ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ಬಯೋಪಿಕ್‌ ಮಾಡುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗುತ್ತಿದೆ... ನಾಯಕಿ ಆಯ್ಕೆ ಮುಗಿದಿದೆ ಎಂದು ಒಂದೊಂದೂ ವಿಚಾರಗಳ ಬಗ್ಗೆ ಅಪ್‌ಡೇಟ್ ಸಿಗುತ್ತಲೇ ಇತ್ತು. ಆದರೆ ಆಮೇಲೆ ಯಾವುದೇ ನಿಖರ ಮಾಹಿತಿ ಸಿಗಲಿಲ್ಲ. ಆದರೀಗ ಪರಿಣೀತಿ ಲುಕ್‌ ರಿವೀಲ್‌ ಮಾಡುವ ಮೂಲಕ ಸಿನಿಮಾ ಬಗ್ಗೆ ಸುಳಿವು ಸಿಕ್ಕಿದೆ.

ತೆರೆ ಮೇಲೆ ಪ್ರಿಯಾಂಕ ಚೋಪ್ರಾ ಸಹೋದರಿ ಪರಿಣೀತಿ ಬ್ಯಾಡ್ಮಿಂಟನ್‌ ತಾರೆಯಾಗಿ ಮಿಂಚಲಿದ್ದಾರೆ. ಪರಿಣೀತಿ ಥೇಟ್ ಸೈನಾ ರೀತಿ ಕಾಣಲು ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಫಿಟ್ನೆಸ್‌ಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ, ವೀಕೆಂಡ್‌ನಲ್ಲಿ ಬ್ಯಾಡ್ಮಿಂಟನ್ ಆಟವಾಡಿದ್ದಾರೆ ಹಾಗೂ ಹೇರ್‌ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. 

ತಮ್ಮನ ರೂಪದಲ್ಲಿ ಕಾಣಿಸಿಕೊಂಡು ಬರ್ತ್ ಡೇ ವಿಶ್ ಮಾಡಿದ ಪರಿಣೀತಿ ಚೋಪ್ರಾ!

ಚಿತ್ರತಂಡದಿಂದ ಅಧಿಕೃತ ಪೋಸ್ಟರ್ ರಿಲೀಸ್ ಅಗಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವು ವರ್ಷಗಳ ನಂತರ ಒಂದೊಳ್ಳೆ ಸಿನಿಮಾ ಆಯ್ಕೆ ಮಾಡಿಕೊಂಡಿದ್ದೀರಾ ಎಂದು ನೆಟ್ಟಿಗರು ಕಮ್ ಬ್ಯಾಕ್‌ಗೆ ಹೃದಯಪೂರ್ವಕವಾಗಿ ಸ್ವಾಗತ ಮಾಡಿದ್ದಾರೆ.

ಎರಡು ಸಾರಿ ಎತ್ತಿ ಮುದ್ದಾಡಿದ ಸಿದ್ಧಾರ್ಥ, ಪಾಪ ಪರಿಣಿತಿ ಅವಸ್ಥೆ! ವಿಡಿಯೋ 

ಈ ಹಿಂದೆ 'ಸೈನಾ' ಬಯೋಪಿಕ್‌ನಲ್ಲಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು ಆದರೆ ಕಾರಣಾಂತರಗಳಿಂದ ಪರಿಣೀತಿ ಆಯ್ಕೆ ಆದರು. ಕೆಲ ಮೂಲಗಳ ಪ್ರಕಾರ 2021ರಲ್ಲಿ ಸಿನಿಮಾ ತೆರೆ ಕಾಣಲಿದೆ.