ಸಿನಿಮಾ ಮತ್ತು ರಿಲೇಷನ್‌ಶಿಪ್ ಬಗ್ಗೆ ಮೊದಲ ಬಾರಿ ಮಾತನಾಡಿದ ನಟ ಪುಲ್ಕಿತ್ ಸಾಮ್ರಾಟ್. ಮದುವೆ ಪ್ಲ್ಯಾನ್ ಯಾವಾಗ?
ಕನ್ನಡ, ಹಿಂದಿ ಮತ್ತು ತೆಲುಗು ಭಾಷೆ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್ ಕೃತಿ ಕರ್ಬಂದ (Kriti Kharabanda) ಮತ್ತು ನಟ ಪುಲ್ಕಿತ್ ಸಾಮ್ರಾಟ್ (Pulkit Samart) ಪ್ರೀತಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸೋಡ್‌ಔಟ್ ವಿಚಾರ ತಿಳಿಯುತ್ತಿದ್ದಂತೆ ಹುಡುಗರ ಹಾರ್ಟ್ ಬ್ರೇಕ್ ಆಗಿತ್ತು. 2010ರಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ಜೊತೆ ಚಿರು ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ ಗೂಗ್ಲಿ ಚಿತ್ರದ ಮೂಲಕ ಕರ್ನಾಟಕ ಕ್ರಶ್ ಆದ್ದರು. ಸದ್ಯ ಮಲಯಾಳಂನ ಅಲೋನ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಕೃತಿ ಮತ್ತು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಪ್ರೀತಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಲವ್ ಮ್ಯಾಟರ್‌ನ ಅಧಿಕೃತ ಮಾಡಿದ್ದಾರೆ. ಪ್ಯಾಪರಾಜಿಗಳ ಮುಂದೆ ಕೈ-ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಕೂಡ ವೈರಲ್ ಆಗಿತ್ತು. ಮದುವೆ ಯಾವಾಗ ಎಂದು ನೆಟ್ಟಿಗರು ಪ್ರಶ್ನೆ ಮಾಡಿದಾಗ 'ಈ ವಿಚಾರದ ಬಗ್ಗೆ ನಾನು ನನ್ನ ಪೋಷಕರಿಗೆ ಮಾತ್ರ ಉತ್ತರ ಕೊಡಬೇಕು. ನಾನು ತುಂಬಾ ಪ್ರೈವೇಟ್ ಪರ್ಸನ್. ಆದರೆ ಸತ್ಯವನ್ನು ಒಪ್ಪಿಕೊಳ್ಳುವ ವ್ಯಕ್ತಿ ನಾನು ನಾಚಿಕೆ ಮಾಡಿಕೊಳ್ಳುವುದಿಲ್ಲ. ಎಷ್ಟು ಮಾಹಿತಿ ಹಂಚಿಕೊಳ್ಳಬಹುದು ಅದನ್ನು ರಿವೀಲ್ ಮಾಡಿದ್ದೀನಿ. ಕೆಲವೊಂದು ವಿಚಾರಗಳು ನಮ್ಮ ಕುಟುಂಬಕ್ಕೆ ಸೀಮಿತ' ಎಂದು ಕೃತಿ ಹೇಳಿದ್ದಾರೆ.
'ಕೃತಿ ಮತ್ತು ನಾನು ಬೆಸ್‌ಫ್ರೆಂಡ್ಸ್. ರಿಲೇಷನ್‌ಶಿಪ್‌ನಲ್ಲಿ ಅದು ಮೊದಲು ಮುಖ್ಯ. ಬೆಸ್ಟ್ ಫ್ರೆಂಡ್ ಆಗಿರಲಿ ಅಥವಾ ಲೈಫ್ ಆರ್ಟನರ್ ಆಗಿರಲಿ ನಮ್ಮ ಕೆಲಸಕ್ಕೆ ನಾವು ಸಪೋರ್ಟ್ ಮಾಡ್ತೀವಿ ನಮ್ಮ ಮಹತ್ವಾಕಾಂಕ್ಷೆ ಬೇರೆ ಬೇರೆ. ನಮ್ಮ ವೃತ್ತಿ ಜೀವನ ನಾವು ಆಯ್ಕೆ ಮಾಡಿಕೊಂಡು ಆಗಿದೆ ಈಗ ಏನಿದ್ದರೂ ಅದಕ್ಕೆ ಸತತ ಸಪೋರ್ಟ್ ಸಿಗಬೇಕಿದೆ. ಆಕೆಯನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿರುವೆ, ನನ್ನ grounded and on track ಇಡುತ್ತಾಳೆ' ಎಂದು ಪುಲ್ಕಿತ್ ಸಾಮ್ರಾಟ್ ರಿಲೇಷನ್‌ಶಿಪ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
'ಗೂಗ್ಲಿ' ನಟಿ ಕೃತಿ ಕರಬಂಧ ದೇವಸ್ಥಾನದ ಕಸ ಗುಡಿಸ್ತಾ ಇದಾರೆ!
'ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನು ಎಂದೂ ಮೂರನೇ ವ್ಯಕ್ತಿಯನ್ನು ನಮ್ಮ ಸಂಬಂಧದಲ್ಲಿ ಎಂಟರ್ ಆಗುವುದಕ್ಕೆ ಬಿಡೋಲ್ಲ. ಜನರಿಗೆ ಕ್ಯೂರಿಯಾಸಿಟಿ ಇದೆ ಒಪ್ಪಿಕೊಳ್ಳುತ್ತೀನಿ ಆದರೆ ನಮ್ಮತವನವನ್ನು ರಿವೀಲ್ ಮಾಡುವ ಅಗತ್ಯವಿಲ್ಲ. ನನಗೆ ಕಂಫರ್ಟ್ ಇದ್ದರೆ ಮಾತ್ರ ರಿವೀಲ್ ಮಾಡುತ್ತೀನಿ. ನಾನು ರಿಯಲ್ ಲೈಫ್‌ನಲ್ಲಿ spontaneous ವ್ಯಕ್ತಿ. ಬೇರೆ ಹುಡುಗಿಯರ ರೀತಿ ಪ್ಲ್ಯಾನ್ ಮಾಡಿ ಜೀವನ ನೋಡುವುದಿಲ್ಲ. ನಿಜ ಹೇಳಬೇಕು ಅಂದ್ರೆ ಮದ್ವೆ ಬಗ್ಗೆ ನಾನು ಏನೂ ಯೋಚನೆ ಮಾಡಿಲ್ಲ. ನಮ್ಮ ಸಂಬಂಧದ ಈ ಕ್ಷಣವನ್ನು ಎಂಜಾಯ್ ಮಾಡುತ್ತಿರುವೆ. ಅದೆಲ್ಲಾ ನನ್ನ ಮೂಡ್ ಮೇಲೆ ಹೋಗುತ್ತದೆ. ಏನ ಆಗಬೇಕು ಅದು ಆಗೇ ಆಗುತ್ತದೆ ಆದರೆ ಸದ್ಯಕ್ಕೆ ಪ್ಲ್ಯಾನ್ ಮಾಡಿಲ್ಲ ಹೀಗಾಗಿ ನಾನು ಕೂಡ ಸರ್ಪ್ರೈಸ್‌ಗೆ ಕಾಯುತ್ತಿರುವೆ' ಎಂದು ಕೃತಿ ಹೇಳಿದ್ದಾರೆ.
ಸಿನಿಮಾದಲ್ಲಿ ಬ್ಯುಸಿ:
ಕಾಮಿಡಿ ಫುಕ್ರೆ 3 ಸಿನಿಮಾ ಮತ್ತು ಪ್ರಣಯ ಚಿತ್ರ ಸುಸ್ವಾಗತಂ ಖುಷಿಮದೀದ್ ಚಿತ್ರೀಕರಣದಲ್ಲಿ ಪುಲ್ಕಿತ್ ಸಾಮ್ರಾಟ್ ಬ್ಯುಸಿಯಾಗಿದ್ದಾರೆ. 'ನಾನು ತುಂಬಾ ಸೋಂಬೇರಿ ಸುಮ್ಮನೆ ಕೂತು ತಿಂದು ದಪ್ಪ ಆಗಿದ್ದೀನಿ. ಎಲ್ಲಾ ರೀತಿ ಜಂಕ್ ಫುಡ್ ಸೇವಿಸುತ್ತಿದ್ದೆ. ಕೆಲಸ ಇರುವುದರಿಂದ ನಾನು ಬ್ಯೂಸಿಯಾಗಿದ್ದೀನಿ. ಈಗ ಫಿಟ್ ಆಗುತ್ತಿರುವೆ ಈಗ ಸರಿಯಾದ ಟ್ರ್ಯಾಕ್‌ನಲ್ಲಿ ಜೀವನ ನಡೆಯುತ್ತಿದೆ' ಎಂದು ಪುಲ್ಕಿತ್ ಹೇಳಿದ್ದಾರೆ.
