ್ದಾರೆ. ಹೀಗಾಗಿ ಸೌಂದರ್ಯ ವಿವಾಹ ಅದ್ದೂರಿಯಾಗಿ ನಡೆಯಲಿದ್ದು, ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಅನ್ನಿ…!
ಯಶೋ ಸಾಗರ್ ಅವರೊಂದಿಗೆ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್‌ಗೂ ಪ್ರವೇಶಿಸಿದರು. ನಂತರ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಿಂಹಾದ್ರಿ ಸಿನಿಮಾದಲ್ಲೂ ಅಭಿನಯಿಸಿದರು. ಆದರೆ ಸದ್ಯ ಬಣ್ಣದ ಬದುಕಿನಿಂದ ಸೌಂದರ್ಯ ದೂರ ಉಳಿದಿದ್ದಾರೆ.ಯಶೋ ಸಾಗರ್ ಅವರೊಂದಿಗೆ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್‌ಗೂ ಪ್ರವೇಶಿಸಿದರು. ನಂತರ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಿಂಹಾದ್ರಿ ಸಿನಿಮಾದಲ್ಲೂ ಅಭಿನಯಿಸಿದರು. ಆದರೆ ಸದ್ಯ ಬಣ್ಣದ ಬದುಕಿನಿಂದ ಸೌಂದರ್ಯ ದೂರ ಉಳಿದಿದ್ದಾರೆ.
ಯಶೋ ಸಾಗರ್ ಅವರೊಂದಿಗೆ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್‌ಗೂ ಪ್ರವೇಶಿಸಿದರು. ನಂತರ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಿಂಹಾದ್ರಿ ಸಿನಿಮಾದಲ್ಲೂ ಅಭಿನಯಿಸಿದರು. ಆದರೆ ಸದ್ಯ ಬಣ್ಣದ ಬದುಕಿನಿಂದ ಸೌಂದರ್ಯ ದೂರ ಉಳಿದಿದ್ದಾರೆ.
