ಮೇಡಂ.. ನೀವು ನಿಜವಾಗ್ಲೂ ಸೀರಿಯಲ್ನ ಗಂಡ ವೈಷ್ಣವ್ರನ್ನೇ ಮದ್ವೆಯಾಗ್ತೀರಾ? ಲೈವ್ಗೆ ಬಂದ ನಟಿಯನ್ನು ಪ್ರಶ್ನಿಸಿದ ಬಾಲಕಿ
ಲಕ್ಷ್ಮಿ ಬಾರಮ್ಮ ಸೀರಿಯಲ್ನ ಲಕ್ಷ್ಮಿ ಲೈವ್ಗೆ ಬಂದಾಗ ಬಾಲಕಿ ಕೇಳಿದ ಪ್ರಶ್ನೆಗೆ ಅರೆಕ್ಷಣ ದಂಗಾದರು. ಆಕೆ ಕೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯ ಕಡೆಯಿಂದ ಪ್ರೇಕ್ಷಕರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ನೆಚ್ಚಿನ ನಟ-ನಟಿಯರ ಜೊತೆ ವೀಕ್ಷಕರಿಗೆ ನೇರಪ್ರಸಾರದ ಮೂಲಕ ಮಾತನಾಡುವ ಅವಕಾಶ ಕಲ್ಪಿಸಿದೆ. ಇದಾಗಲೇ ಬಹುತೇಕ ನಟ-ನಟಿಯರು ನೇರ ಪ್ರಸಾರದಲ್ಲಿ ಬಂದು ಮಾತನಾಡಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ನ ಲಕ್ಷ್ಮಿ ಅವರೂ ನೇರಪ್ರಸಾರದಲ್ಲಿ ತಮ್ಮ ಫ್ಯಾನ್ಸ್ ಜೊತೆ ಮಾತನಾಡಿದ್ದಾರೆ. ಅಂದಹಾಗೆ ಇವರ ರಿಯಲ್ ಹೆಸರು ಭೂಮಿಕಾ ರಮೇಶ್. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯ ಬಳಕೆದಾರರ ಸಂಖ್ಯೆ ಮೂರು ಮಿಲಿಯನ್ ಅಂದರೆ 30 ಲಕ್ಷ ಮಾಡಿರುವ ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದ ಭೂಮಿಕಾ ಅವರು, ಇದು ತಮಗೆ ದೀಪಾವಳಿ ಬೋನಸ್ ಎಂದು ಹೇಳಿದರು. ಇದೇ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ವಿಶೇಷ ಹಾಡಿನ ಕುರಿತು ಮಾತನಾಡಿದ ನಟಿ, ಈ ಹಾಡು ನಾಲ್ಕು ಮಿಲಿಯನ್ ವೀಕ್ಷಣೆ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಬಳಿಕ ಕೆಲವು ಪ್ರೇಕ್ಷಕರ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಚಿತ್ರದುರ್ಗದ ನಯನಾ ಎನ್ನುವವರು ಕನೆಕ್ಟ್ ಆಗಿ ಕೆಲವೊಂದು ವಿಷಯ ಮಾತನಾಡಿದರು. ಹೀಗೆ ಮಾತನಾಡುತ್ತಿದ್ದಂತೆಯೇ ಆಕೆ, ನಿಮ್ಮ ಸೀರಿಯಲ್ ನನಗೆ ತುಂಬಾ ಇಷ್ಟ. ನಿಮಗೆ ಕಾಟ ಕೊಡುವ ಅತ್ತೆ ಅಂದ್ರೆ ಕೋಪ ಎಂದರು. ನಿಮ್ಮ ಅತ್ತೆ ಎಷ್ಟೇ ಕಾಟ ಕೊಟ್ಟರೂ ನೀವಿಬ್ಬರೂ ಚೆನ್ನಾಗಿ ಬಾಳುವುದನ್ನು ನೋಡಲು ಖುಷಿಯಾಗ್ತಿದೆ ಎಂದಳು. ನಂತರ ನೀವು ನಿಜವಾಗಿಯೂ ವೈಷ್ಣವ್ ಅವ್ರನ್ನ ಮದ್ವೆಯಾಗ್ತೀರಾ ಎಂದು ಪ್ರಶ್ನಿಸಿದಳು. ಈ ಸೀರಿಯಲ್ನಲ್ಲಿ ಭಾಗ್ಯಳ ಪತಿಯ ಹೆಸರು ವೈಷ್ಣವ್. ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಸೀರಿಯಲ್ನಲ್ಲಿ ವೈಷ್ಣವ್-ಲಕ್ಷ್ಮೀ ಜೋಡಿ ಸೀರಿಯಲ್ ಪ್ರಿಯರ ಒಂದು ಅಚ್ಚುಮೆಚ್ಚಿನ ಜೋಡಿಯಾಗಿದೆ. ಈ ಜೋಡಿಯನ್ನು ಮೆಚ್ಚಿಕೊಂಡಿರೋ ಬಾಲಕಿ, ನಿಜವಾಗಿಯೂ ಮದ್ವೆಯಾಗ್ತೀರಾ ಎಂದು ಕೇಳಿದರು.
ಒಂದು ಕ್ಷಣ, ಏನು ಹೇಳಬೇಕೆಂದು ತೋಚದ ಭೂಮಿಕಾ ಅವರು, ನಾನು ಲಕ್ಷ್ಮಿ ಅಲ್ವಾ? ಮದ್ವೆಯಾಗಿದೆ ವೈಷ್ಣವ್ ಜೊತೆ ಎಂದರು. ಬಾಲಕಿ ಒಹೊ ಎಂದಳು. ಹೀಗೆ ಕೆಲವು ಫ್ಯಾನ್ಸ್ ಜೊತೆ ಮಾತನಾಡಿದ ನಟಿ, ದೀಪಾವಳಿ ಹಬ್ಬದ ಕುರಿತು ಮಾತನಾಡಿದರು.
ಇನ್ನು, ಲಕ್ಷ್ಮಿ ಪಾತ್ರಧಾರಿ ನಟಿ ಭೂಮಿಕಾ ರಮೇಶ್ ಅವರ ಬಗ್ಗೆ ಹೇಳುವುದಾದರೆ, ಸೀರಿಯಲ್‌ಗೆ ಬಂದಾಗ ಕೇವಲ 19 ವರ್ಷ ವಯಸ್ಸಾಗಿತ್ತು. ದಾರಾವಾಹಿಯಲ್ಲಿ ಮೊದಲ ಬಾರಿಗೆ ತನ್ನ ನಟನಾ ಕೌಶಲ್ಯವನ್ನು ತೋರಿಸುತ್ತಾ ಜನಕ್ಕೆ ಹತ್ತಿರವಾಗಿದ್ದಾರೆ ಅವರು. ಭೂಮಿಕಾಗೆ ನಟನಾ ಜಗತ್ತು ಹೊಸತು. ಆದರೆ ಭೂಮಿಕಾ ಕ್ಯಾಮೆರಾವನ್ನು ಎದುರಿಸುವುದು ಹೊಸದೇನಲ್ಲ. ಅವರು ಈ ಹಿಂದೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅವರು ಒಂದು ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿರೋದು ವಿಶೇಷವಾಗಿದೆ. 2016ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ (dancing star juniors) ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳಿಗಾಗಿ ಕಾರ್ಯಕ್ರಮದಿಂದ ಹೊರನಡೆದರು. ಅವರು ಈ ಹಿಂದೆ 2012ರಲ್ಲಿ ಜೀ ತೆಲುಗು ನೃತ್ಯ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು.
ಈಕೆ ಅತ್ಯುತ್ತಮ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು ಮತ್ತು ಅನೇಕ ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. 2021 ರಲ್ಲಿ, ಅವರು ತಮ್ಮ ಮೊದಲ ಆಲ್ಬಂ ಹಾಡು ಕೂಡ ಮಾಡಿದರು. ಭೂಮಿಕಾ ಇನ್ನೂ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ತನ್ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಮಾಡ್ತಿದ್ದಾರೆ.
ದೀಪಾವಳಿ ವಿಷ್ ಅಂದ್ರೆ ಹೀಗಿರ್ಬೇಕು: ಕಲರ್ಸ್ ಕನ್ನಡ ಕಲಾವಿದರ ನೋಡಿ WOW ಅಂದ ಫ್ಯಾನ್ಸ್