Asianet Suvarna News Asianet Suvarna News

ಕೊನೆಗೂ ಭಾವಿ ಪತಿಯ ಮುಖ ರಿವೀಲ್​ ಮಾಡಿದ ಬೃಂದಾವನ ನಟಿ ಕಾರ್ತಿಕಾ: ಆದರೂ ಬಿಟ್ಟುಕೊಟ್ಟಿಲ್ಲ ಡಿಟೇಲ್ಸ್​!

ಬೃಂದಾವನ ನಟಿ ಕಾರ್ತಿಕಾ ಅವರು ಕೊನೆಗೂ ತಮ್ಮ ಭಾವಿ ಪತಿಯ ಮುಖವನ್ನು ರಿವೀಲ್​ ಮಾಡಿದ್ದು, ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. 
 

Brindavana actress Karthika Nair who finally revealed the face of her fiance suc
Author
First Published Nov 15, 2023, 4:11 PM IST

 ದರ್ಶನ್‌ ಅಭಿನಯದ 'ಬೃಂದಾವನ' ಸಿನಿಮಾದ ಮೂಲಕ ಪರಿಚಯವಾದವರು ನಟಿ ಕಾರ್ತಿಕಾ ನಾಯರ್‌. ಮೂಲತಃ ಮಲಯಾಳಿ  ಕುಟುಂಬದ ಈ ನಟಿ ಮೊದಲು ಬಣ್ಣ ಹಚ್ಚಿದ್ದು ತೆಲುಗು ಸಿನಿಮಾದಲ್ಲಿ. ಆನಂತರ ತಮಿಳಿನ 'ಕೋ' ಚಿತ್ರದಲ್ಲಿ ನಟಿಸಿದರು.  17ನೇ ವಯಸ್ಸಿಗೆ ನಾಯಕಿಯಾದ ಕಾರ್ತಿಕಾ, ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಮಿಂಚಿದರು.  ಹಿಂದಿಯ 'ಆರಂಭ್‌' ಎಂಬ ಸೀರಿಯಲ್‌ನಲ್ಲೂ ಕಾರ್ತಿಕಾ ಬಣ್ಣ ಹಚ್ಚಿದರು. ಅದು ಕೂಡ ಅಷ್ಟೇನೂ ಜನಪ್ರಿಯತೆ ತಂದುಕೊಡಲಿಲ್ಲ. ನಂತರ ಚಿತ್ರರಂಗದಿಂದ ದೂರವಾಗುವ ನಿರ್ಧಾರ ತೆಗೆದುಕೊಂಡು ದೂರವೇ ಉಳಿದಿದ್ದಾರೆ.   ಹೋಟೆಲ್ ಉದ್ಯಮದಲ್ಲಿಯೂ ಸಕ್ರಿಯರಾಗಿದ್ದ ಕಾರ್ತಿಕಾ, ಅದರಲ್ಲೇ ಮುಂದುವರಿದಿದ್ದಾರೆ.  ಕೇರಳದ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಅವರು ನಿರ್ದೇಶಕಿಯಾಗಿದ್ದಾರೆ. ಸಿನಿಮಾರಂಗಕ್ಕೆ ಸಂಪೂರ್ಣವಾಗಿ ವಿದಾಯ ಹೇಳಿ, ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
 
ಇಂತಿಪ್ಪ ನಟಿ ಕಳೆದ ತಿಂಗಳು  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಭಾವಿ ಪತಿಯ ಫೋಟೋಗಳನ್ನು ಶೇರ್​ ಮಾಡಿದ್ದರೂ, ಅವರ ಮುಖ ರಿವೀಲ್​ ಮಾಡಿರಲಿಲ್ಲ. ಇಂದು ಇದೇ ಮೊದಲ ಬಾರಿಗೆ  ಮದುವೆಯಾಗಲಿರುವ ವ್ಯಕ್ತಿಯ ಮುಖವನ್ನು ಇನ್​ಸ್ಟಾಗ್ರಾಮ್​  ಖಾತೆಯ ಮೂಲಕ  ಪರಿಚಯಿಸಿದ್ದಾರೆ.  ರೋಹಿತ್ ಮೆನನ್ ಎಂಬ ವ್ಯಕ್ತಿಯನ್ನು ಮದುವೆಯಾಗುವುದಾಗಿ ಕಾರ್ತಿಕಾ ಹೇಳಿದ್ದಾರೆ.  ಅವರು ತಮ್ಮ ನಿಶ್ಚಿತಾರ್ಥದ ಕೆಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್‌ ಜೊತೆ ಪ್ರೀತೀನಾ ಹೆಂಗಪ್ಪ ತಡ್ಕೊಳ್ಳೋದು ಅಂತಾ ಭರ್ಜರಿಯಾಗಿ ಸ್ಟೆಪ್‌ ಹಾಕಿ ಮನೆ ಮಾತಾಗಿರುವ ನಟಿ ಇದೀಗ ಮೊದಲ ಬಾರಿಗೆ ಪತಿಯ ಫೋಟೋ ರಿವೀಲ್​ ಮಾಡಿದ್ದಾರೆ.

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಬೃಂದಾವನ' ಚಿತ್ರದ ನಟಿ ಕಾರ್ತಿಕಾ; ಫೋಟೋ ವೈರಲ್!
 
ಈ ಹಿಂದೆ ನಿಶ್ಚಿತಾರ್ಥದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರೂ, ಪತಿಯ ಮುಖವನ್ನು ಕಾಣಿಸಿರಲಿಲ್ಲ. ಈಗ ಮೊದಲ ಬಾರಿಗೆ ಮುಖ ರಿವಿಳ್​ ಮಾಡಿದ್ರೂ, ಭಾವಿ ಪತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ.  ಈ ಕುರಿತಾದ ಸುದ್ದಿಯನ್ನು ನಟಿ ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಹಂಚಿಕೊಂಡಿದ್ದರು. ಪ್ರಿಯತಮನನ್ನು ತಬ್ಬಿಕೊಂಡು ಆತ ಹಾಕಿರುವ ಉಂಗುರವನ್ನು ಫೋಕಸ್‌ ಮಾಡಿ ತೆಗೆದಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು. 

ನಟಿ ರಾಧಾ ಅವರ ಮಗಳಾಗಿರುವ ಕಾರ್ತಿಕಾ ನಾಯರ್ (Karthika Nair) ಅವರ ಬಗ್ಗೆ ಈ ಹಿಂದೆ ತಾಯಿ ಪೋಸ್ಟ್​ ಹಾಕಿದ್ದರು.  ಫೋಟೋ ಶೇರ್ ಮಾಡಿಕೊಂಡ ರಾಧಾ 'ನಮ್ಮ ಪುಟ್ಟ ಮಗಳನ್ನು ಮತ್ತೊಂದು ಕುಟುಂಬಕ್ಕೆ ಕೊಡುತ್ತಿರುವ ಹೆಮ್ಮೆ ನಮಗಿದೆ' ಎಂದು ತಾಯಿ ರಾಧಾ ಬರೆದುಕೊಂಡಿದ್ದರು.  'ಆ ದೇವರು ನಿನಗೆ ಖುಷಿ ಮತ್ತು ನೆಮ್ಮದಿಯ ಜೀವನ ಕಟ್ಟಿಕೊಡಲಿ. ಇಷ್ಟು ಒಳ್ಳೆಯ ಕುಟುಂಬ ಆಯ್ಕೆ ಮಾಡಿರುವುದಕ್ಕೆ ನಾನು ತುಂಬಾ ಲಕ್ಕಿ' ಎಂದಿದ್ದ ಅವರು, 'ಮದುವೆ ಅಂದ್ರೆ ಎರಡು ಕುಟುಂಬಗಳು ಒಟ್ಟಾಗುವುದು. ನನ್ನ ಮನಸ್ಸಿನಲ್ಲಿ ಅದೆಷ್ಟೋ ಭಾವನೆಗಳು ಓಡಾಡುತ್ತಿದೆ.  ನಿನ್ನ ಖುಷಿ ಮತ್ತು ಪ್ರೀತಿ ನನಗೆ ಮುಖ್ಯ' ಎಂದು ಬರೆದುಕೊಂಡಿದ್ದರು. 

ಮೇಡಂ.. ನೀವು ನಿಜವಾಗ್ಲೂ ಸೀರಿಯಲ್​ನ ಗಂಡ ವೈಷ್ಣವ್​ರನ್ನೇ ಮದ್ವೆಯಾಗ್ತೀರಾ? ಲೈವ್​ಗೆ ಬಂದ ನಟಿಯನ್ನು ಪ್ರಶ್ನಿಸಿದ ಬಾಲಕಿ\

Follow Us:
Download App:
  • android
  • ios